ಈ ಟೆಕ್ನಿಕ್ ನಿಂದ ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದವರಿಗೂ ಮೇಸೇಜ್ ಕಳುಹಿಸುವುದು ಸಾಧ್ಯ

ಕೆಲವೊಮ್ಮೆ ಚಾಟ್ ಗಳಿಂದ ಜನ ತಪ್ಪು ಕಲ್ಪನೆಗೆ ಒಳಗಾಗುವ ಸನ್ನಿವೇಶ ಕೂಡಾ ಎದುರಾಗುತ್ತದೆ. ಈ ಸಂದರ್ಭದಲ್ಲಿ, ನಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೇ ಆಗಿರಬಹುದು ನಮ್ಮನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿ ಬಿಡಬಹುದು.

Written by - Ranjitha R K | Last Updated : Apr 28, 2021, 02:56 PM IST
  • ಬಹಳ ಸಮಯದಿಂದ ವಾಟ್ಸಾಪ್ ಜನರ ನೆಚ್ಚಿನ ಚಾಟಿಂಗ್ ಅಪ್ಲಿಕೇಶನ್
  • ಕೆಲವೊಮ್ಮೆ ಚಾಟ್ ಗಳಿಂದ ಜನ ತಪ್ಪು ಕಲ್ಪನೆಗೆ ಒಳಗಾಗುವ ಸನ್ನಿವೇಶ ಕೂಡಾ ಎದುರಾಗುತ್ತದೆ
  • ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ ತಿಳಿಯಿರಿ
ಈ  ಟೆಕ್ನಿಕ್ ನಿಂದ ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿದವರಿಗೂ ಮೇಸೇಜ್ ಕಳುಹಿಸುವುದು ಸಾಧ್ಯ  title=
ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ ತಿಳಿಯಿರಿ (file photo)

ವದೆಹಲಿ: ಬಹಳ ಸಮಯದಿಂದ ವಾಟ್ಸಾಪ್ (Whatsapp)ಜನರ ನೆಚ್ಚಿನ ಚಾಟಿಂಗ್ ಅಪ್ಲಿಕೇಶನ್ ಆಗಿದೆ. ಒಮ್ಮೊಮ್ಮೆ  ಈ ಚಾಟ್‌ಗಳಿಂದ ಜನ ತೊಂದರೆಗೆ ಒಳಗಾಗುವುದೂ ಇದೆ. ಇನ್ನು ಕೆಲವೊಮ್ಮೆ ಚಾಟ್ ಗಳಿಂದ ಜನ ತಪ್ಪು ಕಲ್ಪನೆಗೆ ಒಳಗಾಗುವ ಸನ್ನಿವೇಶ ಕೂಡಾ ಎದುರಾಗುತ್ತದೆ. ಈ ಸಂದರ್ಭದಲ್ಲಿ, ನಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೇ ಆಗಿರಬಹುದು ನಮ್ಮನ್ನು ವಾಟ್ಸ್ ಆಪ್ ನಲ್ಲಿ ಬ್ಲಾಕ್ ಮಾಡಿ ಬಿಡಬಹುದು. ಹೀಗೆ ಬ್ಲಾಕ್ (Block) ಮಾಡಿದರೆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಕೂಡಾ ಅವಕಾಶ ಇಲ್ಲದಂತಾಗುತ್ತದೆ. ಅಂದರೆ, ನಮ್ಮ ವಿಚಾರವನ್ನು ಅವರ ಮುಂದಿಡುವ ಆಯ್ಕೆ ಕೂಡಾ ಇಲ್ಲವಾಗುತ್ತದೆ. ಒಂದು ವೇಳೆ ಹೀಗಾದರೆ ಇದಕ್ಕೂ ಉಪಾಯವಿದೆ. ಬ್ಲಾಕ್ ಮಾಡಿದ ಮೇಲೂ ಬ್ಲಾಕ್ ಮಾಡಿದ ವ್ಯಕ್ತಿಗೆ ಮೆಸೇಜ್ ಕಳುಹಿಸುವುದು ಸಾಧ್ಯವಾಗುತ್ತದೆ.

ಹಾಗಿದ್ದರೆ ಬ್ಲಾಕ್ ಮಾಡಿದವರಿಗೆ ಮೆಸೇಜ್ ಮಾಡುವುದು ಹೇಗೆ? 
-ನಿಮ್ಮನ್ನು ವಾಟ್ಸ್ ಆಪ್ ನಲ್ಲಿ (Whatsapp) ಬ್ಲಾಕ್ ಮಾಡಿದವರಿಗೆ ನೀವು ಮೆಸೇಜ್ ಮಾಡಬೇಕಾದರೆ ಅದಕ್ಕೆ ನೀವು ನಿಮ್ಮ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕು. 
-ನಿಮ್ಮ ಸ್ನೇಹಿತ ಅಥವಾ ಕುಟುಂಬದ ಯಾವುದಾದರೂ ಸದಸ್ಯರ ಸಹಾಯದಿಂದ ದು ವಾಟ್ಸ್ ಆಪ್ ಗ್ರೂಪ್ (Whatsapp group) ಮಾಡಲು ಹೇಳಿ
-- ಆ ಗ್ರೂಪಿನಲ್ಲಿ ನೀವು, ನಿಮ್ಮನ್ನು ಬ್ಲಾಕ್ ಮಾಡಿದ ನಿಮ್ಮ ಗೆಳೆಯ ಅಥವಾ ಗೆಳೆತಿಯನ್ನು ಕೂಡಾ ಸೇರಿಸಲು ಹೇಳಿ
-ಇಷ್ಟಾದ ನಂತರ ಗ್ರೂಪ್ ಮಾಡಿದ ನಿಮ್ಮ ಸ್ನೇಹಿತ ಅಥವಾ ಕುಟುಂಬ ಸದಸ್ಯ ಗ್ರೂಪ್ ನಿಂದ ಎಕ್ಸಿಟ್ ಆಗಬೇಕು
-ಈಗ  ಗ್ರೂಪಿನಲ್ಲಿ ನೀವು ಮತ್ತು ನಿಮ್ಮನ್ನು ಬ್ಲಾಕ್ (Block) ಮಾಡಿರುವ ವ್ಯಕ್ತಿ ಮಾತ್ರ ಉಳಿದುಕೊಳ್ಳುತ್ತೀರಿ. 
-ಈ ರೀತಿ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿ ಜೊತೆ ನೀವು ಚಾಟ್ ಮಾಡಬಹುದು. 

ಇದನ್ನೂ ಓದಿ ಇಂದು ಭಾರತದಲ್ಲಿ ಲಾಂಚ್ ಆಗಲಿದೆ Samsung Galaxy M42 5G

ವಾಟ್ಸಾಪ್ ನ ಹೊಸ ಫೀಚರ್:
ವಾಟ್ಸಾಪ್ ನ ಹೊಸ ಫೀಚರ್  (Whatsapp  features) ಪ್ರಕಾರ  24 ಗಂಟೆಗಳ ಅಥವಾ ಏಳು ದಿನಗಳ ನಂತರ ಮೆಸೇಜ್ ಡಿಲೀಟ್ ಆಗುತ್ತದೆ. ಅಂದರೆ,  ಮೆಸೇಜ್ 7 ದಿನಗಳ ನಂತರ ಡಿಲೀಟ್ ಆಗಬೇಕೆ ಅಥವಾ 24 ಗಮಟೆಯ ನಂತರ ಡಿಲಿಟ್ ಆಗಬೇಕೇ ಎಂಬುದನ್ನು ಬಳಕೆದಾರ ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ ಡಿಸ್ ಅಪಿಯರಿಂಗ್ (Disappearing Messages) ಫೀಚರ್ ಅನ್ನು ಬಂದ್ ಮಾಡಿಟ್ಟುಕೊಂಡರೆ, ನೀವು ಡಿಲೀಟ್ (delete) ಮಾಡದ ಹೊರತು ಮೆಸೇಜ್ ಡಿಲೀಟ್ ಆಗುವುದಿಲ್ಲ. ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಫೀಚರ್ ಬರಲಿದೆ. ಸದ್ಯಕ್ಕೆ ಇದರ ಟೆಸ್ಟಿಂಗ್ ನಡೆಯುತ್ತಿದ್ದು ಶೀಘ್ರದಲ್ಲೇ ಈ ಫೀಚರ್ ಹೊರಬರಲಿದೆ.

ಇದನ್ನೂ ಓದಿ 5,000mAh ಬ್ಯಾಟರಿಯೊಂದಿಗೆ ಲಾಂಚ್ ಆಗಿದೆ Oppo A53s, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News