UPI Payments Apps: ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ಗಳಾದ Google Pay, PhonePe, Paytm ಮತ್ತಿತರ ಅಪ್ಲಿಕೇಶನ್ಗಳು ಅನಿಯಮಿತ ಪಾವತಿಗಳನ್ನು ನಿಯಂತ್ರಿಸಲು ಶೀಘ್ರದಲ್ಲಿಯೇ ವಹಿವಾಟಿನ ಮೇಲೆ ಮಿತಿಯನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಯುಪಿಐ ಡಿಜಿಟಲ್ ಪೈಪ್ಲೈನ್ ಅನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಈ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ನೊಂದಿಗೆ ಸಮಾಲೋಚನೆ ನಡೆಸುತ್ತಿದ್ದು ಯುಪಿಐ ಪಾವತಿದಾರರ ವಹಿವಾಟಿನ ಮಿತಿಯನ್ನು ಶೇ. 30ಕ್ಕೆ ಸೀಮಿತಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ಥರ್ಡ್-ಪಾರ್ಟಿ ಯುಪಿಐ ಅಪ್ಲಿಕೇಶನ್ ಪೂರೈಕೆದಾರರಿಗೆ ವಾಲ್ಯೂಮ್ ಕ್ಯಾಪ್ ಅನ್ನು ಮಿತಿಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ತನ್ನ ಪ್ರಸ್ತಾವಿತ ಡಿಸೆಂಬರ್ 31 ಗಡುವನ್ನು ಶೀಘ್ರದಲ್ಲೇ ಜಾರಿಗೊಳಿಸಬಹುದು ಎಂದು ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ- ಆನ್ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ!
ಗಮನಾರ್ಹವಾಗಿ, ಪ್ರಸ್ತುತ ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಂತಹ ಯಾವುದೇ ಯುಪಿಐ ಆಧಾರಿತ ಅಪ್ಲಿಕೇಶನ್ನಲ್ಲಿ ಯಾವುದೇ ವಹಿವಾಟು ಕ್ಯಾಪ್ ಇಲ್ಲ. ಡಿಜಿಟಲ್ ಯುಗದಲ್ಲಿ ಮಾರುಕಟ್ಟೆಯಲ್ಲಿ ಗೂಗಲ್ ಪೇ, ಫೋನ್ ಪೇನಂತರ ಯುಪಿಐ ಪ್ಲಾಟ್ಫಾರ್ಮ್ಗಳು ಸುಮಾರು 80 ಪ್ರತಿಶತದಷ್ಟು ಪಾಲನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ನ ಏಕಸ್ವಾಮ್ಯವನ್ನು ತಪ್ಪಿಸುವ ಸಲುವಾಗಿ ನವೆಂಬರ್ 2022 ರಲ್ಲಿ ಎನ್ಪಿಸಿಐ 30 ಪ್ರತಿಶತ ವಾಲ್ಯೂಮ್ ಕ್ಯಾಪ್ನ ಪ್ರಸ್ತಾವನೆಯನ್ನು ಕಳುಹಿಸಿದೆ.
ಇದನ್ನೂ ಓದಿ- Flipkart Offer: ಫ್ಲಿಪ್ಕಾರ್ಟ್ನಲ್ಲಿ ಐಫೋನ್ 12 ಮಿನಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್
ಈ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಈಗಾಗಲೇ ಸಭೆ ನಡೆಸಲಾಗಿದ್ದು, ಈ ಕುರಿತಂತೆ ಎನ್ಪಿಸಿಐ ಅಧಿಕಾರಿಗಳಲ್ಲದೆ, ಹಣಕಾಸು ಸಚಿವಾಲಯ ಮತ್ತು ಆರ್ಬಿಐನ ಹಿರಿಯ ಅಧಿಕಾರಿಗಳು ಸಮಾಲೋಚನೆ ನಡೆಸಲಾಗಿದೆ. ಆದಾಗ್ಯೂ, ಈ ಕುರಿತಂತೆ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ ಎಂದು ವರದಿಯೊಂದು ಮಾಹಿತಿ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.