ಫ್ರಿಜ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟಿರಬೇಕುಷ್ಟು?ನಿಮಗೆ ಗೊತ್ತಿರದ ಮಾಹಿತಿ ಇದು !

ಇನ್ನು ಎಲ್ಲಿಯೇ ಇಟ್ಟರೂ ಫ್ರಿಡ್ಜ್ ಅನ್ನು ಗೋಡೆಯಿಂದ ಎಷ್ಟು ದೂರದಲ್ಲಿ ಇಡಬೇಕು ಎನ್ನುವುದು ಕೂಡಾ ಬಹಳ ಮುಖ್ಯವಾದ ಪ್ರಶ್ನೆ. 

Written by - Ranjitha R K | Last Updated : Aug 21, 2023, 04:30 PM IST
  • ಫ್ರಿಜ್ ಅನ್ನು ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲರೂ ಬಳಸುತ್ತಾರೆ.
  • ರೆಫ್ರಿಜರೇಟರ್ ಇಂದಿನ ಯುಗದಲ್ಲಿ ಅಗತ್ಯ ಸಾಧನ.
  • ಅಡುಗೆ ಮನೆಯಲ್ಲಿ ಫ್ರಿಜ್ ಇದ್ದರೆ ಮಹಿಳೆಯರ ಕೆಲಸ ಸರಾಗ
ಫ್ರಿಜ್ ಮತ್ತು ಗೋಡೆಯ ನಡುವಿನ ಅಂತರ ಎಷ್ಟಿರಬೇಕುಷ್ಟು?ನಿಮಗೆ ಗೊತ್ತಿರದ ಮಾಹಿತಿ ಇದು ! title=

ಬೆಂಗಳೂರು : ಫ್ರಿಜ್ ಅನ್ನು ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲರೂ ಬಳಸುತ್ತಾರೆ. ರೆಫ್ರಿಜರೇಟರ್ ಇಂದಿನ ಯುಗದಲ್ಲಿ ಅಗತ್ಯ ಸಾಧನ. ಅಡುಗೆ ಮನೆಯಲ್ಲಿ ಫ್ರಿಜ್ ಇದ್ದರೆ ಮಹಿಳೆಯರ ಕೆಲಸ ಸರಾಗ. ಬ್ಯುಸಿ ಲೈಫ್ ನಲ್ಲಿ ಫ್ರಿಜ್ ಬಹಳ ಸಹಾಯವಾಗುತ್ತದೆ. ಇನ್ನು ಫ್ರಿಜ್ ಹೆಚ್ಚು ವಿದ್ಯುತ್  ಕೂಡಾ ಬಳಸುವುದಿಲ್ಲ. ಆದರೆ ಅದನ್ನು ಉತ್ತಮ ರೀತಿಯಲ್ಲಿ ಬಳಸುವುದು ಅವಶ್ಯಕ. ಫ್ರಿಡ್ಜ್ ಅನ್ನು ಯಾವ ಸ್ಥಳದಲ್ಲಿ ಇಡಬೇಕು ಎನ್ನುವುದು ಕೂಡಾ ಇಲ್ಲಿ ಮುಖ್ಯವಾಗಿರುತ್ತದೆ. ಕೆಲವರು ಅಡುಗೆಮನೆಯಲ್ಲಿ ಫ್ರಿಜ್ ಇಡಲು ಭಯಪಡುತ್ತಾರೆ. ಹಾಲ್‌ನಲ್ಲಿ ಫ್ರಿಜ್ ಇಟ್ಟರೆ ಸುರಕ್ಷಿತ ಎಂದು ಭಾವಿಸುತ್ತಾರೆ. ಇನ್ನು ಎಲ್ಲಿಯೇ ಇಟ್ಟರೂ ಫ್ರಿಡ್ಜ್ ಅನ್ನು ಗೋಡೆಯಿಂದ ಎಷ್ಟು ದೂರದಲ್ಲಿ ಇಡಬೇಕು ಎನ್ನುವುದು ಕೂಡಾ ಬಹಳ ಮುಖ್ಯವಾದ ಪ್ರಶ್ನೆ. 

ಅಂತರ ಎಷ್ಟಿರಬೇಕು ? : 
ಫ್ರಿಜ್‌ನ ನಿರ್ವಹಣೆ ಬಹಳ ಮುಖ್ಯ. ಇದರಲಿ ಬಹಳ ಮುಖ್ಯವಾದುದು ಸರಿಯಾದ ಸ್ಥಳದಲ್ಲಿ ಫ್ರಿಜ್ ಅನ್ನು ಇಡುವುದು. ಫ್ರಿಜ್‌ನ ಹಿಂದಿನ ಗಾತ್ರವು ಗೋಡೆಯಿಂದ ಕನಿಷ್ಠ 2 ಇಂಚುಗಳಷ್ಟು ದೂರದಲ್ಲಿರಬೇಕು ಎನ್ನುತ್ತಾರೆ ತಜ್ಞರು. ಅದೇ ಸಮಯದಲ್ಲಿ, ಮೇಲ್ಭಾಗ ಮತ್ತು ಬದಿಗಳಲ್ಲಿ 1-ಇಂಚಿನ ಅಂತರವನ್ನು ಹೊಂದಿರುವುದು ಕೂಡಾ ಅವಶ್ಯಕ. ಫ್ರಿಜ್ ಅನ್ನು ಹೀಗೆ ಇಟ್ಟರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. 

ಇದನ್ನೂ ಓದಿ : Chandrayaan 3 :ಚಂದ್ರನ ಮೇಲೈ ಸ್ಪರ್ಶಕ್ಕೆ ಕ್ಷಣಗಣನೆ ! ಈ ಅದ್ಬುತದ ನೇರ ದೃಶ್ಯಗಳನ್ನು ಇಲ್ಲಿ ವೀಕ್ಷಿಸಿ

ಅಧಿಕ ಬಿಸಿಯಾಗುವುದನ್ನು ತಡೆಯುತ್ತದೆ :
ಫ್ರಿಜ್ ಅನ್ನು ಗೋಡೆಗೆ ತೀರಾ ಹತ್ತಿರದಲ್ಲಿ ಇಡಬಾರದು. ಗೋಡೆಗೆ ತುಂಬಾ ಹತ್ತಿರದಲ್ಲಿ ಫ್ರಿಜ್ ಅನ್ನು ಇಟ್ಟರೆ ಅದು ಹೆಚ್ಚು ಬಿಸಿಯಾಗುತ್ತದೆ. ಹಿಂದೆ ಜಾಗ ಬಿಟ್ಟಿದ್ದರೆ ಗಾಳಿಯ ಸಂಚಾರ ಸರಿಯಾಗಿ ಆಗುತ್ತದೆ. ಫ್ರಿಡ್ಜ್ ಗೋಡೆಗೆ ಅಂಟಿಕೊಂಡರೆ, ಕಂಡೆನ್ಸರ್ ಕಾಯಿಲ್‌ಗಳಿಂದ ಹೊರಬರುವ ಬಿಸಿ ಗಾಳಿಯು ಹೊರಬರುವುದಿಲ್ಲ. 

ಕಂಡೆನ್ಸರ್ ಕಾಯಿಲ್‌ಗಳು ಫ್ರಿಜ್‌ನ ಹಿಂಭಾಗದಲ್ಲಿರುತ್ತವೆ. ಫ್ರಿಜ್ ಅನ್ನು ತಂಪಾಗಿಸುವುದು ಇದರ ಕೆಲಸ. ಫ್ರಿಡ್ಜ್ ಸುತ್ತಲೂ ಜಾಗವನ್ನು ಬಿಡುವುದು ಅವಶ್ಯಕ. ಇದರಿಂದ ಗಾಳಿಯು ಎಲ್ಲಾ ಕಡೆಯಿಂದ ಹೊರಬರುತ್ತದೆ. ಇದಕ್ಕಿಂತ ಹೆಚ್ಚು ಧೂಳು ಸಂಗ್ರಹವಾಗುವುದಿಲ್ಲ ಮತ್ತು ನೀವು ಅದನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ ವಾಟ್ಸಪ್‌ನಲ್ಲೂ ಬಂತು ಹೊಸ ಫೀಚರ್‌..ಇಂಟರ್‌ನೆಟ್‌ ಲೋ ಇದ್ರೆ ಈ ಸೌಲಭ್ಯ ಲಾಭ ಇಲ್ಲ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News