Space Science: ಚೀನಾದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಕನಸು ಶೀಘ್ರದಲ್ಲಿಯೇ ನನಸಾಗಲಿದೆ. 6 ತಿಂಗಳ ಅವಧಿಯ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ನಂತರ, 3 ಚೀನಾದ ಗಗನಯಾತ್ರಿಗಳು 'ಶೆಂಝೌ-15' ಮಾನವಸಹಿತ ಬಾಹ್ಯಾಕಾಶ ನೌಕೆಯ ಮೂಲಕ ಭಾನುವಾರ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (CMSA) ಶೆಂಝೌ-15ರ ಗಗನಯಾತ್ರಿಗಳಾದ - ಫೀ ಜುನ್ಲಾಂಗ್, ಡೆಂಗ್ ಕಿಂಗ್ಮಿಂಗ್ ಮತ್ತು ಜಾಂಗ್ ಲು - ಬೀಜಿಂಗ್ ಸಮಯ ಸುಮಾರು 6.33 ಕ್ಕೆ ಮಂಗೋಲಿಯಾ ಸ್ವಾಯತ್ತ ಪ್ರದೇಶದಲ್ಲಿರುವ ಡಾಂಗ್‌ಫೆಂಗ್‌ನಲ್ಲಿ  ಲ್ಯಾಂಡಿಂಗ್ ಸೈಟ್‌ಗೆ ಬಂದಿಳಿದರು. ಜುನ್ಲಾಂಗ್, ಕಿಂಗ್ಮಿಂಗ್ ಮತ್ತು ಲು 6 ತಿಂಗಳ ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ.


COMMERCIAL BREAK
SCROLL TO CONTINUE READING

ಶೆಂಝೌ-15 ಮಿಷನ್ ಯಶಸ್ವಿಯಾಗಿದೆ
ಗಗನಯಾತ್ರಿಗಳ ಆರೋಗ್ಯ ಉತ್ತಮವಾಗಿದ್ದು, ಶೆಂಜೌ-15 ಮಾನವಸಹಿತ ಮಿಷನ್ ಯಶಸ್ವಿಯಾಗಿದೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದಕ್ಕೂ ಮೊದಲು, ಮೇ 30 ರಂದು, ಜುನ್ಲಾಂಗ್, ಕ್ವಿಂಗ್ಮಿಂಗ್ ಮತ್ತು ಲು ಬದಲಿಗೆ ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ನಾಗರಿಕ ಗಗನಯಾತ್ರಿಗಳನ್ನು ಕಳುಹಿಸಲು ಚೀನಾ ಸಿದ್ಧತೆ ನಡೆಸಿದೆ. ಗಗನಯಾತ್ರಿಗಳ ಈ ಹೊಸ ತಂಡವು 5 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲಕಳೆಯಲಿದೆ.


ಇದನ್ನೂ ಓದಿ-Useful AI Apps: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇರಲಿ ಈ ಅತ್ಯಾವಶ್ಯಕ ಎಐ ಆಪ್ ಗಳು!


ಅಮೆರಿಕಾವನ್ನು ಹಿಂದಿಕ್ಕಲಿರುವ ಚೀನಾ
ಎಲ್ಲವೂ ಅಂದುಕೊಂಡಂತೆ ಒಂದು ವೇಳೆ ಈ  ನಿಲ್ದಾಣ ಸಿದ್ಧವಾದರೆ, ಚೀನಾ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಏಕೈಕ ದೇಶವಾಗಲಿದೆ, ಏಕೆಂದರೆ ರಷ್ಯಾದ 'ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ' (ISS) ಹಲವು ದೇಶಗಳ ಸಹಯೋಗದ ಯೋಜನೆಯಾಗಿದೆ. ISS 2030 ರ ವೇಳೆಗೆ ಸೇವೆಯಿಂದ ಹೊರಗುಳಿಯಲಿದೆ.


ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ಎಲ್ಲಾ ಕೆಲಸಗಳು ಮತ್ತಷ್ಟು ಸುಲಭವಾಗಲಿದೆ


ಚೀನಾ ಈ ಸಾಧನೆ ಮಾಡಿದೆ
ಚೀನಾದ ಬಾಹ್ಯಾಕಾಶ ನಿಲ್ದಾಣದ ದೊಡ್ಡ ವೈಶಿಷ್ಟ್ಯವೆಂದರೆ ಅದರ ಎರಡು ರೊಬೊಟಿಕ್ ಭುಜಗಳು. ಇವುಗಳಲ್ಲಿ ಉದ್ದನೆಯ ಭುಜ ಹೆಚ್ಚು ಮುಖ್ಯವಾಗಿದ್ದು, ಬಾಹ್ಯಾಕಾಶದಿಂದ ಉಪಗ್ರಹಗಳು ಸೇರಿದಂತೆ ವಸ್ತುಗಳನ್ನು ಸೆರೆಹಿಡಿಯಬಹುದು. ಈ ಕುರಿತು ಮಾಹಿತಿ ನೀಡಿರುವ ಮಿಷನ್ ಕಮಾಂಡರ್ ಫೀ, 'ನಾವು ನಿಯೋಜಿಸಲಾದ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ತಾಯ್ನಾಡಿಗೆ ಮರಳಲು ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.