ನವದೆಹಲಿ: ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ (Samsung) ಬುಕ್ ಪ್ರೋ ಸೀರೀಸ್ ಲ್ಯಾಪ್ ಟಾಪ್ ನಲ್ಲಿ (Laptop) ತನ್ನ  ಅನ್ ಪಾಕ್ಡ್ 2021 ನ್ನು ಲಾಂಚ್ ಮಾಡಿದೆ. ಈ ಸೀರಿಸ್ ನಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಬುಕ್ ಪ್ರೊ  (Samsung Galaxy book Pro) ಮತ್ತು ಗೆಲಾಕ್ಸಿ ಬುಕ್ ಪ್ರೊ 360 ಲ್ಯಾಪ್ ಟಾಪ್ ಗಳು ಒಳಗೊಂಡಿವೆ. ಎರಡು ಟ್ಯಾಪ್ ಟಾಪ್ ಗಳು 13.3 ಇಂಚು ಮತ್ತು 15 ಇಂಚಿನ  ಗಾತ್ರದಲ್ಲಿವೆ.  ಹೊಸ ಮಾಡೆಲ್ ಐರಿಸ್ ಎಕ್ಸ್ ಗ್ರಾಫಿಕ್ಸ್ ಮತ್ತು 111 ನೇ ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್ ನ್ನು ಒಳಗೊಂಡಿದೆ. 


COMMERCIAL BREAK
SCROLL TO CONTINUE READING

ಬೆಲೆ : 
ಸ್ಯಾಮ್ಸಂಗ್ ಗೆಲಾಕ್ಸಿ ಬುಕ್ ಪ್ರೊ (Samsung Galaxy book Pro) ಬೆಲೆ ಸುಮಾರು 74,400 ರೂಪಾಯಿಗಳು. ಮತ್ತು ಗೆಲಾಕ್ಸಿ ಬುಕ್ ಪ್ರೊ 360 ಬೆಲೆ 89,300 ರೂಪಾಯಿಗಳಾಗಿವೆ. ಎರಡು ಲ್ಯಾಪ್ ಟಾಪ್ ಗಳ (laptop) ಪ್ರಿ ಬುಕ್ಕಿಂಗ್ ಶುರುವಾಗಿದೆ. ಮೂರು ಕಲರ್ ಅಪ್ಶನ್ ನಲ್ಲಿ ಈ ಲಾಪ್ ಟ್ಯಾಪ್ ಸಿಗಲಿದೆ. 


ಇದನ್ನೂ ಓದಿ : Internet Speed: ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿದರೆ ಸಾಕು


ಸ್ಯಾಮ್ಸಂಗ್ (Samsung) ಗೆಲಾಕ್ಸಿ ಬುಕ್ ಪ್ರೊ 15 ಸ್ಕ್ರೀನ್ ಸೈಜ್ 15 ಇಂಚು ಇದೆ. ಎರಡೂ ಲ್ಯಾಪ್ ಟಾಪ್ ಗಳು ಫುಲ್ ಹೆಚ್ ಡಿ ಆಗಿವೆ. ಎರಡರಲ್ಲೂ 11ನೇ ಜನರೇಶನ್ ಇಂಟೆಲ್ ಕೋರ್ ಐ7 ಪ್ರೊಸೆಸರ್ ಇದೆ. ಇಂಟೆಲ್ ಐರಿಸ್ ಎಕ್ಸ್ ಇ ಗ್ರಾಫಿಕ್ಸ್ ಇದೆ. 32 ಜಿಬಿ LPDDR4x RAM ಬೆಂಬಲ ಇದೆ.  ಕನೆಕ್ಟಿವಿಟಿ ಬಗ್ಗೆ ಮಾತನಾಡಿದರೆ WiFi 6, ಬ್ಲೂಟೂತ್ 5.1, ಥಂಡರ್ ಬೋಲ್ಟ್ 4, ಯುಎಸ್‍ಬಿ ಟೈಪ್-ಸಿ, ಯುಎಸ್‍ಬಿ 3.2 ಮತ್ತು 3.5 ಎಂಎಂ ಹೆಡ್ ಫೋನ್/ಮೈಕ್ರೊಫೋನ್ ಕಾಂಬೋ ಜ್ಯಾಕ್ ಸಪೋರ್ಟ್ ಸಿಗುತ್ತದೆ.  ಎಲ್ ಟಿಇ ವೇರಿಯೆಂಟ್ ಮತ್ತು ನ್ಯಾನೋ ಸಿಮ್ ಕಾರ್ಡ್ ಸ್ಲಾಟ್ ಕೂಡಾ ಇದೆ.


ಬ್ಯಾಟರಿ :
 ಇದರಲ್ಲಿ 68 ಡಬ್ಲು ಹೆಚ್‍ಆರ್ ಬ್ಯಾಟರಿ ಇದೆ. ಎರಡೂ ಲ್ಯಾಪ್ ಟಾಪಿನಲ್ಲಿ 65 ಡಬ್ಲು ಯುಎಸ್‍ಬಿ ಟೈಪ್ ಸಿ ಫಾಸ್ಟ್ ಚಾರ್ಜರ್ ಇರುತ್ತದೆ. ಗೆಲಾಕ್ಸಿ ಬುಕ್ ಪ್ರೊ ಮಾಡೆಲ್ ನಲ್ಲಿ ಒಂದು ಪ್ರೊ ಕೀಬೋರ್ಡ್ (Keyboard) ಇರುತ್ತದೆ. ಲ್ಯಾಪ್ ಟಾಪ್ ನಲ್ಲಿ ಫಿಂಗರ್ ಪ್ರಿಂಟ್ ರೀಡರ್ ಇದೆ.


ಇದನ್ನೂ ಓದಿ : ಈ ಟೆಕ್ನಿಕ್ ನಿಂದ ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದವರಿಗೂ ಮೇಸೇಜ್ ಕಳುಹಿಸುವುದು ಸಾಧ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.