ನವದೆಹಲಿ : ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 1498 ರೂ.ಗಳ ಹೊಸ ಪ್ರಿಪೇಯ್ಡ್ ವಾರ್ಷಿಕ ಡೇಟಾ ವೋಚರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಡೇಟಾ ವೋಚರ್ ದಿನಕ್ಕೆ 2 ಜಿಬಿ ಡೇಟಾದೊಂದಿಗೆ ಅನಿಯಮಿತ ವೇಗವನ್ನು ನೀಡುತ್ತದೆ. ಅಲ್ಲದೆ ವೇಗವನ್ನು 40 ಕೆಬಿಪಿಎಸ್ಗೆ ಇಳಿಸಲಾಗುತ್ತದೆ. ಈ ಯೋಜನೆ ಆಗಸ್ಟ್ 23 ರಿಂದ ಎಲ್ಲಾ ವಲಯಗಳಲ್ಲಿ ಲಭ್ಯವಿರುತ್ತದೆ. ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವ ಬಳಕೆದಾರರಿಗೆ, ಈ ಯೋಜನೆ ಉತ್ತಮವಾಗಿರುತ್ತದೆ.
ಈ ಬೆಳವಣಿಗೆಯನ್ನು ಮೊದಲು ಗಮನಿಸಿದ್ದು ಕೇರಳ ಟೆಲಿಕಾಂ ಈಗ, 1500 ರೂ.ಗಿಂತ ಹೆಚ್ಚಿನ ಡೇಟಾ ವೋಚರ್ಗಳು ಬಳಕೆದಾರರಿಗೆ ಡೇಟಾ ಪ್ಲಾನ್ಗಳನ್ನು ಮಾತ್ರ ನೀಡುತ್ತವೆ. ಏರ್ಟೆಲ್ ಮತ್ತು ವಿಐ (Airtel-Vi)ಕೂಡ ಅದೇ ಬೆಲೆಯಲ್ಲಿ ಡೇಟಾ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಅವುಗ ಈ ಕೆಳಗಿವೆ ನೋಡಿ..
ಇದನ್ನೂ ಓದಿ : Whatsappನಲ್ಲಿ ಈ ಎರಡು ಕೆಲಸಗಳನ್ನು ಎಂದಿಗೂ ಮಾಡಬೇಡಿ, ಇಲ್ಲವೇ ನಿಮ್ಮ ಅಕೌಂಟ್ ಬ್ಯಾನ್ ಆಗುತ್ತೆ
ಏರ್ಟೆಲ್ 1498 ರೂ. ಪ್ರಿಪೇಯ್ಡ್ ಪ್ಲಾನ್
ಏರ್ಟೆಲ್ ಗ್ರಾಹಕರು 1498 ರೂ. ರಿಚಾರ್ಜ್(Recharge) ಮಾಡಿದರೆ. ವ್ಯಾಲಿಡಿಟಿ 365 ದಿನಗಳ ಮತ್ತು 24GB ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ ಅನಿಯಮಿತ ಕರೆಗಳು ಮತ್ತು 3600 SMS ಗಳು ಲಭ್ಯವಿದೆ. ಈ ನಿಜವಾದ ಅನಿಯಮಿತ ಯೋಜನೆಯು ಏರ್ಟೆಲ್ ಎಕ್ಸ್ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಮತ್ತು ಆನ್ಲೈನ್ ತರಗತಿಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.
Vi 1499 ರೂ. ಪ್ರಿಪೇಯ್ಡ್ ಪ್ಲಾನ್
ಹೊಸದಾಗಿ ಮರುಬ್ರಾಂಡ್ ಮಾಡಿದ ವಿ(Vi) ವಾರ್ಷಿಕ 1499 ರೂ. ಪ್ಲಾನ್ ನೀಡುತ್ತಿದೆ. ಈ ಯೋಜನೆಯು 24 ಜಿಬಿ ಡೇಟಾ(24 GB Data)ವನ್ನು 365 ದಿನಗಳವರೆಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಈ ಪ್ಲಾನ್ ನಲ್ಲಿ 3600 ಎಸ್ಎಂಎಸ್ ಕೂಡ ಲಭ್ಯವಿದೆ. ವಿಯ ವೆಬ್ಸೈಟ್ನ ಪ್ರಕಾರ, ಈ ಯೋಜನೆಯು ಎಂಪಿಎಲ್ನಲ್ಲಿ ನಿಮ್ಮ ನೆಚ್ಚಿನ ಆಟಗಳನ್ನು ಆಡಲು ರೂ .125 ರ ಖಚಿತ ಬೋನಸ್ ನಗದು ನೀಡುತ್ತದೆ. ಈ ಯೋಜನೆಯು ನಿಯಮಗಳು ಮತ್ತು ಷರತ್ತುಗಳೊಂದಿಗೆ ಜೊಮಾಟೊದಿಂದ ಆಹಾರ ಆರ್ಡರ್ಗಳ ಮೇಲೆ ಪ್ರತಿದಿನ 75 ರೂ. ರಿಯಾಯಿತಿ ನೀಡುತ್ತದೆ.
ಇದನ್ನೂ ಓದಿ : Pixel Buds A-Series:ಗೂಗಲ್ ನಿಂದ ಪಿಕ್ಸಲ್ ಬಡ್ಸ್ ಬಿಡುಗಡೆ
Jio 2399 ರೂ. ಪ್ರಿಪೇಯ್ಡ್ ಪ್ಲಾನ್
ಈ ವಾರ್ಷಿಕ ಯೋಜನೆಯು(Jio Plans) ದಿನಕ್ಕೆ 2GB ಡೇಟಾವನ್ನು ನೀಡುತ್ತದೆ ಮತ್ತು ಒಟ್ಟು 730GB ಡೇಟಾ ನೀಡುತ್ತಿದೆ. ಈ ಯೋಜನೆಯಲ್ಲಿ ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ. ಈ ಯೋಜನೆಯಲ್ಲಿ ಅನಿಯಮಿತ ದೇಶೀಯ ಕರೆಗಳು ಲಭ್ಯವಿದೆ. ಈ ಯೋಜನೆಯು ಜಿಯೋ ಆಪ್ಗಳಿಗೆ ಪೂರಕ ಡೇಟಾವನ್ನು ನೀಡುತ್ತದೆ. ಈ ಯೋಜನೆಯ ವ್ಯಾಲಿಡಿಟಿ 365 ದಿನಗಳು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ