ನವದೆಹಲಿ :   Samsung Galaxy M21 2021 Edition : ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 2021 ಆವೃತ್ತಿಯನ್ನು ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಂ 21 ಅನ್ನು ಕಳೆದ ವರ್ಷ ಬಿಡುಗಡೆ ಮಾಡಲಾಯಿತು. ಈ ವರ್ಷ ಅದರ ಅಪ್ಡೇಟೆಡ್ ವರ್ಸನ್ ಬಿಡುಗಡೆ ಮಾಡಲಾಗಿದೆ. ಈ ಫೋನ್ ನೇರವಾಗಿ ರೆಡ್‌ಮಿ ನೋಟ್ 10 ಮತ್ತು ರಿಯಾಲಿಟಿ ನಾರ್ಜೊ 30 ನೊಂದಿಗೆ ಸ್ಪರ್ಧಿಸಲಿದೆ. ಈ ಫೋನ್ ನ ಅತ್ಯಂತ ಪ್ರಮುಖ ಅಂಶವೆಂದರೆ ಇದರ ಬ್ಯಾಟರಿ. ಈ ಫೋನ್ 6000mAH ನ ಬ್ಯಾಟರಿಯೊಂದಿಗೆ ಬರುತ್ತದೆ. 


COMMERCIAL BREAK
SCROLL TO CONTINUE READING

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 2021 (Samsung Galaxy M21 2021) ಆವೃತ್ತಿಯ ವೈಶಿಷ್ಟ್ಯಗಳು :
ಈ ಫೋನ್ 4 ಜಿಬಿ RAM + 64 GB ಮತ್ತು 6 GB RAM + 128 RAM ಸ್ಟೋರೇಜ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಆರ್ಕ್ಟಿಕ್ ಬ್ಲೂ ಮತ್ತು ಚಾರ್ಕೋಲ್ ಬ್ಲ್ಯಾಕ್ ಕಲರ್ ನಲ್ಲಿ ಲಭ್ಯವಿದೆ. ಈ ಫೋನ್ ಆಂಡ್ರಾಯ್ಡ್ 11 ಆಧಾರಿತ One UI Coreನಲ್ಲಿ ಕಾರ್ಯನಿರ್ವಹಿಸುತ್ತದೆ.  


ಇದನ್ನೂ ಓದಿ : whatsapp photoಗಳಿಂದ ತುಂಬಿ ಹೋಗಿದೆಯಾ ನಿಮ್ಮ ಫೋನ್ ? ಹಾಗಿದ್ದರೆ ಈ ಟ್ರಿಕ್ ಬಳಸಿ


ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 2021 ಆವೃತ್ತಿ ಬೆಲೆ ಮತ್ತು ಆಫರ್ ಗಳು : 
ಈ ಫೋನ್ ಅನ್ನು ಅಮೆಜಾನ್‌ನಲ್ಲಿ (Amazon) ಖರೀದಿಸಬಹುದು. ಜುಲೈ 26 ರಂದು ಮಧ್ಯಾಹ್ನ 12 ರಿಂದ ಪ್ರೈಮ್ ಡೇ ಮಾರಾಟದಲ್ಲಿ   ಈ ಫೋನ್ ಲಭ್ಯವಾಗಲಿದೆ. 4 GB  RAM + 64 GB ಶೇಖರಣಾ ರೂಪಾಂತರದ ಬೆಲೆಯನ್ನು 12,499 ರೂ. ಎಂದು ನಿಗದಿಪಡಿಸಲಾಗಿದೆ. 6 GB  RAM  + 128 GB ಸ್ಟೋರೇಜ್ ವೆರಿಯೇಂಟ್ ನ  ಬೆಲೆ 14,499 ರೂ. ಆಗಿರುತ್ತದೆ. ಅಮೆಜಾನ್ ಹೊರತುಪಡಿಸಿ,  ಈ ಫೋನ್ ಅನ್ನು ಸ್ಯಾಮ್‌ಸಂಗ್.ಕಾಮ್ (Samsung.com) ಮತ್ತು ಇತರ ಆಫ್‌ಲೈನ್ ಸ್ಟೋರ್ ಗಳಲ್ಲಿಯೂ ಖರೀದಿಸಬಹುದು. ಇನ್ನು ಈ ಫೋನ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ, 10% ರಿಯಾಯಿತಿ ಸಿಗಲಿದೆ. 


ಕ್ಯಾಮೆರಾ :
Samsung Galaxy M21 2021 ಆವೃತ್ತಿಯು 48 ಎಂಪಿ ಪ್ರೈಮರಿ ಕ್ಯಾಮೆರಾ, 8 ಎಂಪಿ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 5 ಎಂಪಿ ಡೆಪ್ತ್ ಸೆನ್ಸಾರ್ ಹೊಂದಿದೆ. ಸೆಲ್ಫಿಗಾಗಿ ಇದರಲ್ಲಿ 20 ಎಂಪಿ ಕ್ಯಾಮೆರಾ ಇದೆ.


ಇದನ್ನೂ ಓದಿ : Xiaomiಯ 5G ಸ್ಮಾರ್ಟ್ ಫೋನ್ ಮೇಲೆ ಸಿಗುತ್ತಿದೆ ಬಂಪರ್ ಡಿಸ್ಕೌಂಟ್ ಜೊತೆಗೆ ಇಷ್ಟೆಲ್ಲಾ ಆಫರ್


ಸ್ಪೆಸಿಫಿಕೆಶನ್ :
ಫೋನ್ 6.4-ಇಂಚಿನ ಪೂರ್ಣ-ಎಚ್ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಯು ಡಿಸ್ಪ್ಲೇ ಹೊಂದಿದೆ. Mali-G72 MP3 GPU  ಮತ್ತು 6GBವರೆಗೆ LPDDR4x  RAM ನೊಂದಿಗೆ ಅಕ್ಟಾ ಕೋರ್ Exynos 9611  ಪ್ರೊಸೆಸರ್ ಅನ್ನು ನೀಡಲಾಗಿದೆ. ಇಡು 6,000mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.