ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ

Dangerous Apps: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಎಚ್ಚರ! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಕೆಲವು ಅಪ್ಲಿಕೇಶನ್‌ಗಳು ನಿಮ್ಮನ್ನು ವಂಚನೆಗೆ ಬಲಿಪಶುವಾಗಿಸಬಹುದು. ಇತ್ತೀಚಿಗೆ  ಆಪ್ ಸ್ಟೋರ್‌ನಲ್ಲಿ ಅಂತಹ 4 ಅಪ್ಲಿಕೇಶನ್‌ಗಳು ಕಂಡುಬಂದಿವೆ. ಹ್ಯಾಕರ್‌ಗಳು ಈ ಅಪಾಯಕಾರಿ ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಫೋನ್ ಪ್ರವೇಶಿಸಿ ನಿಮ್ಮನ್ನು ದಿವಾಳಿಯಾಗಿಸಬಹುದು. ಇಂತಹ ಆಪ್ ಗಳನ್ನು ಈಗಾಗಲೇ ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಲಾಗಿದ್ದು ನಿಮ್ಮ ಫೋನ್‌ನಲ್ಲಿ ಇವುಗಳನ್ನು ಇನ್ಸ್ಟಾಲ್ ಮಾಡಿದ್ದರೆ ಕೂಡಲೇ ಅವುಗಳನ್ನು ಡಿಲೀಟ್ ಮಾಡಿ.

Written by - Yashaswini V | Last Updated : Nov 28, 2022, 07:08 AM IST
  • ಈ ಅಪ್ಲಿಕೇಶನ್‌ಗಳಲ್ಲಿ ಶಾರ್ಕ್‌ಬಾಟ್ ಮಾಲ್‌ವೇರ್ ಕಂಡುಬಂದಿದೆ
  • ಇದು ಬಳಕೆದಾರರ ಫೋನ್‌ಗಳಿಗೆ ವೈರಸ್ ಅಪಾಯವನ್ನು ತರುತ್ತಿದೆ.
  • ಗೂಗಲ್ ಪ್ಲೇ ಸ್ಟೋರ್‌ನಿಂದ ಈಗಾಗಲೇ ಇಂತಹ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ
ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ನಿಮ್ಮ ಫೋನ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಈಗಲೇ ಡಿಲೀಟ್ ಮಾಡಿ  title=
Dangerous Apps

Dangerous Apps: ಇತ್ತೀಚಿನ ದಿನಗಳಲ್ಲಿ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್‌ಗಳದ್ದೇ ಹಾವಳಿ. ಸ್ಮಾರ್ಟ್‌ಫೋನ್‌ ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿದೆಯೋ ಅಷ್ಟೇ ಅಪಾಯದಲ್ಲಿ ಉಳಿಯುವಂತೆಯೂ ಮಾಡಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೌದು, ಮೊದಲೆಲ್ಲಾ ಪ್ರತಿ ಬ್ಯಾಂಕಿಂಗ್ ಕೆಲಸಗಳಿಗೆ ನಾವು ಬ್ಯಾಂಕಿಗೆ ಹೋಗಬೇಕಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಬಂದ ಮೇಲೆ ನಮ್ಮ ಬಹುತೇಕ ಕೆಲಸಗಳನ್ನು ಫೋನ್ ಮೂಲಕವೇ ಪೂರ್ಣಗೊಳಿಸಬಹುದು. ಆದಾಗ್ಯೂ, ಇದರೊಂದಿಗೆ ಫಿಶಿಂಗ್, ಆನ್ಲೈನ್ ವಂಚನೆಯ ಭಯವೂ ಇದೆ. ವಾಸ್ತವವಾಗಿ, ನಾವು ಬಳಸುವ ಸ್ಮಾರ್ಟ್‌ಫೋನ್‌ನಲ್ಲಿ ನಾವು ಹಲವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿರುತ್ತೇವೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳು ಸಾಕಷ್ಟು ಸುರಕ್ಷಿತವಾಗಿದೆ ಎಂದು ನಂಬಲಾಗಿದೆ. ಆದರೆ ಆಪ್ ಸ್ಟೋರ್‌ನಲ್ಲಿ ಹಲವಾರು ವೈರಸ್‌ಗಳನ್ನು ಹೊಂದಿರುವ ಅನೇಕ ಅಪ್ಲಿಕೇಶನ್‌ಗಳಿವೆ. ಇವುಗಳನ್ನು ಡೌನ್‌ಲೋಡ್ ಮಾಡಿದ ನಂತರವೇ ಇದು ಸ್ಮಾರ್ಟ್‌ಫೋನ್‌ನಲ್ಲಿ ವೈರಸ್ ಅಪಾಯವನ್ನೂ ತರುತ್ತದೆ. ಇತ್ತೀಚಿಗೆ  ಆಪ್ ಸ್ಟೋರ್‌ನಲ್ಲಿ ಅಂತಹ 4 ಅಪಾಯಕಾರಿ ಅಪ್ಲಿಕೇಶನ್‌ಗಳು ಕಂಡುಬಂದಿವೆ. ಹ್ಯಾಕರ್‌ಗಳು ಈ ಅಪಾಯಕಾರಿ ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಫೋನ್ ಪ್ರವೇಶಿಸಿ ನಿಮ್ಮನ್ನು ದಿವಾಳಿಯಾಗಿಸಬಹುದು.

ಹೌದು, ಈಗ ಸೈಬರ್ ಭದ್ರತಾ ತಜ್ಞರು Play Store ನಲ್ಲಿ ಹಲವಾರು ಫೈಲ್ ಮ್ಯಾನೇಜರ್ Android ಅಪ್ಲಿಕೇಶನ್‌ಗಳಲ್ಲಿ Sharkbot ಮಾಲ್‌ವೇರ್‌ನ ರೂಪಾಂತರಗಳನ್ನು ಪತ್ತೆ ಹಚ್ಚಿದ್ದಾರೆ. ಇಂತಹ ಆಪ್ ಗಳನ್ನು ಈಗಾಗಲೇ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಬ್ಯಾನ್ ಮಾಡಿದೆ. ಆದಾಗ್ಯೂ, ಈ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಮೊದಲು  ಸಾವಿರಾರು ಜನರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿರುವ ಬಳಕೆದಾರರ ಫೋನ್‌ಗಳು ಈಗ ವೈರಸ್ ಅಪಾಯದಲ್ಲಿವೆ.

ಇದನ್ನೂ ಓದಿ- Google Search: ಗೂಗಲ್‌ನಲ್ಲಿ ಈ 5 ವಿಷಯಗಳ ಹುಡುಕಾಟ ಶಿಕ್ಷಾರ್ಹ ಅಪರಾಧ

ಈ ಕುರಿತಂತೆ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿರುವ ಸೈಬರ್ ಭದ್ರತಾ ತಜ್ಞರು, 'ಈ ಅಪ್ಲಿಕೇಶನ್‌ಗಳಲ್ಲಿ ಶಾರ್ಕ್‌ಬಾಟ್ ಮಾಲ್‌ವೇರ್ ಕಂಡುಬಂದಿದೆ, ಇದು ಬಳಕೆದಾರರ ಫೋನ್‌ಗಳಿಗೆ ವೈರಸ್ ಅಪಾಯವನ್ನು ತರುತ್ತಿದೆ. ಇನ್‌ಸ್ಟಾಲ್ ಮಾಡಿದ ನಂತರ, ಅದರಲ್ಲಿ ಪರ್ಮಿಷನ್ ಕೇಳಲಾಗುತ್ತದೆ. ಅದನ್ನು ಸ್ವೀಕರಿಸಿದ ನಂತರ ಅದು ಫೋನ್‌ನಲ್ಲಿ ಸಿಲುಕಿಕೊಳ್ಳುತ್ತದೆ. ಈ ಫೈಲ್ ಮ್ಯಾನೇಜರ್ ಅಪ್ಲಿಕೇಶನ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಈಗಾಗಲೇ ಇಂತಹ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆಯಾದರೂ, ಇವುಗಳನ್ನುಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದ್ದರಿಂದ ಡೌನ್‌ಲೋಡ್ ಮಾಡುವ ಮೊದಲು ಈ ಅಪ್ಲಿಕೇಶನ್ ಎಷ್ಟು ಸುರಕ್ಷಿತವಾಗಿದೆ, ಇದು ನಮ್ಮ ಸಾಧನಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ನೀವು ತಿಳಿದಿರಬೇಕು. ಒಂದೊಮ್ಮೆ ನೀವು ಈಗಾಗಲೇ ಈ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಮ್ಮ ಸಾಧನದಲ್ಲಿ ಡೌನ್‌ಲೋಡ್ ಮಾಡಿದ್ದರೆ, ನೀವು ಅವುಗಳನ್ನು ಫೋನ್‌ನಿಂದ ತಕ್ಷಣವೇ ಅನ್ ಇನ್ಸ್ಟಾಲ್ ಮಾಡುವುದು ಒಳ್ಳೆಯದು ಎಂದು ತಿಳಿಸಿದೆ.

ಈ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ!
ಮೊದಲನೆಯದಾಗಿ, ಎಕ್ಸ್-ಫೈಲ್ ಮ್ಯಾನೇಜರ್‌ನಲ್ಲಿ ಮಾಲ್‌ವೇರ್ ಇದೆ ಎಂದು ತಿಳಿದುಬಂದಿದೆ, ಇದನ್ನು ವಿಕ್ಟರ್ ಸಾಫ್ಟ್ ಐಸಿ ಎಲ್ಎಲ್‌ಸಿ ಅಭಿವೃದ್ಧಿಪಡಿಸಿದೆ. ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವ ಮೊದಲು 10,000 ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಅದರ ನಂತರ ಸಂಶೋಧಕರು 'FileVoyager', 'Phone AID, Cleaner, Booster' ಮತ್ತು 'LiteCleaner M' ನಂತಹ ಅಪ್ಲಿಕೇಶನ್‌ಗಳಲ್ಲಿ ಮಾಲ್‌ವೇರ್ ಅನ್ನು ಪತ್ತೆ ಮಾಡಿದ್ದಾರೆ. ಇದು ಯುಕೆ ಮತ್ತು ಇಟಲಿಯಲ್ಲಿ ಗರಿಷ್ಠ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಆನ್‌ಲೈನ್ ಬ್ಯಾಂಕಿಂಗ್ ಬಳಕೆ ವೇಳೆ ಈ ವಿಷಯಗಳನ್ನು ನೆನಪಿನಲ್ಲಿಟ್ಟರೆ ವಂಚನೆಗೆ ಬಲಿಯಾಗುವುದಿಲ್ಲ!

ಇಂತಹ ಮಾಲ್‌ವೇರ್ ಅಪಾಯವನ್ನು ತಪ್ಪಿಸಲು ಏನು ಮಾಡಬೇಕು?
ಮಾಲ್‌ವೇರ್ ವೈರಸ್ ಅಪ್ಲಿಕೇಶನ್‌ಗಳನ್ನು ತಪ್ಪಿಸಲು, ನಿಮ್ಮ Android ಸಾಫ್ಟ್‌ವೇರ್ ನವೀಕೃತವಾಗಿದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನೀವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುತ್ತಿದ್ದರೆ ಅದನ್ನು ಅಧಿಕೃತ ಪ್ಲೇ ಸ್ಟೋರ್ ಮೂಲಕವೇ ಇನ್ಸ್ಟಾಲ್ ಮಾಡಿ.  ಡೌನ್‌ಲೋಡ್ ಮಾಡುವ ಮೊದಲು, ಎಷ್ಟು ಜನರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ, ಆಪ್ ಸ್ಟೋರ್‌ನಲ್ಲಿ ಎಷ್ಟು ರೇಟಿಂಗ್‌ಗಳು ಮತ್ತು ವಿಮರ್ಶೆಗಳಿವೆ ಎಂಬುದನ್ನು ತಪ್ಪದೇ ಪರಿಶೀಲಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News