ಬೇಸಿಗೆಗೂ ಮೊದಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಅಗ್ಗದ Split AC
ಬೇಸಿಗೆ ಕಾಲ ಆರಂಭವಾಗುವ ಮುನ್ನ ಉತ್ತಮ ವೈಶಿಷ್ಟ್ಯಗಳೊಂದಿಗೆ ಹೊಸ ಕನ್ವರ್ಟಬಲ್ ಇನ್ವರ್ಟರ್ ಎಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ಕಡಿಮೆ ವಿದ್ಯುತ್ ಅನ್ನು ಬಳಸುತ್ತದೆ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.
MarQ ಕಂಪನಿಯು ಬೇಸಿಗೆ ಆರಂಭಕ್ಕೂ ಮೊದಲೇ 4-ಇನ್-1 ಕನ್ವರ್ಟಬಲ್ ಏರ್ ಕಂಡಿಷನರ್‌ಗಳ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿರುವ ಈ ಸ್ಪ್ಲಿಟ್ ಎಸಿ ಕಡಿಮೆ ವಿದ್ಯುತ್ ಬಳಸಿ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಬೆಲೆ, ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್...
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿ ವೈಶಿಷ್ಟ್ಯಗಳು:
* MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಗಳು "ಇನ್ವರ್ಟರ್ ಟೆಕ್ನಾಲಜಿ" ಜೊತೆಗೆ ಇತ್ತೀಚಿನ BEE STAR ರೇಟಿಂಗ್‌ನೊಂದಿಗೆ ಬರುತ್ತದೆ.
* ಇದು ರೆಫ್ರಿಜರೆಂಟ್ (ಗ್ಯಾಸ್) ಹರಿವಿನ ಪ್ರಮಾಣವನ್ನು ನಿಯಂತ್ರಿಸಲು ಮತ್ತು ಕಡಿಮೆ ಶಕ್ತಿಯನ್ನು ಸೇವಿಸಲು ಸಂಕೋಚಕದ ವೇಗವನ್ನು ಸರಿಹೊಂದಿಸುತ್ತದೆ.
* ಮಾರ್ಕ್ಯೂ ಏರ್ ಕಂಡಿಷನರ್‌ಗಳು ವಿದ್ಯುತ್ ಏರಿಳಿತಗಳಿಂದ ರಕ್ಷಿಸಲು ಅಂತರ್ನಿರ್ಮಿತ ಸ್ಟೆಬಿಲೈಸರ್‌ಗಳನ್ನು ಮತ್ತು ಕೈಗಾರಿಕಾ ಹೊಗೆ, ಉಪ್ಪು, ಮರಳು ಮತ್ತು ಮಾಲಿನ್ಯಕಾರಕಗಳಿಂದ ರಕ್ಷಿಸುವ "ಬ್ಲೂ ಫಿನ್ ಕೋಟಿಂಗ್" ಅನ್ನು ಹೊಂದಿವೆ.
ಇದನ್ನೂ ಓದಿ- Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ವಿಶೇಷಣಗಳು:
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯು 'ಟರ್ಬೋ ಕೂಲ್ ಮೋಡ್' ಎಂಬ ಹೆಚ್ಚುವರಿ ಮೋಡ್ ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದು ಕಡಿಮೆ ವಿದ್ಯುತ್ ಬಳಸುತ್ತದೆ. ಮಾತ್ರವಲ್ಲಿ ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ಹೆಚ್ಚು ತಂಪಾಗಿಸುತ್ತದೆ.
ಇದನ್ನೂ ಓದಿ- ಏರ್‌ಟೆಲ್ ಅಗ್ಗದ ಯೋಜನೆಯಲ್ಲಿ ಸಿಗುತ್ತಿದೆ ನಿತ್ಯ 2ಜಿಬಿ ಡಾಟಾ, ಅನ್ಲಿಮಿಟೆಡ್ ಕಾಲ್ ಜೊತೆಗೆ ಇನ್ನೂ ಹಲವು ಲಾಭ
MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿ ಬೆಲೆ:
MarQ ಕಂಪನಿಯು ಪ್ರಸ್ತುತ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಆರು ಮಾದರಿಗಳನ್ನು ಬಿಡುಗಡೆ ಮಾಡಿದೆ. ಅದರ ಬೆಲೆಗಳು ಕೆಳಕಂಡಂತಿವೆ:
* 1 ಟನ್ ಎಸಿ ಬೆಲೆ 26,499 ರೂ.
* 0.8 ಟನ್ ಎಸಿ ಬೆಲೆ 25,499 ರೂ.
* 1.5 ಟನ್ ಎಸಿ ಬೆಲೆ 32,999 ರೂ. ( 5 ಸ್ಟಾರ್ ರೇಟಿಂಗ್)
* 1.5 ಟನ್ ಎಸಿ ಬೆಲೆ 30,999 ರೂ. (4 ಸ್ಟಾರ್ ರೇಟಿಂಗ್)
* 1.5 ಟನ್ ಎಸಿ ಬೆಲೆ 29,999 ರೂ. (3 ಸ್ಟಾರ್ ರೇಟಿಂಗ್)
* 2 ಟನ್ ಎಸಿ ಬೆಲೆ 37,999 ರೂ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.