ವಿವೋದ ಗದರ್ ಫೋನ್ ಬಿಡುಗಡೆ: ಇದರ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್

Vivo Y15c: ಪ್ರಸಿದ್ದ  ಸ್ಮಾರ್ಟ್‌ಫೋನ್ ಕಂಪನಿ ವಿವೋ ಭಾರತದಲ್ಲಿ ರಹಸ್ಯವಾಗಿ ವಿವೋ ವೈ15ಸಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಫೋನ್ 6.51-ಇಂಚಿನ ಡಿಸ್ಪ್ಲೇ, ಶಕ್ತಿಯುತ 5,000mAh ಬ್ಯಾಟರಿ ಮತ್ತು 13ಎಂಪಿ ಕ್ಯಾಮೆರಾವನ್ನು ಹೊಂದಿದೆ. ವಿವೋ ವೈ15ಸಿ ಸ್ಮಾರ್ಟ್‌ಫೋನ್ ನ ಉತ್ತಮ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ...

Written by - Yashaswini V | Last Updated : May 9, 2022, 11:32 AM IST
  • ವಿವೋ ವೈ15ಸಿ ಎಚ್ಡಿ+ರೆಸಲ್ಯೂಶನ್ ಮತ್ತು ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.51-ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ.
  • ಸಾಧನವು ಲಂಬವಾದ ಪಟ್ಟಿಗಳನ್ನು ಹೊಂದಿರುವ ಗ್ರೇಡಿಯಂಟ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ.
  • ಇದು 13ಎಂಪಿ ಮುಖ್ಯ ಸಂವೇದಕ ಮತ್ತು 2ಎಂಪಿ ಸೆಕೆಂಡರಿ ಲೆನ್ಸ್ ಅನ್ನು ಹೊಂದಿರುವ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಸಹ ಹೊಂದಿದೆ.
ವಿವೋದ ಗದರ್ ಫೋನ್ ಬಿಡುಗಡೆ: ಇದರ ವೈಶಿಷ್ಟ್ಯದ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್  title=
Vivo Y15c Launched In India

ಪ್ರಸಿದ್ದ  ಸ್ಮಾರ್ಟ್‌ಫೋನ್ ಕಂಪನಿ ವಿವೋ ಭಾರತದಲ್ಲಿ ರಹಸ್ಯವಾಗಿ ವಿವೋ ವೈ15ಸಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಫೋನ್ 6.51-ಇಂಚಿನ ಡಿಸ್ಪ್ಲೇ, ಶಕ್ತಿಯುತ 5,000mAh ಬ್ಯಾಟರಿ ಮತ್ತು 13ಎಂಪಿ ಕ್ಯಾಮೆರಾವನ್ನು ಹೊಂದಿದೆ. ವಿವೋ ವೈ15ಸಿ ಸ್ಮಾರ್ಟ್‌ಫೋನ್ ನ ಉತ್ತಮ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ...

ವಿವೋ ಕಂಪನಿಯ ನೂತನ ಸ್ಮಾರ್ಟ್‌ಫೋನ್ ವಿವೋ ವೈ15ಸಿ ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ದಿಲ್ಲದೆ ಬಿಡುಗಡೆ ಆಗಿದೆ.  ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ವೈ15ಎಸ್ ನಂತರ ಹೊಸ ವೈ-ಸರಣಿಯ ಸಾಧನವು ಎರಡನೇ ಕೊಡುಗೆಯಾಗಿದೆ. ವಿವೋ ವೈ15ಸಿ ಬಜೆಟ್ ಸ್ಮಾರ್ಟ್‌ಫೋನ್ ಆಗಿದೆ ಮತ್ತು ಇದು ವೈ15ಎಸ್ ನಂತೆಯೇ ಅದೇ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಎನ್ನಲಾಗಿದೆ. 

ವಿವೋ ವೈ15ಸಿ  6.51-ಇಂಚಿನ ಡಿಸ್ಪ್ಲೇ, ಶಕ್ತಿಯುತ 5,000mAh ಬ್ಯಾಟರಿ ಮತ್ತು 13ಎಂಪಿ ಕ್ಯಾಮೆರಾವನ್ನು ಹೊಂದಿದೆ. ಆದರೆ ಇದರ ಬೆಲೆ 15 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು ಎಂದು ಹೇಳಲಾಗುತ್ತಿದ್ದು ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಸಿಲ್ಲ. ವಿವೋ ವೈ15ಸಿ  ನ ಉತ್ತಮ ವೈಶಿಷ್ಟ್ಯಗಳನ್ನು ತಿಳಿಯೋಣ ...

ಇದನ್ನೂ ಓದಿ- Air Cooler Offers And Discounts: ಕೇವಲ 500 ರೂ.ಗೆ ಕಾಶ್ಮೀರದಂತೆ ಕೋಣೆಯನ್ನು ತಂಪಾಗಿಸುತ್ತಂತೆ ಈ ಏರ್ ಕೂಲರ್‌ಗಳು

ವಿವೋ ವೈ15ಸಿ ವಿಶೇಷಣಗಳು:
ವಿವೋ ವೈ15ಸಿ ಎಚ್ಡಿ+ರೆಸಲ್ಯೂಶನ್ ಮತ್ತು ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.51-ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ. ಸಾಧನವು ಲಂಬವಾದ ಪಟ್ಟಿಗಳನ್ನು ಹೊಂದಿರುವ ಗ್ರೇಡಿಯಂಟ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ. ಇದು 13ಎಂಪಿ ಮುಖ್ಯ ಸಂವೇದಕ ಮತ್ತು 2ಎಂಪಿ ಸೆಕೆಂಡರಿ ಲೆನ್ಸ್ ಅನ್ನು ಹೊಂದಿರುವ ಚೌಕಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಸಹ ಹೊಂದಿದೆ. 8ಎಂಪಿ ಮುಂಭಾಗದ ಸೆಲ್ಫಿ ಸ್ನ್ಯಾಪರ್ ಇದೆ. ಫೋನ್ ಫೋಟೋಗ್ರಫಿಗೆ ಸಂಬಂಧಿಸಿದ ವಿವಿಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ವಿವೋ ವೈ15ಸಿ  ಕ್ಯಾಮೆರಾ ಮತ್ತು ಬ್ಯಾಟರಿ: 
ಆಂತರಿಕವಾಗಿ, ವಿವೋ ವೈ15ಸಿ  ನಲ್ಲಿ ಮೀಡಿಯಾಟೆಕ್ ಹೆಲಿಯೋ ಪಿ35 ಪ್ರೊಸೆಸರ್ ಅಳವಡಿಸಲಾಗಿದೆ. ಇದನ್ನು 3ಜಿಬಿ ರಾಮ್ ನೊಂದಿಗೆ ಜೋಡಿಸಲಾಗಿದೆ ಮತ್ತು 32ಜಿಬಿ ಅಥವಾ 64ಜಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಹೆಚ್ಚುವರಿ ಸಂಗ್ರಹಣೆಗಾಗಿ ಮೀಸಲಾದ ಮೈಕ್ರೊ  ಎಸ್ಡಿ ಕಾರ್ಡ್ ಸ್ಲಾಟ್ ಇದೆ. 10ಡಬ್ಲ್ಯೂ ಚಾರ್ಜಿಂಗ್ ವೇಗಕ್ಕಾಗಿ 5,000mAh ಬ್ಯಾಟರಿ ಘಟಕದಿಂದ ಸ್ಮಾರ್ಟ್‌ಫೋನ್ ತನ್ನ ಶಕ್ತಿಯನ್ನು ಸೆಳೆಯುತ್ತದೆ. ಸಾಫ್ಟ್‌ವೇರ್‌ಗೆ ಸಂಬಂಧಿಸಿದಂತೆ, ಈ ಸಾಧನವು ಆಂಡ್ರಾಯ್ಡ್ 12 ಆಧಾರಿತ ಫನ್‌ಟಚ್ ಒಎಸ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ- EV charging stations: ಶೀಘ್ರದಲ್ಲೇ ರಾಜ್ಯದಲ್ಲಿ 1000 EV ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ವಿವೋ ವೈ15ಸಿ ಇತರ ವೈಶಿಷ್ಟ್ಯಗಳು:
ವಿವೋ ವೈ15ಸಿ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ ಯುಎಸ್ಬಿ ಪೋರ್ಟ್, ಡ್ಯುಯಲ್ 4ಜಿ ವೋಲ್ಟ್, ಜಿಪಿಎಸ್, 3.5ಎಂಎಂ ಹೆಡ್‌ಫೋನ್ ಜ್ಯಾಕ್, ವೈಫೈ ಮತ್ತು ಬ್ಲೂಟೂತ್ 5.2 ಸೇರಿವೆ. ಇತ್ತೀಚಿನ ವೈ15ಸಿ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಲಭ್ಯತೆಯನ್ನು ವಿವೋ ಇನ್ನೂ ಪ್ರಕಟಿಸಿಲ್ಲ. ಮಿಸ್ಟಿಕ್ ಬ್ಲೂ ಮತ್ತು ವೇವ್ ಗ್ರೀನ್ ಬಣ್ಣಗಳಲ್ಲಿ ಸ್ಮಾರ್ಟ್ಫೋನ್ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News