Samsung ನಿಂದ ಮತ್ತೊಂದು ಬೊಂಬಾಟ್ ಫೋನ್: 7,000mAh ಬ್ಯಾಟರಿ, 64MP ಕ್ಯಾಮೆರಾ!

ಸ್ಯಾಮ್ಸಂಗ್ ಗ್ಯಾಲಕ್ಸಿ M62 ಸ್ಮಾರ್ಟ್ಫೋನ್ ಒಟ್ಟು ಮೂರು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ.

Last Updated : Mar 22, 2021, 02:41 PM IST
  • ಸ್ಯಾಮ್ಸಂಗ್ ಕಂಪೆನಿ ಭಾರತದಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
  • ಸ್ಯಾಮ್ಸಂಗ್ ಗ್ಯಾಲಕ್ಸಿ M62 ಸ್ಮಾರ್ಟ್ಫೋನ್ ಒಟ್ಟು ಮೂರು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ.
  • ಈ ಮೊಬೈಲ್ ಅನ್ನು ಥೈಲಾಂಡ್ನಲ್ಲಿ ಬಿಡುಗಡೆ ಮಾಡಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.
Samsung ನಿಂದ ಮತ್ತೊಂದು ಬೊಂಬಾಟ್ ಫೋನ್: 7,000mAh ಬ್ಯಾಟರಿ, 64MP ಕ್ಯಾಮೆರಾ! title=

ಗ್ಯಾಜೆಟ್ ಮತ್ತು ಮೊಬೈಲ್ ಲೋಕದಲ್ಲಿ ಜನಪ್ರಿಯವಾಗಿರುವ, ಜಾಗತಿಕ ಮಾರುಕಟ್ಟೆಯಲ್ಲಿಯೂ ಉತ್ತಮ ಮನ್ನಣೆ ಸಾಧಿಸಿರುವ ಸ್ಯಾಮ್ಸಂಗ್ ಕಂಪೆನಿ ಭಾರತದಲ್ಲಿ ಹೊಸ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕಳೆದ ವಾರ ಅತಿ ಕಡಿಮೆ ಬೆಲೆಗೆ ಗ್ಯಾಲಕ್ಸಿ M12 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿ ದಾಖಲೆ ಬರೆದಿದ್ದ ಸ್ಯಾಮ್ಸಂಗ್ ಸದ್ಯ ತನ್ನ M ಸಿರೀಸ್ನ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ M62 ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ರಿಲೀಸ್ ಮಾಡಲು ಮುಂದಾಗಿದೆ.

ಬ್ಯಾಟರಿ ಪವರ್ ಹಾಗೂ ಕ್ಯಾಮೆರಾದಿಂದಲೇ ಮೊಬೈಲ್ ಪ್ರಿಯರ ಗಮನ ಸೆಳೆದಿರುವ ಈ ಸ್ಮಾರ್ಟ್ಫೋನ್ ಈಗಾಗಲೇ ಭಾರತದ ರಾಷ್ಟ್ರೀಯ ಗುಣಮಟ್ಟದ ಸಂಸ್ಥೆ(Bureau of Indian Standards) ಯಿಂದ ಅನುಮತಿ ಪಡೆದಿದೆ.

ನಿಮಗೆ ಗೊತ್ತಿಲ್ಲದಂತೆ ಯಾರಾದರು ನಿಮ್ಮ whatsapp DP ನೋಡುತ್ತಿದ್ದಾರಾ ಹೀಗೆ ತಿಳಿಯಿರಿ

ಸ್ಯಾಮ್ಸಂಗ್ ಗ್ಯಾಲಕ್ಸಿ M62(Samsung Galaxy M62 5G) ಸ್ಮಾರ್ಟ್ಫೋನ್ ಒಟ್ಟು ಮೂರು ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ. ಕಪ್ಪು, ನೀಲಿ ಮತ್ತು ಹಸಿರು ಕಲರ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಈ ಮೊಬೈಲ್ ಅನ್ನು ಥೈಲಾಂಡ್ನಲ್ಲಿ ಬಿಡುಗಡೆ ಮಾಡಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಇದು ಇತ್ತೀಚೆಗಷ್ಟೆ ಭಾರತದಲ್ಲಿ ಬಿಡುಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ F62 ಸ್ಮಾರ್ಟ್ ಫೋನಿನ ಹೊಸ ಆವೃತ್ತಿ ಆಗಿದೆ.

NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ

ಇನ್ನೂ M62 ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಕಂಪೆನಿ(Samsung Company)ಯ ಆಕ್ಟಾಕೋರ್ Exynos 9825 ಪ್ರೊಸೆಸರ್ ಅನ್ನು ಹೊಂದಿದೆ. 6.7 ಇಂಚಿನ ಫುಲ್ ಎಚ್ಡಿ ಡಿಸ್ಲೇಯ ದೊಡ್ಡ ಸ್ಕ್ರೀಸ್ ಇದೆ. 8GB RAM ಜೊತೆಗೆ 128 GB ಹಾಗೂ 256 GB ಸ್ಟೋರೆಜ್ ಆಯ್ಕೆಯಿದ್ದು, ಗರಿಷ್ಠ 1TB ವರೆಗೆ ವಿಸ್ತಿರಿಸಲು ಅವಕಾಶವಿದೆ. ಹೀಗಾಗಿ ಯಾವುದೇ ಸಂದರ್ಭದಲೂ ಸ್ಟೋರೇಜ್‌ ಸಮಸ್ಯೆ ಕಾಡುವ ಸಾಧ್ಯತೆಯಿಲ್ಲ.

Samsung Galaxy M12: ಮಾರಾಟದ ಎಲ್ಲ ದಾಖಲೆಗಳನ್ನು ಮುರಿದು Amazon ನಲ್ಲಿ No.1 ಪಟ್ಟ ಅಲಂಕರಿಸಿದ ಸ್ಮಾರ್ಟ್ ಫೋನ್

ಎರಡು ಸಿಮ್ ಸ್ಲಾಟ್ ಇದ್ದು ಪಿಂಗರ್ಪ್ರಿಟ್ ಸೆನ್ಸಾರ್ ಆಯ್ಕೆಯನ್ನು ನೀಡಲಾಗಿದೆ. ಗ್ಯಾಲಕ್ಸಿ M62 ನಲ್ಲಿರುವ 64MP Quad Camera ನೀಡಲಾಗಿದ್ದು, ನೀವು ಯಾವುದೇ ಸಂದರ್ಭದಲ್ಲಿದ್ದರೂ, ಅತ್ಯದ್ಭುತವಾದ ಫೊಟೋಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತದೆ. 64MP Main ಕ್ಯಾಮರಾ, 12MP Ultra-wide ಲೆನ್ಸ್‌, 5MP Depth ಕ್ಯಾಮರಾ, ಹಾಗೂ 5MP Macro ಕ್ಯಾಮರಾವಿದ್ದು, ಇವಲ್ಲವೂ ಮಾರುಕಟ್ಟೆಯಲ್ಲಿ ಈಗಾಗಲೇ ಬೆಸ್ಟ್‌ ಎಂದೇ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ತೆಗೆದ ಫೋಟೋಗಳು ನಿಮ್ಮ ಸೋಷಿಯಲ್‌ ಮೀಡಿಯಾ ವಾಲ್‌ಗಳಲ್ಲಿ ಹೆಚ್ಚಿನ ಲೈಕ್ಸ್‌ ತಂದುಕೊಡುವುದು ಖಚಿತ. ಇದರೊಂದಿಗೆ 32MP ಸೆಲ್ಫಿ ಕ್ಯಾಮರಾ ನೀಡಲಾಗಿದ್ದು, ನಿಮ್ಮ ಸೆಲ್ಫೀ ಸೆಷನ್‌ನ್ನು ಪರ್ಫೆಕ್ಟ್‌ ಆಗಿಸುತ್ತದೆ. ಇದಲ್ಲದೆ Night Mode ಹಾಗೂ Single Take ಫೀಚರ್‌ ಸಹ ಸ್ಮಾರ್ಟ್‌ಫೋನ್‌ ವಿಶೇಷತೆ.

ಒಮ್ಮೆಗೆ ಡೌನ್ ಆದ Facebook, WhatsApp, Instagram- ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹ

ಬರೋಬ್ಬರಿ 7,000mAh ಬ್ಯಾಟರಿ ಪವರ್ ಹೊಂದಿರುವ ಈ ಸ್ಮಾರ್ಟ್ಫೋನ್ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ. ಭಾರತದಲ್ಲಿ ಇದರ ಬೆಲೆ 23,999 ರೂ. ಇರಬಹುದೆಂದೆ ಅಂದಾಜಿಸಲಾಗಿದೆ.

ಪರ್ಫಾಮೆನ್ಸ್‌     Qualcomm Snapdragon 765 - 7 nm
ಡಿಸ್‌ಪ್ಲೇ     6.7 inches (17.01 cm)
ಸ್ಟೋರೇಜ್‌     256 GB
ಕ್ಯಾಮರಾ     64 MP + 12 MP + 5 MP + 5 MP
ಬ್ಯಾಟರಿ     5000 mAh
ಭಾರತದಲ್ಲಿ ಬೆಲೆ   33290
ರ‍್ಯಾಮ್     8 GB, 8 GB

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News