ಮಾರುಕಟ್ಟೆಗೆ ಬರುತ್ತಿದೆ Samsung 5G Smartphone, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
ಅಮೆಜಾನ್ ಇಂಡಿಯಾದ ಪ್ರಮೊಶನಲ್ ಪೇಜ್ ಪ್ರಕಾರ, Samsung Galaxy M32 5G ಭಾರತದಲ್ಲಿ ಆಗಸ್ಟ್ 25 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ.
ನವದೆಹಲಿ : ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಮತ್ತು ಗ್ಯಾಲಕ್ಸಿ F42 5G ಅನ್ನು ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದಕ್ಕೂ ಮೊದಲು ಕಂಪನಿಯು ದೇಶದಲ್ಲಿ ಗ್ಯಾಲಕ್ಸಿ ಎಂ 32 5 ಜಿ ಬಿಡುಗಡೆ ಮಾಡುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಅಮೆಜಾನ್ ಇಂಡಿಯಾದಲ್ಲಿ (Amazon India) ಈ ಹ್ಯಾಂಡ್‌ಸೆಟ್‌ನ ಎಲ್ಲಾ ಪ್ರಮುಖ ಲಕ್ಷಣಗಳನ್ನು ಕಂಪನಿಯು ಈಗಾಗಲೇ ಬಹಿರಂಗಪಡಿಸಿದೆ. ಇದು ದೊಡ್ಡ ಸ್ಕ್ರೀನ್ ಜೊತೆಗೆ ಉತ್ತಮ ಕ್ಯಾಮೆರಾವನ್ನು ಹೊಂದಿರುತ್ತದೆ.
ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ Galaxy M32 5G :
ಅಮೆಜಾನ್ ಇಂಡಿಯಾದ (Amazon India) ಪ್ರಮೊಶನಲ್ ಪೇಜ್ ಪ್ರಕಾರ, Samsung Galaxy M32 5G ಭಾರತದಲ್ಲಿ ಆಗಸ್ಟ್ 25 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಫೋನಿನ ಫೋಟೋ ಜೊತೆಗೆ, ಅದರ ವೈಶಿಷ್ಟ್ಯಗಳನ್ನು ಸಹ ಹೇಳಲಾಗಿದೆ.
ಇದನ್ನೂ ಓದಿ : BSNL ಈ ಪ್ಲಾನ್ ಈಗಲೇ ರಿಚಾರ್ಜ್ ಮಾಡಿ ವರ್ಷಪೂರ್ತಿ ಸಿಗಲಿದೆ ಇಂಟರ್ನೆಟ್ ಮತ್ತು ಅನಿಯಮಿತ ಕರೆ!
ಕಂಪನಿಯೇ ದೃಢಪಡಿಸಿದೆ :
ದೇಶದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ A22 5G ನಂತೆಯೇ ಈ ಡಿವೈಸ್ 12 5G ಬ್ಯಾಂಡ್‌ಗಳು, 2 ವರ್ಷಗಳ OS ಅಪ್‌ಡೇಟ್‌ಗಳು ಮತ್ತು Knox ಸುರಕ್ಷೆಯೊಂದಿಗೆ ಬರುತ್ತದೆ ಎನ್ನುವುದನ್ನು ಕಂಪನಿ ದೃಢಪಡಿಸಿದೆ.
Galaxy M32 5G ವಿಶೇಷತೆಗಳು :
ಗ್ಯಾಲಕ್ಸಿ M32 5G 6.5-ಇಂಚಿನ HD+ TFT LCD ಪ್ಯಾನಲ್ ಅನ್ನು ಡ್ಯೂಡ್ರಾಪ್ ನಾಚ್ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ನಿಂದ ನಿಯಂತ್ರಿಸಲ್ಪಡುತ್ತದೆ, ಆದರೆ ಸ್ಟೋರೇಜ್ ವೆರಿಯೇಂಟ್ ಎಷ್ತಿರಲಿದೆ ಎನ್ನುವುದು ಇನ್ನು ರಹಸ್ಯವಾಗಿಯೇ ಉಳಿದಿದೆ.
Galaxy M32 5G ಕ್ಯಾಮೆರಾ:
ಇದರ ಹೊರತಾಗಿ, ಹ್ಯಾಂಡ್‌ಸೆಟ್ 48MP ಪ್ರೈಮರಿ ಸೆನ್ಸರ್, 8MP ಅಲ್ಟ್ರಾ-ವೈಡ್ ಯುನಿಟ್, 5MP ಮ್ಯಾಕ್ರೋ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಹೊಂದಿರುವ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕಾಲ್ ಗಳಿಗೆ, ಇದು 13MP ಸ್ನ್ಯಾಪರ್ ಅನ್ನು ಬಳಸುತ್ತದೆ.
ಇದನ್ನೂ ಓದಿ : Whatsappನಲ್ಲಿ ಈ ಎರಡು ಕೆಲಸಗಳನ್ನು ಎಂದಿಗೂ ಮಾಡಬೇಡಿ, ಇಲ್ಲವೇ ನಿಮ್ಮ ಅಕೌಂಟ್ ಬ್ಯಾನ್ ಆಗುತ್ತೆ
Galaxy M32 5Gಯ ಇತರ ವೈಶಿಷ್ಟ್ಯಗಳು :
ಸಾಧನದ ಇತರ ವೈಶಿಷ್ಟ್ಯಗಳು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್, 5,000mAh ಬ್ಯಾಟರಿ, 15W ಫಾಸ್ಟ್ ಚಾರ್ಜಿಂಗ್ ಮತ್ತು ಆಂಡ್ರಾಯ್ಡ್ 11 ಆಧಾರಿತ ಒಂದು UI ಕೋರ್ 3.1 ಅನ್ನು ಒಳಗೊಂಡಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ