ಬದಲಾಗಲಿದೆ ಸಿಮ್ ಕಾರ್ಡ್ನ ನಿಯಮ: ಈ ಕೆಲಸ ಮಾಡದಿದ್ರೆ ಬೀಳುತ್ತೇ 10 ಲಕ್ಷ ರೂ. ದಂಡ
SIM CARD New Rule: ಫೋನ್ ಚಲಾವಣೆಗೆ ಸಿಮ್ ಕಾರ್ಡ್ ಅತ್ಯಗತ್ಯ. ಇದೀಗ ಶೀಘ್ರದಲ್ಲೇ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ದೇಶಾದ್ಯಂತ ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ (DoT) ಮಹತ್ವದ ಸುತ್ತೋಲೆ ಹೊರಡಿಸಿದೆ.
SIM CARD New Rule: ಭಾರತ ಸರ್ಕಾರವು ಹೊಸ ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಗ್ರಾಹಕರ ಸುರಕ್ಷಿತ ಮತ್ತು ವಿಶ್ವಾಸಾರ್ಹತೆ ನಿಟ್ಟಿನಲ್ಲಿ ಹೊಸ ಸಿಮ್ ಕಾರ್ಡ್ ಅನ್ನು ಖರೀದಿಸುವ ಮತ್ತು ಸಕ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಾದ ನಿಯಮವನ್ನು ಪರಿಚಯಿಸಿದೆ. ದೇಶಾದ್ಯಂತ ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸಲು ದೂರಸಂಪರ್ಕ ಇಲಾಖೆಯು (DoT) ಈ ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಿದೆ.
ಹೌದು, ದೂರಸಂಪರ್ಕ ಇಲಾಖೆ (DoT) ಸಿಮ್ ಕಾರ್ಡ್‌ಗಳ ಬಳಕೆಯನ್ನು ನಿಯಂತ್ರಿಸಲು ಸಿಮ್ ಕಾರ್ಡ್‌ಗಳ ಖರೀದಿಗೆ ಸಂಬಂಧಿಸಿದಂತೆ ಎರಡು ಸುತ್ತೋಲೆಗಳನ್ನು ಹೊರಡಿಸಿದೆ. ಈ ನಿಯಮಾನುಸಾರ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಅಂಗಡಿಗಳು ಈಗ ಇನ್ನೂ ಹೆಚ್ಚು ಜಾಗರೂಕರಾಗಿರಬೇಕು. ಅಂಗಡಿಯಲ್ಲಿ ಕೆಲಸ ಮಾಡುವ ಜನರು ಅಥವಾ ಸಿಮ್ ಕಾರ್ಡ್ ವಿತರಿಸುವವರು ಸಿಮ್ ಕಾರ್ಡ್ ಖರೀದಿಸುವ ವ್ಯಕ್ತಿಯ ಪೂರ್ವಾಪರ, ಹಿನ್ನೆಲೆಯನ್ನು ಪರಿಶೀಲಿಸಬೇಕು. ಒಂದೊಮ್ಮೆ ಈ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅಂತಹ ವಿತರಕರಿಗೆ 10 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- ಎಚ್ಚರ! ಕಂಪ್ಯೂಟರ್ ಕೀಬೋರ್ಡ್ ಸದ್ದು ಕೇಳಿ ಪಾಸ್ವರ್ಡ್ ಪತ್ತೆಹಚ್ಚಿದ ಹ್ಯಾಕರ್! ಹೇಗೆ ಸಾಧ್ಯ ಅಂತೀರಾ?
ಈ ದಿನದಿಂದ ಜಾರಿಗೆ ಬರಲಿದೆ ಹೊಸ ನಿಯಮ:
ದೂರಸಂಪರ್ಕ ಇಲಾಖೆ (DoT) ಪ್ರಕಾರ, ವಂಚನೆಯ ಸಿಮ್ ಕಾರ್ಡ್‌ಗಳ ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ನಿಯಮಗಳು ಅಕ್ಟೋಬರ್ 01, 2023ರಿಂದ ಜಾರಿಗೆ ಬರಲಿವೆ. ಇದಕ್ಕಾಗಿ, ಸೆಪ್ಟೆಂಬರ್ 30, 2023ರ ಮೊದಲು ಸಿಮ್ ಕಾರ್ಡ್ ಕಂಪನಿಗಳು ತಮ್ಮ ಎಲ್ಲಾ ಮಾರಾಟ ಕೇಂದ್ರಗಳನ್ನು (POS) ನೊಂದಾಯಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ದೂರಸಂಪರ್ಕ ಇಲಾಖೆಯ ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ, ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ನಿಗಾ ಇಡಬೇಕಾಗಿರುವುದು ಅವಶ್ಯಕವಾಗಿದೆ. ಮಾತ್ರವಲ್ಲ, ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅಂಗಡಿಗಳು ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆಯೇ ಎಂಬುದನ್ನೂ ಕಂಪನಿಗಳು ದೃಢಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ- ಫ್ರಿಜ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟಿರಬೇಕುಷ್ಟು?ನಿಮಗೆ ಗೊತ್ತಿರದ ಮಾಹಿತಿ ಇದು !
ಈ ರಾಜ್ಯಗಳಲ್ಲಿ ಸಿಮ್ ಕಾರ್ಡ್ ಪಡೆಯಲು ಅಗತ್ಯ ಪೊಲೀಸ್ ಪರಿಶೀಲನೆ ಅತ್ಯಗತ್ಯ:
ಇನ್ನೂ ಅಸ್ಸಾಂ, ಕಾಶ್ಮೀರ ಮತ್ತು ಈಶಾನ್ಯದಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಟೆಲಿಕಾಂ ಆಪರೇಟರ್‌ಗಳು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಅಂಗಡಿಗಳು ಪೊಲೀಸ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಈ ರಾಜ್ಯಗಳಲ್ಲಿ ಪೊಲೀಸ್ ಪರಿಶೀಲನೆ ನಂತರವೇ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.
ಸಿಮ್ ಕಳೆದು ಹೋದರೆ ಏನು ಮಾಡಬೇಕು?
ಅಕ್ಟೋಬರ್ 01, 2023ರ ಬಳಿಕ ಒಂದೊಮ್ಮೆ ನಿಮ್ಮ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಕಳೆದು ಹೋದರೆ, ಇಲ್ಲವೇ ನಿಮ್ಮ ಸಿಮ್ ಕಾರ್ಡ್ ಹಾನಿಗೊಳಗಾಗಿದ್ದರೆ ನೀವು ಹೊಸ ಸಿಮ್ ಕಾರ್ಡ್ ಪಡೆಯಲು ಸಹ ವಿವರವಾದ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.