Earphones Effect On Health: ಅತಿಯಾದ ಇಯರ್ ಫೋನ್ ಬಳಕೆ ಅಪಾಯಕಾರಿ, ಕಿವಿಗಳಿಗೆ ಗಂಭೀರ ಹಾನಿ

Earphones Effect On Health: ದಿನವಿಡೀ ಇಯರ್ ಫೋನ್ ಅಥವಾ ಹೆಡ್ ಫೋನ್ ಬಳಸುವವರೇ ಸ್ವಲ್ಪ ಎಚ್ಚರ...! ಏಕೆಂದರೆ, ಅತಿಯಾದ ಇಯರ್ ಫೋನ್ ಬಳಕೆ ನಿಮ್ಮ ಶ್ರವಣಶಕ್ತಿಯನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಇದಲ್ಲದೆ ನಿಮ್ಮ ಕಿವಿಯಲ್ಲಿ ಸೋಂಕು ಹರಡುವ ಸಾಧ್ಯತೆ ಕೂಡ ಇದೆ.   

Written by - Nitin Tabib | Last Updated : May 21, 2022, 05:55 PM IST
  • ನೀವು ಅತಿಯಾಗಿ ಇಯರ್ ಫೋನ್ ಬಳಸುತ್ತೀರಾ
  • ಈ ವರದಿಯನ್ನೊಮ್ಮೆ ಓದಲು ಮರೆಯಬೇಡಿ.
  • ತಜ್ಞರು ಈ ಕುರಿತು ಹೇಳುವುದೇನು ತಿಳಿದುಕೊಳ್ಳಿ
Earphones Effect On Health: ಅತಿಯಾದ ಇಯರ್ ಫೋನ್ ಬಳಕೆ ಅಪಾಯಕಾರಿ, ಕಿವಿಗಳಿಗೆ ಗಂಭೀರ ಹಾನಿ title=
Earphones, Earphones Effect On Health

Earphones Effect On Health:  ಬದಲಾಗುತ್ತಿರುವ ಜೀವನಶೈಲಿಯಲ್ಲಿ ಇಂದು ಹಲವಾರು ದುಬಾರಿ ಇಯರ್ ಫೋನ್ ಅಥವಾ ಹೆಡ್ ಫೋನ್ ಗಳನ್ನು ಬಲಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಯಾವುದೇ ಒಂದು ವಸ್ತುವಿನ ಅತಿಯಾದ ಬಳಕೆ ಶರೀರಕ್ಕೆ ಹಾನಿಕಾರಕವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಇಯರ್ ಫೋನ್ ಅಥವಾ ಹೆಡ್ ಫೋನ್ ಗಳ ಬಳಕೆಯ ವಿಷಯಕ್ಕೂ ಕೂಡ ಅದು ಅನ್ವಯಿಸುತ್ತದೆ. ಒಂದು ವೇಳೆ ನೀವು ಸಂಪೂರ್ಣ ದಿನ ಇಯರ್ ಫೋನ್ ಬಳಸುತ್ತಿದ್ದರೆ, ಅದು ನಿಮ್ಮ ಕೇಳುವ ಸಾಮರ್ಥ್ಯದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಈ ಕುರಿತು ಮಾತನಾಡುವ ಯಶೋದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಎನ್ಟಿ ತಜ್ಞ ಸೌರಭ ಆಗರವಾಲ್, ಇದರಿಂದ ಕಿವಿಗಳ ಮೇಲೆ ನಿಧಾನವಾಗಿ ಪರಿಣಾಮ ಬೀರಲು  ಆರಂಭಿಸುತ್ತದೆ. ಇದರ ಜೊತೆಗೆ ಕಿವಿಯಲ್ಲಿ ಸೋಂಕಿನ ಅಪಾಯ ಕೂಡ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಬನ್ನಿ ಅತಿಯಾದ ಹೆಡ್ ಫೋನ್ ಬಳಕೆ ಇನ್ನೂ ಯಾವ ಯಾವ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 

ಇದನ್ನೂ ಓದಿ-Diabetes: ಮಾವಿನಿಂದ ಅಲ್ಲ, ಮಾವಿನ ಎಲೆಗಳಿಂದ ದೂರಾಗುತ್ತದೆ ಈ ಕಾಯಿಲೆ

ಕೇಳುವ ಸಾಮರ್ಥ್ಯದ ಮೇಲೆ ಪ್ರಭಾವ ಉಂಟಾಗುತ್ತದೆ
ನೀವು ಹೆಚ್ಚು ಹೆಡ್‌ಫೋನ್ ಬಳಸಿದರೆ ಅದು ನಿಮ್ಮ ಕಿವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಸೌರಭ ಅಗರ್ವಾಲ್ ಹೇಳಿದ್ದಾರೆ. ಇದರಿಂದಾಗಿ ಪದೇ ಪದೇ ಸೋಂಕು ಹರಡುವ ಸಾಧ್ಯತೆ ಕೂಡ ಇರುತ್ತದೆ. ಆರಂಭದಲ್ಲಿ ಕಿವಿಯಲ್ಲಿ ನೋವು ಪ್ರಾರಂಭವಾಗುತ್ತದೆ ಎಂದು ಅವರು ಹೇಳುತ್ತಾರೆ. ಕ್ರಮೇಣ ನಿಮ್ಮ ಈ ಸಮಸ್ಯೆ ಹೆಚ್ಚಾಗಬಹುದು. ನೋವಿನ ನಂತರ, ನಿಮ್ಮ ಕಿವಿಯಲ್ಲಿ ಸೋಂಕು ಉಂಟಾಗುವ ಅಪಾಯವಿದೆ. ಅಷ್ಟೇ ಅಲ್ಲ ಇದರಿಂದ ಕೆಲವರಿಗೆ ತಲೆ ಸುತ್ತುವಿಕೆಯ ಅನುಭವ ಕೂಡ ಆಗಬಹುದು ಎಂದು  ಸೌರಭ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ-ಇನ್ಮುಂದೆ ಮನೆಯಲ್ಲಿ ಬಿಂದಾಸ್ ಎಸಿ ಚಲಾಯಿಸಿ, ಈ ಡಿವೈಸ್ ಬಳಸಿ ವಿದ್ಯುತ್ ಬಿಲ್ ಉಳಿತಾಯ ಮಾಡಿ

ಇತರರು ಬಳಸಿದ ಹೆಡ್ ಫೋನ್ ದುಬಾರಿ ಪರಿಣಮಿಸಬಹುದು
ಇದಲ್ಲದೇ, ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರಲಿದೆ ಎಂದು ಸೌರಭ್ ಅಗರ್ವಾಲ್ ಹೇಳಿದ್ದಾರೆ. ಕೆಲವೊಮ್ಮೆ ಹೆಡ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಗೆ ತೊಂದರೆ ಉಂಟುಮಾಡಬಹುದು. ಸೋಂಕಿಗೊಳಗಾದ ಜನರು ತಾವು ಬಳಸಿದ ಹೆಡ್‌ಫೋನ್‌ಗಳನ್ನು ಇತರರಿಗೆ ನೀಡಿ ಅಥವಾ ಇತರರಿಂದ ಪಡೆದುಕೊಳ್ಳುವ ಮೂಲಕ ಸೋಂಕು ಹರಡಬಹುದು.  ಇದು ಇಂತಹ ಪರಿಸ್ಥಿತಿಯಲ್ಲಿ, ಆದಷ್ಟು ಇಯರ್‌ಫೋನ್‌ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಿ ಎಂದು ಅಗರ್ವಾಲ್ ಹೇಳಿದ್ದಾರೆ. ಅನಿವಾರ್ಯ ಎಂದಾದಲ್ಲಿ, ಈ ರೀತಿಯ ಹಾನಿ ತಪ್ಪಿಸಲು ಇಯರ್ ಫೋನ್ ಬದಲಿಗೆ ಹೆಡ್ ಫೋನ್ ಬಳಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಅನಿವಾರ್ಯ ಪರಿಸ್ಥಿತಿಯಲ್ಲಿ ನೀವು ಇಯರ್ ಫೋನ್ ಬಳಸುತ್ತಿದ್ದರೆ, ಅದನ್ನು ನಿಶ್ಚಿತ ಅಂತರದಲ್ಲಿ ಬಳಸಲು ಪ್ರಯತ್ನಿಸಿ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News