Google Search: ಪ್ರಸ್ತುತ ಯುಗದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಮ್ಮೆಲ್ಲಾ ಪ್ರಶ್ನೆಗಳಿಗೆ ನಮ್ಮ ಬೆರಳ ತುದಿಯಲ್ಲಿಯೇ ಉತ್ತರ ಕಂಡುಕೊಳ್ಳಬಹುದು. ಇದಕ್ಕೆ ಸಹಕಾರಿ ನಮ್ಮ ನಿಮ್ಮೆಲ್ಲರ ನೆಚ್ಚಿನ ಸರ್ಚ್ ಎಂಜಿನ್ ಗೂಗಲ್. ಅಡುಗೆ ಮಾಡುವುದರಿಂದ ಹಿಡಿದು ಬಾಹ್ಯಾಕಾಶಕ್ಕೆ ಹಾರುವವರೆಗೂ ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬಲ್ಲ ಏಕೈಕ ಜ್ಞಾನಿ ಗೂಗಲ್. ಹಾಗಾಗಿಯೇ, ಪ್ರತಿಯೊಬ್ಬರೂ ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿದ್ದಾಗ ತಕ್ಷಣವೇ ಅದನ್ನು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ, ನೆನಪಿಡಿ, ಪ್ರತಿಯೊಂದಕ್ಕೂ ಗೂಗಲ್ ಆಶ್ರಯಿಸುವ ಮುನ್ನ ಗೂಗಲ್‌ನಲ್ಲಿ ನಾವು ಯಾವ ವಿಷಯಗಳ ಬಗ್ಗೆ ಹುಡುಕಾಟ ನಡೆಸಬಾರದು ಎಂಬ ಬಗ್ಗೆಯೂ ತಿಳಿದಿರುವುದು ಬಹಳ ಮುಖ್ಯ. ವಾಸ್ತವವಾಗಿ, ಗೂಗಲ್‌ನಲ್ಲಿ ನೀವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಕೆಲವು ಪದಗಳನ್ನು ಸರ್ಚ್ ಮಾಡುವುದು ನಿಮ್ಮನ್ನು ಜೈಲು ಪಾಲಾಗುವಂತೆ ಮಾಡಬಹುದು. 


COMMERCIAL BREAK
SCROLL TO CONTINUE READING

ಹೌದು, ಗೂಗಲ್‌ನಲ್ಲಿ ಕೆಲವು ವಿಷಯಗಳ ಹುಡುಕಾಟ ಶಿಕ್ಷಾರ್ಹ ಅಪರಾಧವಾಗಿದೆ. ಹಾಗಾಗಿ, ಕೆಲವು ಸೂಕ್ಷ್ಮ ವಿಷಯಗಳ ಹುಡುಕಾಟವು ನಿಮಗೆ ಅತ್ಯಂತ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ, ಗೂಗಲ್‌ನಲ್ಲಿ ಯಾವ ವಿಷಯಗಳ ಹುಡುಕಾಟವನ್ನು ತಪ್ಪಿಸಬೇಕು ಎಂದು ತಿಳಿಯೋಣ...


ಗೂಗಲ್‌ನಲ್ಲಿ ಎಂದಿಗೂ ಕೂಡ ಈ ಪದಗಳನ್ನು ಹುಡುಕುವ ತಪ್ಪನ್ನು ಮಾಡಬೇಡಿ:
ವೀಡಿಯೊ ಪೈರಸಿ:

ವೀಡಿಯೊ ಪೈರಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಒಂದಾಗಿದೆ. ನೀವು ಅಪ್ಪಿತಪ್ಪಿ ವೀಡಿಯೊ ಪೈರಸಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದರೂ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ.


ಇದನ್ನೂ ಓದಿ- Lava Blaze NXT: ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ 10 ಸಾವಿರದೊಳಗಿನ ಲಾವಾ ಸ್ಮಾರ್ಟ್‌ಫೋನ್


ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ: 
ನೀವು ಗೂಗಲ್‌ನಲ್ಲಿ ಮತ್ತೆ ಮತ್ತೆ ಮಿಲಿಟರಿಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ಸರ್ಚ್ ಮಾಡುತ್ತಿದ್ದರೆ ಇಂದೇ ಇದನ್ನು ಬಿಟ್ಟುಬಿಡಿ. ಇಲ್ಲದಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು.


ಹ್ಯಾಕಿಂಗ್: 
ಹ್ಯಾಕ್ ಮಾಡುವುದು ಹೇಗೆ ಎಂದು ನೀವು ಹುಡುಕುತ್ತಿದ್ದರೆ, ಅದು ಅಪರಾಧ. ಗೂಗಲ್‌ನಲ್ಲಿ ಈ ರೀತಿಯ ಪದ ಸರ್ಚ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಜೈಲುಪಾಲಾಗಬಹುದು.


ಮಕ್ಕಳ ಅಪರಾಧ: 
ಮಕ್ಕಳ ಅಪರಾಧವು  ಗಂಭೀರವಾದ ವಿಷಯವಾಗಿದೆ. ಗೂಗಲ್‌ನಲ್ಲಿ ಅಂತಹ ವಿಷಯಗಳ ಹುಡುಕಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದು.


ಇದನ್ನೂ ಓದಿ- Vivo ಸ್ಮಾರ್ಟ್‌ಫೋನ್ ಡೀಲ್: 21,000 ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ 699 ರೂ.ಗಳಿಗೆ ಖರೀದಿಸಿ


ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ:
ಗೂಗಲ್‌ನಲ್ಲಿ ಶಸ್ತ್ರಾಸ್ತ್ರಗಳ ಬಗ್ಗೆ ಸರ್ಚ್ ಮಾಡುವುದು ಸಾಮಾನ್ಯ ಎಂದು ನೀವು ಭಾವಿಸಿದರೆ ಅದು ತಪ್ಪು ಕಲ್ಪನೆ. ವಾಸ್ತವವಾಗಿ ಭದ್ರತಾ ಏಜೆನ್ಸಿಗಳು ಅಂತಹ ಹುಡುಕಾಟಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತವೆ. ಯಾರಾದರು ಗೂಗಲ್‌ನಲ್ಲಿ ಇಂತಹ ವಿಷಯಗಳ ಬಗ್ಗೆ ಹುಡುಕಾಟ ನಡೆಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.