ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಿಲ್‌ಗಳ ಬೆಲೆ ಪ್ರತಿಯೊಬ್ಬರನ್ನು ತೊಂದರೆಗೀಡು ಮಾಡಿದೆ.ವಿದ್ಯುತ್ ಬಿಲ್ ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಸಲಹೆಗಳು ಮತ್ತು ಹ್ಯಾಕ್‌ಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ವೈರಲ್ ಆಗುತ್ತಿರುತ್ತವೆ. ಮಳೆಗಾಲದಲ್ಲಿ ಕೆಲವು ವಸ್ತುಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ವಿದ್ಯುತ್ ಬಿಲ್ ಅನ್ನು ಅರ್ಧಕ್ಕೆ ಇಳಿಸಬಹುದು ಎನ್ನಲಾಗಿದೆ. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಮಳೆಗಾಲದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. 


COMMERCIAL BREAK
SCROLL TO CONTINUE READING

ಮಳೆಯಲ್ಲಿ ಎರಡು ವಸ್ತುಗಳನ್ನು ಆಫ್ ಮಾಡಬೇಕು : 
ವಾಟರ್ ಹೀಟರ್:ಮಳೆಗಾಲದಲ್ಲಿ ತಾಪಮಾನ ಕಡಿಮೆಯಿರುತ್ತದೆ.ಈ ಕಾರಣದಿಂದ ವಾಟರ್ ಹೀಟರ್ ಅನ್ನು ಕಡಿಮೆ ತಾಪಮಾನಕ್ಕೆ ಹೊಂದಿಸಿಕೊಳ್ಳುವುದು ಒಳ್ಳೆಯದು. ಇದು ವಿದ್ಯುತ್ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.


ಇದನ್ನೂ ಓದಿ : ಬಿಡುಗಡೆಯಾಯಿತು Maruti Swift CNG!ಜಾಸ್ತಿ ಮೈಲೇಜ್ ನೀಡುವ ಈ ಕಾರಿನ ಬೆಲೆ ಬಲು ಅಗ್ಗ!


ಹವಾನಿಯಂತ್ರಣ:ಮಳೆಗಾಲದಲ್ಲಿ ಕಡಿಮೆ ತಾಪಮಾನದ ಕಾರಣ, ಹವಾನಿಯಂತ್ರಣವನ್ನು ಬಳಸುವುದನ್ನು ಕಡಿಮೆ ಮಾಡಬಹುದು. ಒಂದು ವೇಳೆ ಎಸಿಯನ್ನು ಬಳಸಬೇಕಾದರೆ ಅದನ್ನು ಹೆಚ್ಚಿನ ತಾಪಮಾನಕ್ಕೆ ಹೊಂದಿಸಿ ಅಥವಾ ಫ್ಯಾನ್ ಬಳಸಿ.


 ಸ್ವಿಚ್ ಆಫ್ ಮಾಡುವುದು ಹೇಗೆ ಪ್ರಯೋಜನವಾಗಲಿದೆ ? : 
ಎರಡೂ ಎಲೆಕ್ಟ್ರಾನಿಕ್ ಸಾಧನಗಳು ಸಾಕಷ್ಟು ವಿದ್ಯುತ್ ಬಳಸುತ್ತವೆ. ಗೀಸರ್ ನೀರನ್ನು ಬಿಸಿಮಾಡಲು ಹೆಚ್ಚು ವಿದ್ಯುತ್ ಅನ್ನು ಸೆಳೆಯುತ್ತದೆ. ಹವಾನಿಯಂತ್ರಣವು ಮನೆಯನ್ನು ತಂಪಾಗಿಸಲು ಹೆಚ್ಚಿನ ವಿದ್ಯುತ್ ಅನ್ನು ಸೆಳೆಯುತ್ತದೆ.ಇವುಗಳನ್ನು  ಸ್ವಿಚ್ ಆಫ್ ಮಾಡಿದರೆ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : 23kmpl ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಬೆಲೆಯೂ 5 ಲಕ್ಷಕ್ಕಿಂತ ಕಡಿಮೆ! ಖರೀದಿಗೆ ಇದು ಬೆಸ್ಟ್ ಟೈಂ


ಬೇರೆ ಯಾವ ವಿಧಾನಗಳಿವೆ?:
ಫ್ಯಾನ್ ಬಳಸಿ: ಹವಾನಿಯಂತ್ರಣದ ಬದಲಿಗೆ ಫ್ಯಾನ್ ಬಳಸಿ.
ಬೆಳಕು: ಹಗಲಿನಲ್ಲಿ ನೈಸರ್ಗಿಕ ಬೆಳಕನ್ನು ಮತ್ತು ರಾತ್ರಿಯಲ್ಲಿ ಕಡಿಮೆ ವ್ಯಾಟ್ ಬಲ್ಬ್ ಗಳನ್ನು ಬಳಸಿ.
ಎಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಿ: ಬಳಕೆಯಲ್ಲಿಲ್ಲದಿದ್ದಾಗ ಎಲೆಕ್ಟ್ರಾನಿಕ್ ಸಾಧನಗಳನ್ನು ಆಫ್ ಮಾಡಿ.
ಎನರ್ಜಿ ಎಫಿಷಿಯೆಂಟ್ ಡಿವೈಸ್ : ಎನರ್ಜಿ ಎಫಿಷಿಯೆಂಟ್ ಡಿವೈಸ್  ಬಳಸುವುದರಿಂದ ದೀರ್ಘಾವಧಿಯಲ್ಲಿ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಬಹುದು.
ಸೌರ ಫಲಕ:
ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಬಿಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ