ನವದೆಹಲಿ: Artificial Intelligence Research - ಕೃತಕ ಬುದ್ಧಿಮತ್ತೆ ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. Artificial Intelligence ಗೆ ಸಂಬಂಧಿಸಿದಂತೆ ವಿಶ್ವಾದ್ಯಂತ ಹಲವು ಶೋಧಗಳು ನಡೆಯುತ್ತಿವೆ. ಸಾಮಾನ್ಯವಾಗಿ ಅಸಂಭವ ಎನಿಸುವ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಪೂರ್ಣಗೊಳಿಸಬಹುದು.


COMMERCIAL BREAK
SCROLL TO CONTINUE READING

ಸಂಶೋಧನೆಯೊಂದರ ಪ್ರಕಾರ Artificial Intelligence Standard ECG Testವ ಸಹಾಯದಿಂದ ಯಾವುದೇ ಒಂದು ರೋಗಿಯ ಒಂದು ವರ್ಷದ ನಂತರದ ಸಂಭಾವ್ಯ ಸಾವಿನ ಕಾರಣ ಪತ್ತೆಹಚ್ಚಬಹುದು ಎನ್ನಲಾಗಿದೆ.


ಸಂಶೋಧನೆಯಲ್ಲಿ ಬಹಿರಂಗಗೊಂಡ ಬೆಚ್ಚಿಬೀಳಿಸುವ ಮಾಹಿತಿ
ಪೆನ್ಸಿಲ್ವೇನಿಯಾದ (Pennsylvania) ಗಿಸಿಂಜರ್ ಹೆಲ್ತ್ ಸಿಸ್ಟಂನ ಸಂಶೋಧಕರು ಈ ತೀರ್ಮಾನಕ್ಕೆ ಬರಲು ಸುಮಾರು 40 ಸಾವಿರ ರೋಗಿಗಳ 1.77 ಮಿಲಿಯನ್ ECG ಟೆಸ್ಟ್ ಗಳ ಫಲಿತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ನ್ಯೂರಾಲಾಜಿಕಲ್ ನೆಟ್ವರ್ಕ್ ಮಾಡೆಲ್ (Neural Network Model) ಈ ಸಂಗತಿಗಳ ಆಧಾರದ ಮೇಲೆ ತೋರಿಸಿರುವ ಪರಿಣಾಮಗಳು ಅತ್ಯಂತ ಆಘಾತಕಾರಿಯಾಗಿವೆ ಹಾಗೂ ನಿಖರವಾಗಿವೆ.


ಇದನ್ನು ಓದಿ- News ಜಗತ್ತಿನಲ್ಲಿ ಚೀನಾದಿಂದ ಕ್ರಾಂತಿಕಾರಿ ಹೆಜ್ಜೆ, ವಿಶ್ವದ ಮೊದಲ 3D News Anchor ಅನಾವರಣ


ವೈದ್ಯರು ಸಾಮಾನ್ಯ ಇಸಿಜಿ ವರದಿ ಎಂದು ಹೇಳಿದ ರೋಗಿಗಳಲ್ಲಿಯೂ ಸಹ ಕೃತಕ ಬುದ್ಧಿಮತ್ತೆ ಸರಿಯಾದ ಸಮಸ್ಯೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಗಿಸಿಂಜರ್ ಹೆಲ್ತ್ ಸಿಸ್ಟಮ್ ನ ಇಮೇಜಿಂಗ್ ಸೈನ್ಸ್ ಮತ್ತು ಇನ್ನೋವೇಶನ್ ವಿಭಾಗದ ಅಧ್ಯಕ್ಷ ಬ್ರಾಂಡನ್ ಫೋರ್ನ್‌ವಾಲ್ಟ್, ಇದು ಈ ಅಧ್ಯಯನದ ಪ್ರಮುಖ ಆವಿಷ್ಕಾರವಾಗಿದೆ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಸಿಜಿಯ ಫಲಿತಾಂಶಗಳನ್ನು ನಿಖರವಾಗಿ ವಿಶ್ಲೇಷಿಸಲು ಇದು ನಮಗೆ ಹೆಚ್ಚು ಅನುಕೂಲಕರವಾಗಿದೆ.


ಇದನ್ನು ಓದಿ- GOOGLE ನಿಂದ ಹೊಸ ಸೇವೆ ಪರಿಚಯ, 6 ಗಂಟೆ ಮುಂಚಿತವಾಗಿ ಸಿಗಲಿದೆ ALERT


ಕೃತಕ ಬುದ್ಧಿಮತ್ತೆ(Artificial Intelligence) ಎಂದರೇನು?
ಕೃತಕ ಬುದ್ಧಿಮತ್ತೆ ಎಂದರೆ ಮಾನವನ ರೀತಿಯೇ ಆಲೋಚನೆ ಮಾಡುವ ಕೃತಕ ಯಂತ್ರ ಎಂದರ್ಥ. ಅಂದರೆ ಇದರೆಲ್ಲಿ ಮಾನವನ ಭಾವನೆಗಳನ್ನು ಯಂತ್ರದಲ್ಲಿ ಹಾಕಲಾಗುತ್ತದೆ. ಇದರ ಅಡಿಯಲ್ಲಿ ರೋಬೋಟ್ ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಮಾನವನ ರೀತಿ ಯೋಚಿಸುತ್ತವೆ ಹಾಗೂ ಆ ಯೋಚನೆಗಳ ಅನುಸಾರ ನಿರ್ಣಯಗಳನ್ನು ಕೈಗೊಳ್ಳುತ್ತವೆ. 


ಇದನ್ನು ಓದಿ-  AI ಯ ಸಹಾಯದಿಂದ "ಆಧುನಿಕ ಭಾರತ"ದ ಕನಸು ಪೂರ್ಣ: ಮೈಕ್ರೋಸಾಫ್ಟ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.