Sim Card: ಹೊಸ ಸಿಮ್‌ ಖರೀದಿಸುವವರು ಈ ತಪ್ಪು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್‌!

New Rule for Sim Card: ಸಾಮಾನ್ಯವಾಗಿ ಎಲ್ಲರೂ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಸದ್ಯ ವಂಚನೆಗಳು ಕರೆಯ ಮೂಲಕವೂ ನಡೆಯುತ್ತಿವೆ. ಒಂದು ಸಿಮ್‌ ಕಾರ್ಡ್‌ ಬಳಸಿ ವಂಚಿಸಿ ಮತ್ತೊಮ್ಮೆ ಆ ಸಿಮ್‌ ಕಾರ್ಡ್‌ ಬಳಸುವುದೇ ಇಲ್ಲ. ಇದರಿಂದಾಗಿ ಸರ್ಕಾರ ಹೊಸ ಸಿಮ್‌ ಖರೀದಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಜಾರಿಗೆ ತಂದಿದೆ. ಏನದು ಅಂತೀರಾ ಮುಂದೆ ಓದಿ..

Written by - Savita M B | Last Updated : Aug 19, 2023, 04:03 PM IST
  • ಇತ್ತೀಚೆಗೆ ದೇಶದಲ್ಲಿ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ.
  • ದೇಶದಲ್ಲಿ ಹೆಚ್ಚಾಗುತ್ತಿರುವ ಸೈಬರ್‌ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ
  • ಈ ಹೊಸ ನಿಯಮವನ್ನು ಜಾರಿಗೊಳಿಸಿ 52 ಲಕ್ಷ ಮೊಬೈಲ್‌ ನಂಬರ್‌ಗಳನ್ನು ರದ್ದು ಮಾಡಲಾಗಿದೆ
Sim Card: ಹೊಸ ಸಿಮ್‌ ಖರೀದಿಸುವವರು ಈ ತಪ್ಪು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್‌!  title=

Sim Card Rules : ಇತ್ತೀಚೆಗೆ ದೇಶದಲ್ಲಿ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಇದನ್ನೆಲ್ಲಾ ತಡೆಯಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಒಂದು ವಿಧದಲ್ಲಿ ವಂಚನೆಯನ್ನು ತಡೆದರೆ ವಂಚಕರು ಇನ್ನೊಂದು ವಿಧಾನ ಹುಡುಕಿ ವಂಚಿಸುತ್ತಾರೆ. ಆದ್ದರಿಂದ ಈ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. 

ದೇಶದಲ್ಲಿ ಹೆಚ್ಚಾಗುತ್ತಿರುವ ಸೈಬರ್‌ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದು, ಒಂದೇ ಸಮಯದಲ್ಲಿ ಹೆಚ್ಚು ಸಿಮ್‌ ಖರೀದಿಸುವುದನ್ನು ಸರ್ಕಾರ ನಿಷೇಧಿಸಿದೆ. ಡಿಜಿಟಲ್‌ ವಂಚನೆಯ ಪ್ರಕರಣಗಳನ್ನು ಕಡಿಮೆಮಾಡಲು ಸರ್ಕಾರ ಸಿಮ್‌ ಕಾರ್ಡ್‌ ಮಾರಾಟ ಮಾಡುವವವರಿಗೆ ಪೊಲೀಸ್‌ ಪರಿಶೀಲನೆಗೆ ಒಳಪಡುತ್ತಾರೆ ಎಂದು ಘೋಷಿಸಿದೆ. 

ಇದನ್ನೂ ಓದಿ-'Akira' ಕಂಪ್ಯೂಟರ್ ಬಳಕೆದಾರರೇ ಎಚ್ಚರ!

ಹೀಗಾಗಿ ಇನ್ನು ಮುಂದೆ ಡೀಲರ್ಗಳು ಸಿಮ್‌ ನೀಡುವ ಮುನ್ನ ಕಾಳಜಿ ಜೊತೆಗೆ ಎಚ್ಚರವನ್ನು ವಹಿಸಬೇಕು. ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಸಿಮ್‌ ಕಾರ್ಡ್‌ ಮಾರಾಟಗಾರರು ಸಿಮ್‌ ಮಾರುವ ಮುನ್ನ ಗ್ರಾಹಕರು ಕೆವೈಸಿ ನಿಯಮಗಳನ್ನು ಪಾಲಿಸುವಂತೆ ಕಡ್ಡಾಯಗೊಳಿಸಲಾಗಿದೆ. 

ಕೆಲವು ವರದಿಗಳ ಪ್ರಕಾರ ಈಗಾಗಲೇ ಈ ಹೊಸ ನಿಯಮವನ್ನು ಜಾರಿಗೊಳಿಸಿ 52 ಲಕ್ಷ ಮೊಬೈಲ್‌ ನಂಬರ್‌ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ. ಇನ್ನು ಈ ಹೊಸ ನಿಯಮವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸಲಾಗುವುದು. ಜೊತೆಗೆ ಇನ್ನುಮುಂದೆ ಸಿಮ್‌ ಖರೀದಿಸುವ ಪ್ರತಿಯೊಬ್ಬ ಗ್ರಾಹಕರು ಬಯೋಮೆಟ್ರೀಕ್‌ ಪರಿಶೀಲನೆ ಮಾಡಿಕೊಳ್ಳಬೇಕು. 

ಇದನ್ನೂ ಓದಿ-ಬರುತ್ತಿದೆ 10 ಸಾವಿರಕ್ಕಿಂತ ಕಡಿಮೆ ಬೆಲೆಯ ಸೂಪರ್ Smartphone!ವಿನ್ಯಾಸ ವೈಶಿಷ್ಟ್ಯ ಎರಡೂ ಅದ್ಭುತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News