Knowledge Story: ವ್ಯಕ್ತಿಯೊಬ್ಬರ ಸಾವಿನ ಬಳಿಕ ಅವರ 'Fingerprint' ದಾಖಲೆ ಏನಾಗುತ್ತದೆ? ಇಲ್ಲಿದೆ ಉತ್ತರ

Fingerprint After Death: ಒಬ್ಬ ವ್ಯಕ್ತಿಯ ಮರಣದ (Death)ನಂತರಅವನ ಬೆರಳಚ್ಚುಗಳು (Fingerprint) ಕಾರ್ಯನಿರ್ವಹಿಸುತ್ತವೆಯೇ? ಅಂದರೆ, ಮರಣದ ನಂತರ, ವ್ಯಕ್ತಿಯ ಮೊಬೈಲ್ ಅನ್ನು ಫಿಂಗರ್ ಪ್ರಿಂಟ್ (Can We Unlock Dead Man's Mobile Through His Fingerprint) ಮೂಲಕ ಅನ್ಲಾಕ್ ಮಾಡಬಹುದೇ: ಇದರ ಹಿಂದಿರುವ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Nov 7, 2021, 09:03 PM IST
  • ಇಂದಿನ ಕಾಲದಲ್ಲಿ ಎಲ್ಲೆಡೆ ಅವಶ್ಯಕತೆ ಇದೆ ಫಿಂಗರ್ ಪ್ರಿಂಟ್
  • ಸಾವಿನ ಬಳಿಕ ಬದಲಾಗುತ್ತವೆ ಬೆರಳಚ್ಚುಗಳು
  • ಸಾವಿನ ಬಳಿಕ ಶರೀರದ ವಿದ್ಯುತ್ ಪ್ರವಾಹ ನಿಂತುಹೋಗುತ್ತದೆ.
Knowledge Story: ವ್ಯಕ್ತಿಯೊಬ್ಬರ ಸಾವಿನ ಬಳಿಕ ಅವರ 'Fingerprint' ದಾಖಲೆ ಏನಾಗುತ್ತದೆ? ಇಲ್ಲಿದೆ ಉತ್ತರ title=
Fingerprint After Death (File Photo)

ನವದೆಹಲಿ: Finger Print Science - ಯಾವುದೇ ಓರ್ವ ವ್ಯಕ್ತಿಯನ್ನು ಹತ್ಯೆಗೈದ ಬಳಿದ ಖಳನಾಯಕ ಆ ವ್ಯಕ್ತಿಯ ಹೆಬ್ಬೆರಳಿನ ಗುರುತುಗಳನ್ನು ಆಸ್ತಿಯ ಕಾಗದದ ಮೇಲೆ ತೆಗೆದುಕೊಳ್ಳುವುದನ್ನು ನೀವು ಚಲನಚಿತ್ರಗಳಲ್ಲಿ ನೋಡಿರಬೇಕು. ಆದರೆ ನಿಜ ಜೀವನದಲ್ಲಿ ಇದು ಅಸಾಧ್ಯ. ಇಂದು ಬೆರಳಚ್ಚುಗಳು ಎಲ್ಲೆಡೆ ಇವೆ. ಮೊಬೈಲ್ ಆನ್ ಮಾಡಲು ಕೂಡ ಆಧಾರ್ ಕಾರ್ಡ್, ಬ್ಯಾಂಕ್ ಕೆವೈಸಿಗೆ ಬೆರಳಚ್ಚು ಅಗತ್ಯವಿದೆ. ಒಬ್ಬ ವ್ಯಕ್ತಿಯು ಸತ್ತರೆ, ಅವನ ಬೆರಳಚ್ಚುಗಳು ಎಷ್ಟು ಕಾಲ ಕೆಲಸ ಮಾಡುತ್ತವೆ? ಇದಕ್ಕೆ ಉತ್ತರವನ್ನು ಹುಡುಕುವ ಪ್ರಯತ್ನವನ್ನು ಮಾಡೋಣ ಬನ್ನಿ

ಸಾವಿನ ಬಳಿಕ ಬೆರಳಿನ ಗುರುತುಗಳು ಬದಲಾಗುತ್ತವೆ
ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಬೆರಳಚ್ಚುಗಳು ಮೊದಲಿನಂತೆ ಇರುವುದಿಲ್ಲ.ಅವು  ಬದಲಾಗುತ್ತವೆ. ಬದಲಾಗುವ ಮೊದಲು ನೀವು ಫಿಂಗರ್‌ಪ್ರಿಂಟ್‌ಗಳನ್ನು ಬಳಸಲಾಗುವುದಿಲ್ಲ ಏಕೆಂದರೆ ವ್ಯಕ್ತಿಯ ಮರಣದ ತಕ್ಷಣ ಆತನ ದೇಹದಲ್ಲಿನ ವಿದ್ಯುತ್ ಶಕ್ತಿ ಮುಕ್ತಾಯವಾಗುತ್ತದೆ.  ದೇಹದ ಜೀವಕೋಶ ವ್ಯವಸ್ಥೆಯು ಆ ವಿದ್ಯುತ್ ಚಾರ್ಜ್ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.

ಫಿಂಗರ್ ಪ್ರಿಂಟ್ ಗಳು ಮಸುಕಾಗುತ್ತವೆ
ವ್ಯಕ್ತಿಯ  ಫಿಂಗರ್‌ಪ್ರಿಂಟ್‌ಗಳು ಆತನ  ಸಾವಿನ ಮೊದಲು ಸ್ಪಷ್ಟವಾಗಿರುತ್ತವೆ ಮತ್ತು ಅರ್ಥವಾಗುವಂತಹದ್ದಾಗಿರುತ್ತವೆ. ಆದರೆ ಅವು ಆತನ ಮರಣದ ನಂತರ ಬದಲಾಗುತ್ತವೆ ಮತ್ತು ಹೆಚ್ಚು ಮಸುಕಾಗುತ್ತವೆ ಹೆಚ್ಚಿನ ಪ್ರಮಾಣದಲ್ಲಿ ಅಸ್ಪಷ್ಟವಾಗುತ್ತವೆ. ಅವುಗಳ ತೀಕ್ಷ್ಣತೆ ಕಣ್ಮರೆಯಾಗುತ್ತದೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಜುಲೈ 14, 2015 ರ ಆವೃತ್ತಿಯಲ್ಲಿ ಪ್ರಕಟವಾದ ಅಧ್ಯಯನವು ಎರಡು ಸೆಟ್ ಪ್ರಿಂಟ್‌ಗಳ ನಡುವಿನ ಸಮಯದ ಮಧ್ಯಂತರವು ಹೆಚ್ಚಾದಂತೆ ಫಿಂಗರ್‌ಪ್ರಿಂಟ್ ಗುರುತಿಸುವಿಕೆ ಕಡಿಮೆ ವಿಶ್ವಾಸಾರ್ಹವಾಗುತ್ತದೆ ಎಂದು ಹೇಳಲಾಗಿದೆ. 

ಬೆರಳುಗಳಲ್ಲಿ ಕಠಿಣತೆ ಬರುತ್ತದೆ
ಒಬ್ಬ ವ್ಯಕ್ತಿಯ ಮರಣದ ನಂತರ ಅವನ ದೇಹವು ಗಡುಸಾಗುವುದನ್ನು ನೀವು ನೋಡಿರಬಹುದು. ಈ ಸಮಯದಲ್ಲಿ, ಅವನ ಬೆರಳುಗಳು ಇತರ ಅಂಗಗಳಂತೆ ಕಠಿಣವಾಗುತ್ತವೆ. ಇದರಿಂದಾಗಿ ಅವರ ಬೆರಳಚ್ಚು ತೆಗೆಯುವುದು ಸುಲಭವಾಗುವುದಿಲ್ಲ. ವಿಜ್ಞಾನವು ಇದಕ್ಕಾಗಿ ವಿಶೇಷ ಸಾಧನಗಳನ್ನು ಮಾಡಿದೆ. ಈ ಸಂದರ್ಭದಲ್ಲಿ ವಿಶೇಷ ಬಾಗಿದ ಸಾಧನವನ್ನು ಬಳಸಿಕೊಂಡು ಫಿಂಗರ್ಪ್ರಿಂಟ್ಗಳನ್ನು ತೆಗೆದುಕೊಳ್ಳಬಹುದು.

ಈ ರೀತಿ ಫಿಂಗರ್ ಪ್ರಿಂಟ್ ಪಡೆಯುವುದು ಕಷ್ಟ
ಒಬ್ಬ ವ್ಯಕ್ತಿಯು ಮರಣ ಹೊಂದಿ ತುಂಬಾ ಹೊತ್ತಾಗಿದ್ದರೆ ಅಥವಾ ಮೃತ ದೇಹವು ಕೊಳೆತವಾಗಿದ್ದರೆ, ಅವನ ಬೆರಳಚ್ಚುಗಳನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರ. ಅಂತಹ ವ್ಯಕ್ತಿಯ ಬೆರಳಚ್ಚುಗಳನ್ನು ಆಧುನಿಕ ಪ್ರಯೋಗಾಲಯಗಳಲ್ಲಿ ವಿಧಿವಿಜ್ಞಾನ ತಜ್ಞರು (Fingerprint Scan) ಮಾತ್ರ ತೆಗೆದುಕೊಳ್ಳಬಹುದು. ಕೆಲವೊಮ್ಮೆ ಇದು ಸಾಕಷ್ಟು ಸಮಯ ಕೂಡ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ-ರಹಸ್ಯ ಬಟನ್ ಹೊಂದಿರುವ Apple iPhone logo? ಇದರಲ್ಲೇನಿದೆ ಅಂತಹ ವಿಶೇಷತೆ?

ಇವು ತುಂಬಾ ಪ್ರಯೋಜನಕಾರಿಯಾಗಿರುತ್ತವೆ (Technology News)
ಮೃತ ವ್ಯಕ್ತಿಗಳ ಬೆರಳಚ್ಚು ತಿಳಿಯುವುದಿಲ್ಲ ಎಂದು ಹೇಳಲಾಗಿದ್ದರೂ ಕೂಡ ಅದೇ ವ್ಯಕ್ತಿಯ ಜೀವಂತ ಮತ್ತು ಮರಣದ ನಂತರ, ಬೆರಳಚ್ಚುಗಳಲ್ಲಿ ವಿಶೇಷ ರೀತಿಯ ಸಾಮ್ಯತೆ ಇರುತ್ತದೆ. ಕೆಲವೊಮ್ಮೆ ಫಿಂಗರ್‌ಪ್ರಿಂಟ್‌ನಿಂದ ಸತ್ತವರ ಗುರುತು ಕೂಡ ಗುರುತಿಸಲ್ಪಡುತ್ತದೆ. ಇಂತಹ  ಪರಿಸ್ಥಿತಿಯಲ್ಲಿ, ಚರ್ಮವನ್ನು ಮುದ್ರಿಸಲು ವಿಜ್ಞಾನವು ಸಿಲಿಕೋನ್ ಪುಟ್ಟಿ ಬಳಸುತ್ತದೆ. ಸಿಲಿಕೋನ್ ಪುಟ್ಟಿಯಲ್ಲಿ ಮಾಡಿದ ಪ್ರಿಂಟ್‌ಗಳ ಚಿತ್ರಗಳನ್ನು ತೆಗೆದುಕೊಳ್ಳುವ ಮೂಲಕ ಆ ಮುದ್ರಣಗಳನ್ನು ಬಳಸಬಹುದು.

ಇದನ್ನೂ ಓದಿ- Windows 11 ಬಳಕೆದಾರರಿಗೆ ಎದುರಾದ ತಾಂತ್ರಿಕ ತೊಂದರೆ, ಈ ವೈಶಿಷ್ಟ್ಯ ಕೆಲಸ ಮಾಡುತ್ತಿಲ್ಲ ಎಚ್ಚರ!

ಮೊಬೈಲ್ ಫಿಂಗರ್ ಪ್ರಿಂಟ್ ಲಾಕ್ ತೆರೆಯಬಹುದೆ?
ಇತ್ತೀಚಿನ ದಿನಗಳಲ್ಲಿ ಪ್ರತಿ ಮೊಬೈಲ್ ಫೋನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್ ಅಳವಡಿಸಲಾಗಿದೆ. ವ್ಯಕ್ತಿಯ ಮರಣದ ನಂತರ ಮೊಬೈಲ್‌ನ ಈ ಫಿಂಗರ್‌ಪ್ರಿಂಟ್ ಸೆನ್ಸಾರ್ (Fingerprint Sensor) ಕೆಲಸ ಮಾಡುವುದಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವವಾಗಿ, ಮೊಬೈಲ್‌ನಲ್ಲಿ ಬಳಸಲಾದ ಫಿಂಗರ್‌ಪ್ರಿಂಟ್ ಸೆನ್ಸರ್‌ನ ತಂತ್ರಜ್ಞಾನವು ಎಷ್ಟು ಮುಂದುವರಿದಿದೆ ಎಂದರೆ ಅದು ಸತ್ತ ಮತ್ತು ಜೀವಂತ ವ್ಯಕ್ತಿಯ ನಡುವಿನ ವ್ಯತ್ಯಾಸವನ್ನು ತಕ್ಷಣವೇ ಕಂಡುಹಿಡಿಯುತ್ತದೆ. ನೀವು ಸತ್ತ ವ್ಯಕ್ತಿಯ ಬೆರಳನ್ನು ಅವರ ಸ್ವಂತ ಮೊಬೈಲ್‌ನ ಸೆನ್ಸಾರ್‌ನಲ್ಲಿ ಸ್ಪರ್ಶಿಸಿದರೆ, ಅದು ಅನ್‌ಲಾಕ್ ಆಗುವುದಿಲ್ಲ.

ಇದನ್ನೂ ಓದಿ-ಗ್ರಾಮೀಣ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು ಮುಂದಾದ ಎಲೋನ್ ಮಾಸ್ಕ್‌?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News