Smartphone Trick: ಇಂದು ಪ್ರತಿಯೊಬ್ಬರ ಕೈಯಲ್ಲಿ ನಿಮಗೆ ಸ್ಮಾರ್ಟ್ ಫೋನ್ ನೋಡಲು ಸಿಗುತ್ತಿದೆ. ಅದು ಸಾಮಾನ್ಯ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅತ್ಯಾವಶ್ಯಕ ಕೆಲಸದಿಂದ ಹಿಡಿದು, ಕರೆ ಮಾಡಲು, ಟೈಮ್ ಪಾಸ್ ಮಾಡಲು ಹಾಗೂ ಗೇಮಿಂಗ್ ಗಳಿಗಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ. ಸ್ಮಾರ್ಟ್ ಫೋನ್ ಇಲ್ಲದೆ, ಜನರ ಜೀವನ ಹೇಗೆ ಇರಲಿದೆ ಎಂಬುದನ್ನು ಕಲ್ಪಿಸಲು ಕೂಡ ಸಾಧ್ಯವಿಲ್ಲ, ಆದರೆ ಸಾಕಷ್ಟು ಸೌಕರ್ಯಗಳನ್ನು ಒದಗಿಸುವ ಸ್ಮಾರ್ಟ್ಫೋನ್ ಕೆಲವೊಮ್ಮೆ ಜನರಿಗೆ ತೊಂದರೆಯನ್ನು ಕೂಡ ಉಂಟುಮಾಡುತ್ತದೆ. ನಿಮ್ಮ ಬಳಿ ಇರುವ ಮೊಬೈಲ್ ಮೂಲಕ ಓರ್ವ ವ್ಯಕ್ತಿಯು ನಿಮ್ಮ ಮೇಲೆ ವಿವಿಧ ರೀತಿಯಲ್ಲಿ ಕಣ್ಣಿಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗೌಪ್ಯತೆ ಮತ್ತು ಡೇಟಾ ಅಪಾಯದಲ್ಲಿರುತ್ತದೆ. ಇಂದು ನಾವು ನಿಮಗೆ ಕೆಲ ಟ್ರಿಕ್ ಗಳನ್ನು ಹೇಳುತ್ತಿದ್ದು, ಅವುಗಳನ್ನು ಬಳಸುವ ಮೂಲಕ ನೀವು ಯಾರಾದರೂ ನಿಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.

COMMERCIAL BREAK
SCROLL TO CONTINUE READING

ತಿಳಿಯಲು ತುಂಬಾ ಸುಲಭ
ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕೆ? ಹೌದು, ಅದನ್ನು ತಿಳಿದುಕೊಳ್ಳುವುದು ತುಂಬಾ ಸುಲಭ. ಕೆಲವು ಕೋಡ್ ಗಳನ್ನು ಬಳಸುವ  ಮೂಲಕ ನೀವು ಸುಲಭವಾಗಿ ಅದನ್ನು  ಕಂಡುಹಿಡಿಯಬಹುದು. ಅಷ್ಟೇ ಅಲ್ಲ, ಈ ಕೋಡ್‌ಗಳು ಅಂತಹ ಚಟುವಟಿಕೆಯನ್ನು ತಡೆಯಲು ಕೂಡ ಸಹಾಯ ಮಾಡುತ್ತವೆ. ಆ ಕೋಡ್ ಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

1. ##002#
ಈ ಕೋಡ್ ಬಳಸುವ ಮೂಲಕ ನೀವು ಸ್ಮಾರ್ಟ್‌ಫೋನ್‌ನಿಂದ ಎಲ್ಲಾ ರೀತಿಯ ರೀಡೈರೆಕ್ಷನ್ ಗಳನ್ನು ಸ್ಥಗಿತಗೊಳಿಸಬಹುದು.. ನೀವು ರೋಮಿಂಗ್ ನಲ್ಲಿದ್ದರೆ ಮತ್ತು ಯಾವುದೇ ರೀತಿಯ ಹಣ ಪಾವತಿಸದೆ ಅನಗತ್ಯ ಕರೆಗಳನ್ನು ಮರುನಿರ್ದೇಶಿಸಲು ಬಯಸುತಿದ್ದರೆ, ಈ ಕೋಡ್ ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ನ ಡಯಲ್‌ಪ್ಯಾಡ್‌ ಮೂಲಕ ##002# ಅನ್ನು ಡಯಲ್ ಮಾಡಬೇಕು.



2. *#21#
ನಿಮ್ಮ ಕರೆಗಳು, ಸಂದೇಶಗಳು ಅಥವಾ ಇತರ ಡೇಟಾವನ್ನು ಬೇರೆ ಯಾವುದೇ ಸಂಖ್ಯೆಗೆ ತಿರುಗಿಸಲಾಗಿದೆಯೇ ಎಂಬುಅದನ್ನು ತಿಳಿದುಕೊಳ್ಳಲು ನೀವು ಬಯಸುತ್ತಿದ್ದರೆ, ನಿಮ್ಮ ಫೋನ್‌ನಲ್ಲಿ *#21# ಅನ್ನು ಡಯಲ್ ಮಾಡಿ ಅದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಯಾವುದೇ ರೀತಿಯ ಅಚಾತುರ್ಯ ನಡೆದಿದ್ದರೆ, ಫೋನ್ ಪರದೆಯಲ್ಲಿ ನೀವು ಆ ಸಂಖ್ಯೆ ಮತ್ತು ಡೈವರ್ಟ್ ಮಾಡಲಾಗಿರುವ ಐಟಂಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.


ಇದನ್ನೂ ಓದಿ-ಗ್ರಾಹಕರಿಗೆ ಭಾರಿ ರಿಯಾಯಿತಿ ದರದಲ್ಲಿ ಸಿಗಲಿದೆ iPhone 13..!

3. *#06#
ನೀವು ಯಾವುದೇ ಫೋನ್‌ನ IMEI ಸಂಖ್ಯೆಯ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಿದ್ದರೆ, ನಿಮ್ಮ ಫೋನ್‌ನಿಂದ ನೀವು *#06# ಅನ್ನು ಡಯಲ್ ಮಾಡಿ. ಇದಲ್ಲದೇ, ಈ ಸಂಖ್ಯೆಯಿಂದ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ಅಥವಾ ಸಿಇಐಆರ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕಳೆದುಹೋದ ಫೋನ್ ಇರುವ ಸ್ಥಳವನ್ನು ಸಹ ನೀವು ಪತ್ತೆಹಚ್ಚಬಹುದು. ವಿಶೇಷವೆಂದರೆ ಕಳೆದುಹೋದ ಸ್ಮಾರ್ಟ್ ಫೋನ್ ಸ್ವಿಚ್ ಆಫ್ ಆಗಿದ್ದರೆ ಅಥವಾ ಹೊಸ ಸಿಮ್ ಅಳವಡಿಸಿದ್ದರೂ ಕೂಡ ಈ ಕೋಡ್ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ-Earphones Effect On Health: ಅತಿಯಾದ ಇಯರ್ ಫೋನ್ ಬಳಕೆ ಅಪಾಯಕಾರಿ, ಕಿವಿಗಳಿಗೆ ಗಂಭೀರ ಹಾನಿ

4. *#62#
ಯಾವುದೇ ಸೇವೆಯಲ್ಲಿ ನಿಮ್ಮ ಸಂಖ್ಯೆ ಸಿಗುತ್ತಿಲ್ಲ ಎಂದು ನಿಮಗೆ ನಿರಂತರವಾಗಿ ದೂರುಗಳು ಬರುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಸಮಯವನ್ನು ವ್ಯರ್ಥ ಮಾಡದೆ ತಕ್ಷಣವೇ *#62# ಸಂಖ್ಯೆಯನ್ನು ಡಯಲ್ ಮಾಡಿ. ಈ ಕಮಾಂಡ್ ನೀಡುವ ಮೂಲಕ, ನಿಮ್ಮ ಕರೆಗಳು, ಸಂದೇಶಗಳು ಮತ್ತು ಇತರ ಡೇಟಾವನ್ನು ವರ್ಗಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗಲಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.