ನವದೆಹಲಿ:  ಸ್ಯಾಮ್‌ಸಂಗ್ ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಫ್ಯಾನ್ ಎಡಿಷನ್ ಸ್ಮಾರ್ಟ್‌ಫೋನ್ (Smartphone) ಅನ್ನು ಬಿಡುಗಡೆ ಮಾಡಿದೆ. ಈ ಎಸ್ ಸರಣಿಯ ಫ್ಯಾನ್ ಎಡಿಷನ್ ಫೋನ್ ಅನ್ನು 699 ಡಾಲರ್ ಅಂದರೆ 51,400 ರೂಪಾಯಿ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಜೊತೆಗೆ ಹೋಲ್-ಪಂಚ್ ಡಿಸ್ಪ್ಲೇ ಹೊಂದಿದೆ.


COMMERCIAL BREAK
SCROLL TO CONTINUE READING

ಕಿರಿಯ ಗ್ರಾಹಕರನ್ನು ಆಕರ್ಷಿಸಲು ಫೋನ್ ಅನ್ನು ಹಲವಾರು ಬಣ್ಣ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ (ಕ್ಲೌಡ್ ನೇವಿ ಬ್ಲೂ, ಲ್ಯಾವೆಂಡರ್, ಕೆಂಪು, ಕಿತ್ತಳೆ, ಬಿಳಿ ಮತ್ತು ಪುದೀನ). ಗ್ಯಾಲಕ್ಸಿ ಎಸ್ 20 ಸರಣಿಯಂತೆಯೇ ಗ್ರಾಹಕರಿಗೆ ಅನುಭವವನ್ನು ನೀಡಲು ಸ್ಯಾಮ್‌ಸಂಗ್ (Samsung) ಈ ಫೋನ್ ಅನ್ನು 120Hz ರಿಫ್ರೆಶ್ ರೇಟ್ ಡಿಸ್ಪ್ಲೇ ಜೊತೆಗೆ ಪರಿಚಯಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ 4 ಜಿ ಮತ್ತು 5 ಜಿ ಎರಡೂ ರೂಪಾಂತರಗಳಲ್ಲಿ ಬರುತ್ತದೆ. ಈ ಫೋನ್‌ನ ಸೆಲ್ ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿದ್ದು ಈಗಿನಿಂದಲೇ ಪ್ರೀ-ಬುಕಿಂಗ್ ಮಾಡಬಹುದು. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಿಂದ ಖರೀದಿಸಬಹುದು.


10 ವರ್ಷ ಹಳೆಯ ವಿನ್ಯಾಸದಲ್ಲಿ ಐಫೋನ್ 12! ಬೆಲೆ ಐಫೋನ್ 11ಕ್ಕಿಂತ ಕಡಿಮೆಯಿರಬಹುದು


ಗ್ಯಾಲಕ್ಸಿ ಎಸ್ 20 ಎಫ್‌ಇಯ ವಿಶೇಷಣಗಳು:
ಈ ಫೋನ್ 6.5-ಇಂಚಿನ ಪೂರ್ಣ-ಎಚ್ಡಿ + (1,080x2,400 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್ಪ್ಲೇ ಹೊಂದಿದೆ. ಇದು ಡ್ಯುಯಲ್ ಸಿಮ್ (ನ್ಯಾನೋ + ಇಎಸ್ಐಎಂ) ಅನ್ನು ಬೆಂಬಲಿಸುತ್ತದೆ ಮತ್ತು ಆಂಡ್ರಾಯ್ಡ್ 10 ಆಧಾರಿತ ಒನ್ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸ್ಕ್ರೀನ್ ರಿಫ್ರೆಶ್ ದರವನ್ನು 120Hz ಹೊಂದಿದೆ. ಡಿಸ್ಪ್ಲೇ  ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ನೊಂದಿಗೆ ರಕ್ಷಿಸಲಾಗಿದೆ. ಗ್ಯಾಲಕ್ಸಿ ಎಸ್ 20 ಎಸ್‌ಇಯ 4 ಜಿ ರೂಪಾಂತರವು ಆಕ್ಟಾ-ಕೋರ್ ಎಕ್ಸಿನೋಸ್ 990 SoC ಅನ್ನು ಹೊಂದಿದ್ದರೆ, 5 ಜಿ ರೂಪಾಂತರವು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 SoC ಯೊಂದಿಗೆ ಬರುತ್ತದೆ. ಫೋನ್ ಅನ್ನು 6 ಜಿಬಿ ಮತ್ತು 8 ಜಿಬಿ ರಾಮ್ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ.


ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ (Samsung Galaxy S20 FE) ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ರಿಯರ್ ಪೆನಾಲ್ 12 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ. ಇದು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಮತ್ತು 8 ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಮುಂಭಾಗದ ಕ್ಯಾಮೆರಾವು ಆಟೋಫೋಕಸ್ ಬೆಂಬಲವನ್ನು ಸಹ ಹೊಂದಿದೆ.


#MadeInIndia:ಮೈಕ್ರೊಮ್ಯಾಕ್ಸ್ ಪುನರಾಗಮನಕ್ಕೆ ನಡೆದಿದೆ ಭರ್ಜರಿ ಸಿದ್ಧತೆ


ಈ ಫೋನ್ 256GB ವರೆಗೆ UFS 3.1 ಸಂಗ್ರಹವನ್ನು ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 ಎಫ್‌ಇ ಫೋನ್ IP68 ರೇಟೆಡ್ ನೊಂದಿಗೆ ಬರುತ್ತದೆ. ಇದು 4500mAh ಬ್ಯಾಟರಿಯನ್ನು ಹೊಂದಿದ್ದು ಇದು ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್‌ನ ತೂಕ 190 ಗ್ರಾಂ. ಇದೆ.


ಫೋನ್ 5 ಜಿ, 4 ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ ವಿ 05, ಜಿಪಿಎಸ್ / ಎ-ಜಿಪಿಎಸ್, ಎನ್ಎಫ್ಸಿ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ನೊಂದಿಗೆ ಬರುತ್ತದೆ. ಇದು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಹಾಲ್ ಸೆನ್ಸಾರ್ ಮತ್ತು ಸಾಮೀಪ್ಯ ಸಂವೇದಕವನ್ನು ಒಳಗೊಂಡಿದೆ. ಇದು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ. ಈ ಫೋನ್ ಎಕೆಜಿ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ.