Screen Reading Vs Paper Reading: ಪೇಪರ್ ಓದು ಅಥವಾ ಮೊಬೈಲ್ ಸ್ಕ್ರೀನ್ ಓದು! ಪರಿಣಾಮಕಾರಿ ಓದು ಯಾವುದು?
Screen Vs Paper: ಪರದೆಗಳು ವ್ಯಕ್ತಿಯ ಓದುವ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರಬಹುದು? ಪೇಪರ್ ಮತ್ತು ಸ್ಕ್ರೀನ್ ರೀಡಿಂಗ್ ತನಿಖೆಯಲ್ಲಿ ಈ ವಿಷಯಗಳು ಬೆಳಕಿಗೆ ಬಂದಿವೆ.
ನವದೆಹಲಿ: ಕೋವಿಡ್ 19 (Covid-19) ರಿಂದ ಎಲ್ಲವೂ ಆನ್‌ಲೈನ್‌ಗೆ (Online Education) ಬದಲಾಗಿದೆ. ಮಕ್ಕಳ ಶಿಕ್ಷಣ ಆನ್‌ಲೈನ್‌ಗೆ (Online Study)ಬದಲಾಗಿದೆ. ಆದರೆ ಆನ್‌ಲೈನ್ ಕಲಿಕೆಯು ಪುಸ್ತಕಗಳಂತೆ ನಿಜವಾಗಿಯೂ ಪರಿಣಾಮಕಾರಿಯಾಗಿದೆಯೇ? ಇತ್ತೀಚೆಗೆ ಸಂಶೋಧಕರು ಇದರ ಬಗ್ಗೆ ಸಂಶೋಧನೆ ನಡೆಸಿದ್ದಾರೆ ಮತ್ತು ಕಾಗದ ಮತ್ತು ಪರದೆಯಿಂದ ಕಲಿಯುವುದರಲ್ಲಿ ಉತ್ತಮ ಮಾರ್ಗ ಯಾವುದು ಎಂಬುದನ್ನು ತಿಳಿದಿದ್ದಾರೆ.
ಈ ಅಧ್ಯಯನ ನಡೆಸಿದ್ಯಾರು?
ಉತ್ತರ ಡಕೋಟಾ ವಿಶ್ವವಿದ್ಯಾನಿಲಯದ ಶಿಕ್ಷಣ, ಆರೋಗ್ಯ ಮತ್ತು ನಡವಳಿಕೆಯ ಪ್ರಾಧ್ಯಾಪಕರಾದ ವರ್ಜೀನಿಯಾ ಕ್ಲಿಂಟನ್ ಅವರು ಈ ಸಂಶೋಧನೆಯನ್ನು ನಡೆಸಿದ್ದಾರೆ. ಇದರಲ್ಲಿ ಅವರು ಪರದೆಯಿಂದ ಓದುವ (Screen Reading) ಮತ್ತು ಕಾಗದದಿಂದ ಓದುವ (Paper Reading) ನಡುವಿನ ಸಣ್ಣ ಆದರೆ ಗಮನಾರ್ಹ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ. ಈ ಸಂಶೋಧನೆಯ ಮೂಲಕ ವರ್ಜೀನಿಯಾ , ಓದುವ ಕಾರ್ಯಕ್ಷಮತೆ, ಓದುವ (Reading) ವೇಗ ಮತ್ತು ಆಲೋಚನಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಲು ಬಯಸಿದ್ದರು.
ಈ ಮೊದಲು ಕೂಡ ಸಂಶೋಧನೆ ನಡೆದಿದೆ
ಪರದೆಗಳು ವ್ಯಕ್ತಿಯ ಓದುವ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧಕರು ಹಲವು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದರೆ. ಸೈಂಟಿಫಿಕ್ ಅಮೇರಿಕನ್ ಜರ್ನಲ್ ಪ್ರಕಾರ, 1980 ರಿಂದ, ಈ ವಿಷಯದ ಬಗ್ಗೆ ಕನಿಷ್ಠ 100 ಕ್ಕೂ ಹೆಚ್ಚು ಸಂಶೋಧನೆಗಳನ್ನು ಪ್ರಕಟಿಸಲಾಗಿದೆ.
ಪರದೆಗಳು ವ್ಯಕ್ತಿಯ ಓದುವ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸಂಶೋಧಕರು ಹಲವು ವರ್ಷಗಳಿಂದ ತನಿಖೆ ಮಾಡುತ್ತಿದ್ದಾರೆ. ಸೈಂಟಿಫಿಕ್ ಅಮೇರಿಕನ್ ಜರ್ನಲ್ ಪ್ರಕಾರ, 1980 ರಿಂದ, ಈ ವಿಷಯದ ಬಗ್ಗೆ ಕನಿಷ್ಠ 100 ಕ್ಕೂ ಹೆಚ್ಚು ಸಂಶೋಧನೆಗಳನ್ನು ಪ್ರಕಟಿಸಲಾಗಿದೆ.
ಸ್ಕ್ರೀನ್ ಹಾಗೂ ಪರದೆಯ ಮೇಲೆ ಹೆಚ್ಚು ಕಾಲ ಓದಲು ಸಾಧ್ಯವಾಗುವುದಿಲ್ಲ
1990 ರ ದಶಕದ ಆರಂಭದ ವೇಳೆಗೆ, ಜನರು ಕಾಗದಕ್ಕಿಂತ ಪರದೆಯ ಮೇಲೆ ಹೆಚ್ಚು ನಿಧಾನವಾಗಿ ಮತ್ತು ಕಡಿಮೆ ನಿಖರತೆಯೊಂದಿಗೆ ಓದುತ್ತಾರೆ ಎಂಬುದನ್ನು ಅನೇಕ ಸಂಶೋಧನಾ ಫಲಿತಾಂಶಗಳು ಕಂಡುಕೊಂಡಿವೆ. ಅದರ ನಂತರದ ಸಂಶೋಧನೆಯು ವಿಭಿನ್ನ ಫಲಿತಾಂಶಗಳನ್ನು ತೋರಿಸುತ್ತವೆ.
ಇದನ್ನೂ ಓದಿ-ವ್ಯಕ್ತಿಯೊಬ್ಬರ ಸಾವಿನ ಬಳಿಕ ಅವರ 'Fingerprint' ದಾಖಲೆ ಏನಾಗುತ್ತದೆ? ಇಲ್ಲಿದೆ ಉತ್ತರ
ಸ್ಕ್ರೀನ್ ಓದಿನಲ್ಲಿ ಸುಧಾರಣೆಯಾಗಿದೆ
ಕಳೆದ ಕೆಲವು ವರ್ಷಗಳ ಸಂಶೋಧನೆಯು ತಾಂತ್ರಿಕ ಸುಧಾರಣೆಗಳು ಪರದೆಯ ಮೇಲೆ ಜನರ ಓದುವ ಗುಣಮಟ್ಟದಲ್ಲಿ ಸುಧಾರಣೆಯನ್ನು ಕಂಡಿವೆ ಎಂದು ತೋರಿಸುತ್ತದೆ.
ಇದನ್ನೂ ಓದಿ-ಸರ್ಕಾರದ ಜೊತೆಗೂಡಿ ಆರಂಭಿಸಿ ಈ ಬಿಸಿನೆಸ್, ಕೈತುಂಬಾ ಸಂಪಾದನೆಯ ಜೊತೆಗೆ, ಹಾನಿಯ ಚಾನ್ಸೇ ಇಲ್ಲ
ಸಂಶೋಧನೆಯ ಫಲಿತಾಂಶಗಳು (Paper Reading Benefits)
ತಮ್ಮ ಸಂಶೋಧನೆಯಲ್ಲಿ ವರ್ಜೀನಿಯಾ, ಕಳೆದ 2008 ರಿಂದ 2018 ರವರೆಗೆ ಅಂತಹ 33 ಸಂಶೋಧನೆಗಳನ್ನು ಒಳಗೊಂಡಿತ್ತು ಎಂದಿದ್ದಾರೆ. ಇದರಲ್ಲಿ ಕಾಗದ ಮತ್ತು ಪರದೆಯ ಓದುವಿಕೆಯನ್ನು ಪರಿಶೀಲಿಸಲಾಗಿದೆ. ಕಾಗದದ ಓದುವಿಕೆ ಗ್ರಹಿಕೆಯನ್ನು ಸುಧಾರಿಸುತ್ತದೆ ಮತ್ತು ಪರೀಕ್ಷೆಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ಕಂಡುಕೊಂಡಿವೆ. ಕಾಗದದ ಓದುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಕಂಡುಬಂದಿದೆ, ಏಕೆಂದರೆ ನೀವು ಕಾಗದದಿಂದ ಓದುತ್ತಿದ್ದರೆ, ಅದು ನಿಮ್ಮ ಮನಸ್ಸನ್ನು ಹೆಚ್ಚು ಯೋಚಿಸುವಂತೆ ಮಾಡುತ್ತದೆ, ಇದು ವಿಷಯಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ವೇಳೆ, ಸ್ಕ್ರೀನ್ ರೀಡರ್ ಗಳಲ್ಲಿ ಅತಿಯಾದ ಆತ್ಮವಿಶ್ವಾಸ, ಹೆಚ್ಚು ವಿಚಲಿತರಾಗುವಿಕೆ ಹಾಗೂ ಕಡಿಮೆ ಗಮನ ನೀಡುವಿಕೆಗೆ ಗುರಿಯಾಗಿಸಬಹುದು ಎಂದು ಸಂಶೋಧನೆಯು ಕಂಡುಹಿಡಿದಿದೆ.
ಇದನ್ನೂ ಓದಿ-ಚಳಿಗಾಲದಲ್ಲಿ ಬೆಟ್ಟದ ನೇರಳೆ ಆರೋಗ್ಯಕ್ಕೆ ವರದಾನವೇ ಸರಿ, ಇಲ್ಲಿದೆ ಬಳಕೆಯ ಸರಿಯಾದ ಪದ್ಧತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ