Samsung Galaxy S20 FE: ನಾಳೆ ಭಾರತದಲ್ಲಿ ಬಿಡುಗಡೆಯಾಗಲಿದೆ Samsung Galaxy S20 FE 5G ಆವೃತ್ತಿ
Samsung Galaxy S20 FE 5G - ಸ್ಯಾಮ್ಸಂಗ್ ತನ್ನ ಗ್ಯಾಲಕ್ಸಿ ಎಸ್ 20 ಎಫ್ಇ ಯ 5 ಜಿ ರೂಪಾಂತರವನ್ನು ನಾಳೆ ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ 4 ಜಿ ಮಾದರಿಯ ಮುಂದಿನ ಆವ್ರುತ್ತಿಯಾಗಿದೆ. ಹಾಗಾದರೆ ಈ ಫೋನ್ ನ ವೈಶಿಷ್ಟ್ಯಗಳ ಕುರಿತು ಒಮ್ಮೆ ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: Samsung Galaxy S20 FE 5G - ರಿಯನ್ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾಗಿರುವ Samsung ಇತ್ತೀಚೆಗಷ್ಟೇ ತನ್ನ Galaxy S20 FE ಸ್ಮಾರ್ಟ್ಫೋನ್ ನ 5G ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಬಹಿರಂಗಗೊಳಿಸಿತ್ತು. ಆದರೆ, ಇದೀಗ ಸ್ಯಾಮ್ಸಂಗ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ನೂತನ Galaxy S20 FE 5G, ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿರುವ Samsung Galaxy S20 FE 4Gಯ ಸುಧಾರಿತ ಆವೃತ್ತಿಯಾಗಿರಲಿದೆ.
ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಮಾಹಿತಿ ಪ್ರಕಟಿಸಿರುವ ಕಂಪನಿ, Samsung Galaxy S20 FE 5G ಆವೃತ್ತಿಯನ್ನು ಮಾರ್ಚ್ 30 ರಂದು ಅಂದರೆ ನಾಳೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಜೊತೆಗೆ ನಾಳೆಯೇ ಭಾರತದಲ್ಲಿ ಸೆಲ್ ಆಯೋಜಿಸಿ ಈ ಫೋನ್ ಮಾರಾಟ ಮಾಡಲಾಗುವುದು ಎಂದು ತಿಳಿದಿದೆ.
5G ಸಪೋರ್ಟ್ ಹೊರತಾಗಿ ಈ ನೂತನ S20 FE ಸ್ಮಾರ್ಟ್ ಫೋನ್ Qualcomm Snapdragon ಚೀಪ್ ನೊಂದಿಗೆ ಬರುವ ಸಾಧ್ಯತೆ ಇದೆ. ಇದರ ಹಿಂದಿನ 4G ಆವೃತ್ತಿಯಲ್ಲಿ Exynos 990 ಚಿಪ್ ಬಳಸಲಾಗಿತ್ತು.
Mobile Users: ಮೊಬೈಲ್ ಬಳಕೆದಾರರೇ ಎಚ್ಚರ: ಅಪ್ಪಿತಪ್ಪಿಯೂ 'ಈ ಅಪ್ಲಿಕೇಶನ್' ಡೌನ್ಲೋಡ್ ಮಾಡಬೇಡಿ!
ಈ ಫೋನ್ ಕ್ಯಾಮೆರಾ ಸಾಮರ್ಥ್ಯದ ಕುರಿತು ಹೇಳುವುದಾದರೆ, ಈ ಫೋನ್ ನ ಹಿಂಭಾಗದಲ್ಲಿ 12MP ಮೇನ್ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಲೆನ್ಸ್ ಹಾಗೂ 8 MP ಟೆಲಿಫೋಟೋ ಲೆನ್ಸ್ ನ ಮೂರು ಕ್ಯಾಮೆರಾಗಳಿವೆ. ಈ ಫೋನ್ ನ ಮುಂಭಾಗದಲ್ಲಿ 32MP ಸಾಮರ್ಥ್ಯದ ಸೆಲ್ಫಿ ಕ್ಯಾಮರಾ ನೀಡಲಾಗಿದೆ. ಪೋರ್ಟ್ರೇಟ್ ಮೋಡ್ ಹಾಗೂ ನೈಟ್ ಮೋಡ್, 30 X ಸ್ಪೇಸ್ ಝೂಮ್, ಸಿಂಗಲ್ ಟೇಕ್ ವೈಶಿಷ್ಟ್ಯ ಇತ್ಯಾದಿಗಳು ಈ ಕ್ಯಾಮರಾ ಒಳಗೊಂಡಿದೆ.
ಇದನ್ನೂ ಓದಿ-Google WifiNanScan App: Googleನಿಂದ ಅತ್ಯದ್ಭುತ App ಬಿಡುಗಡೆ, ಇಂಟರ್ನೆಟ್ ಇಲ್ಲದೆಯೂ ಎಲ್ಲಾ ಕೆಲಸ ಮಾಡಬಹುದು
ನಾಳೆ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ ಫೋನ್ ನಲ್ಲಿ 4500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ನೀಡಲಾಗಿದ್ದು 15W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ. ಈ ಫೋನ್ Samsung One UI 3.0 ಆಧಾರಿತ Android 11 ಸಂಚಾಲಿತವಾಗಿದೆ. Galaxy S20 FE ಫಿಂಗರ್ ಪ್ರಿಂಟ್ ಸ್ಕಾನರ್, IP68 ವಾಟರ್ ರೆಸಿಸ್ಟಂಟ್ ವೈಶಿಷ್ಟ್ಯ ಒಳಗೊಂಡಿದೆ. ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಬೆಲೆಯ ಕುರಿತು ಹೇಳುವುದಾದರೆ, ಇದು ಭಾರತೀಯ ಮಾರುಕಟ್ಟೆಯಲ್ಲಿ 50,000 ಪ್ರೈಸ್ ರೇಂಜ್ ನಲ್ಲಿರಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.