Smartphone: 7 ಇಂಚಿನ ಸ್ಕ್ರೀನ್‌ನೊಂದಿಗೆ ಬರುತ್ತಿದೆ ಜಬರ್ದಸ್ತ್ ಸ್ಮಾರ್ಟ್‌ಫೋನ್, 2 ದಿನಗಳವರೆಗೆ ಬಾಳಿಕೆ ಬರುತ್ತೆ ಬ್ಯಾಟರಿ, ಇಲ್ಲಿದೆ ವೈಶಿಷ್ಟ್ಯ

ಹಾನರ್ ಶೀಘ್ರದಲ್ಲೇ ಹಾನರ್ ಎಕ್ಸ್ 20 ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಬಹುದು. ಫೋನ್ ಬಗ್ಗೆ ಕಂಪನಿಯು ಏನನ್ನೂ ಹೇಳಿಲ್ಲ, ಆದರೆ ಅದರ ಬಗ್ಗೆ ಅನೇಕ ಮಾಹಿತಿಗಳು ಸೋರಿಕೆಯಾಗಿವೆ. ಇದರ ಡಿಸ್ಪ್ಲೇ ತುಂಬಾ ದೊಡ್ಡದಾಗಿರುತ್ತದೆ ಮತ್ತು ಇದು 6000mAH ಸಾಮರ್ಥ್ಯದ ಬ್ಯಾಟರಿಯನ್ನೂ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಹಾನರ್ ಎಕ್ಸ್ 20 ಮ್ಯಾಕ್ಸ್‌ನಲ್ಲಿ ಹೊಸತೇನಿದೆ ಎಂದು ತಿಳಿಯೋಣ ...  

Written by - Yashaswini V | Last Updated : Aug 30, 2021, 09:02 AM IST
  • ಹಾನರ್ ಶೀಘ್ರದಲ್ಲೇ ಹಾನರ್ ಎಕ್ಸ್ 20 ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಬಹುದು
  • ಹಾನರ್ ಎಕ್ಸ್ 20 ಮ್ಯಾಕ್ಸ್ ಬಗ್ಗೆ ಹಲವು ಮಾಹಿತಿಗಳು ಸೋರಿಕೆಯಾಗಿವೆ
  • ಇದರ ಡಿಸ್‌ಪ್ಲೇ ಸಾಕಷ್ಟು ದೊಡ್ಡದಾಗಿದ್ದು 6000mAH ಸಾಮರ್ಥ್ಯದ ಬ್ಯಾಟರಿ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ
Smartphone: 7 ಇಂಚಿನ ಸ್ಕ್ರೀನ್‌ನೊಂದಿಗೆ ಬರುತ್ತಿದೆ ಜಬರ್ದಸ್ತ್ ಸ್ಮಾರ್ಟ್‌ಫೋನ್, 2 ದಿನಗಳವರೆಗೆ ಬಾಳಿಕೆ ಬರುತ್ತೆ ಬ್ಯಾಟರಿ, ಇಲ್ಲಿದೆ ವೈಶಿಷ್ಟ್ಯ  title=
Honor X20 Max Price, Specifications

ನವದೆಹಲಿ: ಕಳೆದ ವರ್ಷ, ಹಾನರ್ ತನ್ನ ಅತಿದೊಡ್ಡ ಸ್ಮಾರ್ಟ್ ಫೋನ್ ಹಾನರ್ ಎಕ್ಸ್ 10 ಮ್ಯಾಕ್ಸ್ (Honor X10 Max) 5G ಅನ್ನು ಪರಿಚಯಿಸಿತು. ಕಂಪನಿಯು 7.09-ಇಂಚಿನ ಡಿಸ್ಪ್ಲೇ ಮತ್ತು ಡೈಮೆನ್ಸಿಟಿ 800 5G ಪ್ರೊಸೆಸರ್‌ನೊಂದಿಗೆ ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಕಂಪನಿಯ ಹಾನರ್ ಎಕ್ಸ್ 20 ಮ್ಯಾಕ್ಸ್ (Honor X20 Max) ಹೆಸರಿನ ಹೊಸ  ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು, ಈ ಫೋನ್ ದೊಡ್ಡ ಡಿಸ್ಪ್ಲೇ ಅನ್ನು ಒಳಗೊಂಡಿರುತ್ತದೆ ಎಂದು ಹೊಸ ವರದಿಯು ಬಹಿರಂಗಪಡಿಸಿದೆ. ಫೋನ್ ಬಗ್ಗೆ ಕಂಪನಿಯು ಏನನ್ನೂ ಹೇಳಿಲ್ಲ, ಆದರೆ ಅದರ ಬಗ್ಗೆ ಅನೇಕ ಮಾಹಿತಿಗಳು ಸೋರಿಕೆಯಾಗಿವೆ. ಹಾನರ್ ಎಕ್ಸ್ 20 ಮ್ಯಾಕ್ಸ್‌ನಲ್ಲಿ ಹೊಸತೇನಿದೆ ಎಂದು ತಿಳಿಯೋಣ ...

ಹಾನರ್ ಎಕ್ಸ್ 20 ಮ್ಯಾHonor X20 Max ವಿಶೇಷತೆಗಳು:
ವೀಬೊ (Weibo) ಖಾತೆಯ ಪ್ರಕಾರ @菊厂影业Fans ಅಭಿಮಾನಿಗಳು, ಹಾನರ್ ಎಕ್ಸ್ 20 ಮ್ಯಾಕ್ಸ್ (Honor X20 Max) ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಫೋನ್ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಟಿಪ್ಸ್ಟರ್ ಹಲವು ಮಾಹಿತಿಗಳನ್ನೂ ಬಹಿರಂಗಪಡಿಸಿದ್ದಾರೆ. ಇದು 7.2 ಇಂಚಿನ ಡಿಸ್ಪ್ಲೇ, 6000mAh ಬ್ಯಾಟರಿ ಮತ್ತು ಡೈಮೆನ್ಶನ್ 1100 ಪ್ರೊಸೆಸರ್ ಹೊಂದಿರುತ್ತದೆ ಎಂದು ವರದಿಗಳು ಹೇಳುತ್ತವೆ. 

ಇದನ್ನೂ ಓದಿ- Phone Battery: ನೀವೂ ಕೂಡ ನಿಮ್ಮ ಫೋನನ್ನು ಪದೇ ಪದೇ ಚಾರ್ಜ್ ಮಾಡುತ್ತೀರಾ? ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಾನರ್ ಎಕ್ಸ್ 10 ಮ್ಯಾಕ್ಸ್‌ಗೆ (Honor X10 Max) ಹೋಲಿಸಿದರೆ ಇವುಗಳೆಲ್ಲವೂ ಅಪ್‌ಗ್ರೇಡ್‌ಗಳು (ನೀವು ದೊಡ್ಡ ಡಿಸ್‌ಪ್ಲೇ ಅನ್ನು ಅಪ್‌ಗ್ರೇಡ್‌ನಂತೆ ಪರಿಗಣಿಸಿದರೆ) ಇದರ ಡಿಸ್‌ಪ್ಲೇ ಚಿಕ್ಕದಾಗಿದೆ ಮತ್ತು 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.  ದೊಡ್ಡ ಡಿಸ್‌ಪ್ಲೇ ಹೊಂದಿರುವುದರ ಹೊರತಾಗಿ, ಹಾನರ್ ಎಕ್ಸ್ 20 ಮ್ಯಾಕ್ಸ್ ಇದೇ ರೀತಿಯ ಆರ್‌ಜಿಬಿಡಬ್ಲ್ಯೂ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಸ್ಟ್ಯಾಂಡರ್ಡ್ RGB ಪ್ಯಾನೆಲ್‌ಗಳಂತಲ್ಲದೆ, RGBW ಪ್ಯಾನೆಲ್ ಕಡಿಮೆ ವಿದ್ಯುತ್ ಬಳಕೆ ಹೊಂದಿದೆ ಎಂದು ಹೇಳಲಾಗಿದೆ. ಹಾನರ್ ಈ ಬಾರಿ ಹೆಚ್ಚಿನ ರಿಫ್ರೆಶ್ ದರವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ- Smartphone: ಸ್ಮಾರ್ಟ್‌ಫೋನ್‌ನಲ್ಲಿ ಬೆಂಕಿಗೆ ಕಾರಣವಾಗುವ ಈ 10 ತಪ್ಪುಗಳ ಬಗ್ಗೆ ಇರಲಿ ಎಚ್ಚರ

ಹಾನರ್ ಎಕ್ಸ್ 20 ಮ್ಯಾಕ್ಸ್‌ನಲ್ಲಿ ಇನ್ನೇನು ಹೊಸದಾಗಿರಬಹುದು?
ಹಾನರ್ ಎಕ್ಸ್ 20 ಮ್ಯಾಕ್ಸ್‌ನಲ್ಲಿ (Honor X20 Max) ಕ್ಯಾಮರಾಗಳು, ಸ್ಪೀಕರ್‌ಗಳು ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಹಾನರ್ ಎಕ್ಸ್ 10 ಮ್ಯಾಕ್ಸ್ ಅನ್ನು 22.5W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬಿಡುಗಡೆ ಮಾಡಲಾಗುವುದು. ಹಾನರ್ ಎಕ್ಸ್ 20 ಮ್ಯಾಕ್ಸ್ ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದರೂ, ಚಾರ್ಜಿಂಗ್ ವೇಗವು ಹೆಚ್ಚಾಗುವುದು ನ್ಯಾಯೋಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಹಾನರ್ ಎಕ್ಸ್ 20 ಮ್ಯಾಕ್ಸ್ ಆಗಮನವು ಹಾನರ್ ಎಕ್ಸ್ 20 ಯನ್ನು ಪೂರ್ಣಗೊಳಿಸುತ್ತದೆ, ಇದು ಈಗಾಗಲೇ ಹಾನರ್ ಎಕ್ಸ್ 20 ಎಸ್ಇ ಮತ್ತು ಹಾನರ್ ಎಕ್ಸ್ 20 ಅನ್ನು ಒಳಗೊಂಡಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News