Caller ID Identification for All by TRAI: ನೀವೂ ಕೂಡ ಬಹುಶಃ ಪ್ರತಿನಿತ್ಯ ಬರುವ ಹಲವಾರು ಸ್ಪ್ಯಾಮ್ ಕರೆಗಳಿಗೆ ರೋಸಿಹೋಗಿರಬಹುದು. ಆದರೆ, ಯಾವುದೇ ಅಪ್ಲಿಕೇಶನ್ ಸಹಾಯ ಇಲ್ಲದೆಯೇ ನಿಮಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಉಚಿತವಾಗಿ ಪತ್ತೆಹಚ್ಚಲು ನಿಮಗೆ ಅನುಮತಿಸುವಂತಹ ಒಂದು ವ್ಯವಸ್ಥೆ ನಿಮ್ಮ ಬಳಿ ಇದ್ದರೆ ಹೇಗಿರಲಿದೆ ಎಂಬುದನ್ನೊಮ್ಮೆ ಊಹಿಸಿ ನೋಡಿ. ಹೌದು, ಮುಂಬರುವ ದಿನಗಳಲ್ಲಿ ಅಂತಹದೊಂದು ಹೊಸ ವೈಶಿಷ್ಟ್ಯವನ್ನು ನಮ್ಮೆಲ್ಲರಿಗಾಗಿ ಬಿಡುಗಡೆ ಮಾಡಲು ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ, ಅಂದರೆ TRAI ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಸ್ಪ್ಯಾಮ್ ಕರೆಗಳ ಮೇಲೆ TRAI ಕಾರ್ಯನಿರ್ವಹಿಸುತ್ತಿದೆ
ದೇಶದ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸ್ಪ್ಯಾಮ್ ಕರೆಗಳನ್ನು ತಪ್ಪಿಸಲು ಸಹಾಯ ಮಾಡುವ ವೈಶಿಷ್ಟ್ಯವೊಂದರ ಮೇಲೆ TRAI ಕಾರ್ಯನಿರ್ವಹಿಸುತ್ತಿದೆ ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಅಧಿಕಾರಿಯೊಬ್ಬರು ಹೇಳಿದ್ದಾರೆ. ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ನಿಮ್ಮ ಮೊಬೈಲ್ ಪರದೆಯ ಮೇಲೆ ಪ್ರದರ್ಶಿಸಲು ಸೇವಾ ಪೂರೈಕೆದಾರರಿಗೆ ಅನುಮತಿಸುವ ವ್ಯವಸ್ಥೆಯನ್ನು ರಚಿಸಲು TRAI ನೋಡುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ-Monsoon 2022: ಶೀಘ್ರದಲ್ಲಿಯೇ ಕೇರಳಕ್ಕೆ ಮಾನ್ಸೂನ್ ಆಗಮನ, ದೇಶದ ಇತರ ಭಾಗಗಳಲ್ಲಿ ಯಾವಾಗ?
ಯಾವುದೇ ಆಪ್ ಸಹಾಯ ಇಲ್ಲದೆಯೇ ನಿಮಗೆ ಅದು ತಿಳಿಯಲಿದೆ
ಸ್ಮಾರ್ಟ್‌ಫೋನ್ ಬಳಕೆದಾರರ KYC ವಿವರಗಳನ್ನು ಆಧರಿಸಿ TRAI ವ್ಯವಸ್ಥೆಯು ಕಾರ್ಯನಿರ್ವಹಿಸಲಿದೆ ಎಂದು TRAI ಅಧಿಕಾರಿ ಹೇಳಿದ್ದಾರೆ. ಈ ಹೊಸ ಕಾಲರ್ ಐಡಿ ವೈಶಿಷ್ಟ್ಯವು ಬಳಕೆದಾರರ ಅನುಮತಿಯ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಯಾರಿಗೂ ಕೂಡ ಅನಿವಾರ್ಯವಾಗಿರುವುದಿಲ್ಲ. ಟೆಲಿಕಾಂ ಕಂಪನಿಗಳ ಚಂದಾದಾರರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡಲು ಸಹ ಇದರಲ್ಲಿ ಸಾಧ್ಯವಾಗಲಿದೆ.
ಇದನ್ನೂ ಓದಿ-WhatsApp Premium:10 ಡಿವೈಸ್ ಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸಲಿದೆ WhatsApp
ಪ್ರಸ್ತುತ ಈ ವೈಶಿಷ್ಟ್ಯದ ಕುರಿತು ಮಾತುಕತೆಗಳು ನಡೆಯುತ್ತಿವೆ ಮತ್ತು TRAI ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸಮಾಲೋಚನಾ ಪತ್ರವನ್ನು ಬಿಡುಗಡೆಗೊಳಿಸಲಿದೆ ಮತ್ತು ಅದರ ಫೈನ್ ಪ್ರಿಂಟ್ ಕೂಡ ತೆಗದುಕೊಳ್ಳಲಿದೆ. ಒಂದೊಮ್ಮೆ ಟ್ರೈನ ಈ ವ್ಯವಸ್ಥೆ ಜಾರಿಗೆ ಬಂದರೆ, ಟ್ರೂ ಕಾಲರ್ ನಂತಹ ಆಪ್ ಗಳ ಅವಶ್ಯಕತೆ ನಿಮಗೆ ಬೀಳುವುದಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.