WhatsApp users Beware: ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ. ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಡೇಟಾ ಮತ್ತು ಗೌಪ್ಯತೆಯ ಕಾರಣದಿಂದಾಗಿ ಮತ್ತೆ ಮುನ್ನಲೆಗೆ ಬಂದಿದೆ. ಸುಮಾರು 500 ಮಿಲಿಯನ್ ಬಳಕೆದಾರರ ವಾಟ್ಸಾಪ್ ನಂಬರ್ ಆನ್ನು ಕದ್ದು ಆನ್ಲೈನ್ ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ವರದಿಯೊಂದು ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಸೈಬರ್‌ನ್ಯೂಸ್ ಸುದ್ದಿಯ ಪ್ರಕಾರ, ಡೇಟಾಸೆಟ್ 84 ದೇಶಗಳ ವಾಟ್ಸಾಪ್  ಬಳಕೆದಾರರ ಡೇಟಾವನ್ನು ಮತ್ತು ಯುಎಸ್ ನಿಂದ 32 ಮಿಲಿಯನ್ ಬಳಕೆದಾರರ ಫೋನ್ ನಂಬರ್, ಯುಕೆಯ 11 ಮಿಲಿಯನ್ ಮತ್ತು ರಷ್ಯಾದಿಂದ 10 ಮಿಲಿಯನ್ ಬಳಕೆದಾರರ ನಂಬರ್ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ


ಈಜಿಪ್ಟ್ (45 ಮಿಲಿಯನ್), ಇಟಲಿ (35 ಮಿಲಿಯನ್), ಸೌದಿ ಅರೇಬಿಯಾ (29 ಮಿಲಿಯನ್), ಫ್ರಾನ್ಸ್ (20 ಮಿಲಿಯನ್) ಮತ್ತು ಟರ್ಕಿ (20 ಮಿಲಿಯನ್) ನಾಗರಿಕರಿಗೆ ಸೇರಿದ ಫೋನ್ ಸಂಖ್ಯೆಗಳನ್ನು ಹ್ಯಾಕರ್‌ಗಳು ಹೊಂದಿದ್ದಾರೆಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಹ್ಯಾಕರ್ ಯುಎಸ್ ಡೇಟಾಸೆಟ್ ಅನ್ನು $ 7,000 (ರೂ. 5,72,481), ಯುಕೆ $ 2,500 (ರೂ. 2,04,457) ಮತ್ತು ಜರ್ಮನಿಯು $ 2,000 (ರೂ. 1,63,566) ಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 


ಇದನ್ನೂ ಓದಿ- Google Search: ಗೂಗಲ್‌ನಲ್ಲಿ ಈ 5 ವಿಷಯಗಳ ಹುಡುಕಾಟ ಶಿಕ್ಷಾರ್ಹ ಅಪರಾಧ


ಈ ರೀತಿ ದುರ್ಬಳಕೆ ಮಾಡಬಹುದು:
ವಾಸ್ತವವಾಗಿ, ವಾಟ್ಸಾಪ್, ಅನೇಕ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಒದಗಿಸುತ್ತದೆ, ಉದಾಹರಣೆಗೆ ಸ್ಟೇಟಸ್ ಮರೆ ಮಾಡುವುದು, ಪ್ರೊಫೈಲ್ ಫೋಟೋಗಳನ್ನು ಮರೆಮಾಡುವುದು ಇತ್ಯಾದಿ. ಈ ಸೆಟ್ಟಿಂಗ್‌ಗಳನ್ನು ಬಳಸುವ ಮೂಲಕ ಗ್ರಾಹಕರು ತಮ್ಮ ಗೌಪ್ಯತೆಯನ್ನು ಸುರಕ್ಷಿತವಾಗಿರಿಸಬಹುದು. ಆದಾಗ್ಯೂ, ಹ್ಯಾಕರ್ ಅವರು ಡೇಟಾವನ್ನು ಹೇಗೆ ಪಡೆದರು ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಡೇಟಾಬೇಸ್ ಅನ್ನು ಸ್ಪ್ಯಾಮಿಂಗ್, ಫಿಶಿಂಗ್ ಪ್ರಯತ್ನಗಳು, ಗುರುತಿನ ಕಳ್ಳತನ ಮತ್ತು ಇತರ ಸೈಬರ್ ಅಪರಾಧ ಚಟುವಟಿಕೆಗಳಿಗೆ ಹ್ಯಾಕರ್‌ಗಳು ಬಳಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ..