ಶೀಘ್ರವೇ ಭಾರತೀಯ ಮಾರುಕಟ್ಟೆಗೆ Sharp AQUOS R7 ಸ್ಮಾರ್ಟ್‌ಫೋನ್?
ಜಪಾನಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಾರ್ಪ್ ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ Sharp AQUOS R7 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಅದ್ಭುತ ಕ್ಯಾಮೆರಾದೊಂದಿಗೆ ಇನ್ನೂ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಈ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ಜಪಾನಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಶಾರ್ಪ್(Sharp) ತನ್ನ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಶಾರ್ಪ್ AQUOS R7 ಅನ್ನು ಘೋಷಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಅದ್ಭುತ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ. ಆದರೆ, ಜನರ ಗಮನ ಸೆಳೆದಿರುವ ಒಂದು ವೈಶಿಷ್ಟ್ಯವೆಂದರೆ ಇದರ ಆಂತರಿಕ ಕ್ಯಾಮೆರಾ. ಈ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
AQUOS R7ನ ಅದ್ಭುತ ವೈಶಿಷ್ಟ್ಯಗಳು
6.6 ಇಂಚಿನ Pro IGZO OLED ಸ್ಕ್ರೀನ್, 1260 x 2730 ಪಿಕ್ಸೆಲ್‌ಗಳ ರೆಸಲ್ಯೂಶನ್, Brightness of 200nits, 240Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್, 10-ಬಿಟ್ ಬಣ್ಣಗಳು ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಶಾರ್ಪ್ AQUOS R7 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಾಧನವು Android 12 OSನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರೊಸೆಸರ್ ಕುರಿತು ಹೇಳುವುದಾದರೆ ಇದು Snapdragon 8 Gen 1 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ವಿವೋದ ಗದರ್ ಫೋನ್ ಬಿಡುಗಡೆ: ಇದರ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್
ಗಮನ ಸೆಳೆಯುತ್ತಿದೆ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ
ಎಲ್ಲಾ ವೈಶಿಷ್ಟ್ಯಗಳ ನಡುವೆ ಶಾರ್ಪ್ AQUOS R7ನ ಕ್ಯಾಮೆರಾದ ವೈಶಿಷ್ಟ್ಯಗಳು ಜನರನ್ನು ಆಕರ್ಷಿಸಿವೆ. ಶಾರ್ಪ್‌ನ ಮೊದಲ ಪ್ರಮುಖ ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್ ಮತ್ತು ಎಫ್/1.9 ಅಪರ್ಚರ್‌ನೊಂದಿಗೆ 47.2 ಎಂಪಿ ಒಂದು ಇಂಚಿನ ಹಿಂಭಾಗದ ಕ್ಯಾಮೆರಾ(one-inch rear camera)ವನ್ನು ಒಳಗೊಂಡಿದೆ. ಇದರಲ್ಲಿ ನಿಮಗೆ 12.6MP ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಆಕ್ಟಾ ಪಿಡಿ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ ಮತ್ತು ಅದರ ಹಿಂದಿನ ಕ್ಯಾಮೆರಾ ಸೆಟಪ್ ಮತ್ತೊಂದು ಲೆನ್ಸ್ ಅನ್ನು ಒಳಗೊಂಡಿದೆ. ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ.
ಶಾರ್ಪ್ AQUOS R7ನ ಇತರ ವೈಶಿಷ್ಟ್ಯಗಳು
ಶಾರ್ಪ್‌ನ ಈ ಮೊದಲ ಪ್ರಮುಖ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ 12GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಏನನ್ನೂ ಹೇಳಲಾಗಿಲ್ಲ. 5G ಸೇವೆಗಳೊಂದಿಗೆ ಈ ಶಾರ್ಪ್ ಸ್ಮಾರ್ಟ್‌ಫೋನ್ ವೈಫೈ, ಬ್ಲೂಟೂತ್ 5.2, NFC ಮತ್ತು USB ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಈ ಸಾಧನವು ನೀರು ಮತ್ತು ಧೂಳಿನಲ್ಲಿ ಹಾಳಾಗುವುದಿಲ್ಲವಂತೆ.
ಇದನ್ನೂ ಓದಿ: ಬೇರೆ ಬೇರೆ ಚಾರ್ಜರ್‌ನಿಂದ ಫೋನ್ ಚಾರ್ಜ್ ಮಾಡುತ್ತೀರಾ! ಹಾಗಾದರೆ ಈ ಅಪಾಯ ಗ್ಯಾರಂಟಿ
ಸದ್ಯ ಈ ಸ್ಮಾರ್ಟ್‌ಫೋನ್ ಅನ್ನು ಜಪಾನ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಜುಲೈನಿಂದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿದೆಯಂತೆ. ಸದ್ಯ ಶಾರ್ಪ್ AQUOS R7 ಬಹುಶಃ ಜಪಾನ್ ಹೊರತುಪಡಿಸಿ ಬೇರೆ ದೇಶಗಳಲ್ಲಿ ಬಿಡುಗಡೆಯಾಗಿಲ್ಲ. ಅಲ್ಲದೆ ಈ ಫೋನ್‌ನ ಬೆಲೆಯ ಬಗೆಗಿನ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಈ ಫೋನ್ ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಡಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.