ನಿಮ್ಮ whatsaap ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ಈ ರೀತಿ ಪತ್ತೆ ಹಚ್ಚಿ

WhatsApp Tips And Tricks:ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಈ ವೈಶಿಷ್ಟ್ಯಗಳಲ್ಲಿ ಒಂದು ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್.

Written by - Ranjitha R K | Last Updated : Nov 23, 2022, 10:25 AM IST
  • WhatsApp ಅನ್ನು ಆನ್‌ಲೈನ್ ಚಾಟ್‌ಗಾಗಿ ಹೆಚ್ಚಾಗಿ ಬಳಸಲಾಗುತ್ತದೆ.
  • ಈ ಅಪ್ಲಿಕೇಶನ್ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.
  • ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.
ನಿಮ್ಮ whatsaap ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ಈ ರೀತಿ ಪತ್ತೆ ಹಚ್ಚಿ  title=
WhatsApp Tips And Tricks

WhatsApp Tips And Tricks : WhatsApp ಅನ್ನು ಆನ್‌ಲೈನ್ ಚಾಟ್‌ಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಈ ಅಪ್ಲಿಕೇಶನ್ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಕಾಲ ಕಾಲಕ್ಕೆ ವಾಟ್ಸಾಪ್ ಚಾಟಿಂಗ್ ನಲ್ಲೂ ಬದಲಾವಣೆ ಮಾಡಲಾಗುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಈ ವೈಶಿಷ್ಟ್ಯಗಳಲ್ಲಿ ಒಂದು ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್.  ಈ ವೈಶಿಷ್ಟ್ಯ ಬಳಕೆದಾರರಿಗೆ ಸಹಾಯಕವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇದರಿಂದ ಎದುರಿಸುವ ಅಪಾಯವೂ ಅಷ್ಟೇ ದೊಡ್ಡದಿದೆ. 

ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್ ಅಪಾಯಕಾರಿಯೂ ಹೌದು  : 
ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್ ವೈಶಿಷ್ಟ್ಯ ಬಂದ ನಂತರ ಸ್ನೇಹಿತರು, ಕುಟುಂಬ ಸದಸ್ಯರು, ಅಥವಾ ಆಪ್ತರು ನಿಮ್ಮ WhatsApp ಸಂವಹನದ  ಮೇಲೆ ಕಣ್ಣಿಡುವುದು ಸುಲಭವಾಗಿದೆ.  ಬೇರೆಯವರ ವಾಟ್ಸಾಪ್  ಚಾಟ್ ಓದಲು ವಾಟ್ಸಾಪ್ ಹ್ಯಾಕ್ ಮಾಡಲೇಬೇಕೆಂದಿಲ್ಲ. ಹ್ಯಾಕ್ ಮಾಡದೇ ಕೂಡಾ ವಾಟ್ಸಾಪ್  ಚಾಟ್ ಅನ್ನು ಸುಲಭವಾಗಿ ಓದಿ ಬಿಡಬಹುದು. ಇದಕ್ಕಾಗಿ ಒಂದೆರಡು ನಿಮಿಷ ನಿಮ್ಮ ಫೋನ್ ಬೇರೆಯವರ ಕೈಗೆ ಸಿಕ್ಕಿದರೆ ಸಾಕಾಗುತ್ತದೆ. ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್  ವೈಶಿಷ್ಟ್ಯ ಉಪಯೋಗಿಸಿಕೊಂಡು, ನಿಮ್ಮ ವಾಟ್ಸಾಪ್ ನಲ್ಲಿರುವ ಚಾಟ್ ಅನ್ನು ಸುಲಭವಾಗಿ ಓದಬಹುದು. 

ಇದನ್ನೂ ಓದಿ : Flipkart Offer: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್

ಯಾರೂ ಬೇಕಾದರೂ ಸಂದೇಶವನ್ನು  ಓದಬಹುದು : 
 ಹೊಸ ವೈಶಿಷ್ಟ್ಯಗಳ ಸಹಾಯದಿಂದ, ಬಹು ಸಾಧನಗಳಲ್ಲಿ WhatsApp ಅನ್ನು ಬಳಸಬಹುದು. WhatsApp ವೆಬ್ ಅನ್ನು ಬಳಸಲು, ಮುಖ್ಯ ಸಾಧನವನ್ನು ಇಂಟನೆಟ್ ಗೆ ಸಂಪರ್ಕಿಸಬೇಕಾಗುತ್ತದೆ. ಆದರೆ, ಮಲ್ಟಿ ಡಿವೈಸ್ ಸಪೋರ್ಟ್ ಸರ್ವಿಸ್  ವೈಶಿಷ್ಟ್ಯವನ್ನು ಬಳಸುವಾಗ ಇದರ ಅಗತ್ಯವಿರುವುದಿಲ್ಲ

ನಿಮ್ಮ ಸಂದೇಶಗಳನ್ನು ಇತರರು ಓದುತ್ತಾರೆಯೇ ಎನ್ನುವುದನ್ನು ಪರಿಶೀಲಿಸುವುದು ಹೇಗೆ?

- ನಿಮ್ಮ WhatsApp ಅಪ್ಲಿಕೇಶನ್ ತೆರೆಯಿರಿ.
- ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿ ಲಭ್ಯವಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
- ಲಿಂಕ್ಡ್ ಡಿವೈಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ WhatsApp ಲಾಗ್ ಇನ್ ಆಗಿರುವ ಸಾಧನಗಳ ಪಟ್ಟಿ ಕಾಣಿಸುತ್ತದೆ. 
- ಇಲ್ಲಿ ನಿಮಗೆ ಅಗತ್ಯವಿರದ ಡಿವೈಸ್ ಅನ್ನು ಲಾಗ್ ಔಟ್ ಆಗುವ ಮೂಲಕ 
ನಿಮಗೆ ಗೊತ್ತಿಲ್ಲದೇ ಬೇರೆಯವರು ನಿಮ್ಮ ಮೆಸೇಜ್ ಓದುವುದನ್ನು ತಡೆಯಬಹುದು.  

ಇದನ್ನೂ ಓದಿ : WhatsApp ಬಳಕೆದಾರಿಗೊಂದು ಬಂಬಾಟ್ ಸುದ್ದಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News