ಫ್ಲೆಕ್ಸ್ ಇಂಧನ ವಾಹನಗಳು ಭಾರತದ ಕಬ್ಬು ಮತ್ತು ಜೋಳ ಬೆಳೆಗಾರರಿಗೆ ದೊಡ್ಡ ಮಟ್ಟದ ಲಾಭವನ್ನು ನೀಡಲಿದೆ. ಫ್ಲೆಕ್ಸ್ ಇಂಧನ ವಾಹನಗಳು ಪೆಟ್ರೋಲ್ ಹಾಗೂ ಎಥೆನಾಲ್ ಮಿಶ್ರಿತ ಇಂಧನದಿಂದ ಚಲಿಸಬಲ್ಲ ಎಂಜಿನ್‌ಗಳನ್ನು ಹೊಂದಿವೆ. ಕಬ್ಬು, ಜೋಳ ಅಥವಾ ಇತರ ಕೃಷಿ ಉತ್ಪನ್ನಗಳಿಂದ ಸಾವಯವವಾಗಿ ಉತ್ಪಾದಿಸುವ ಎಥೆನಾಲ್, ಪೆಟ್ರೋಲ್‌ನ ಪರ್ಯಾಯ ಮತ್ತು ಶುದ್ಧ ಮೂಲವಾಗಿದೆ.ಇದನ್ನು ಫ್ಲೆಕ್ಸ್ ಇಂಧನ ವಾಹನಗಳಲ್ಲಿ ಬಳಸಬಹುದು. ಇದು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಫ್ಲೆಕ್ಸ್ ಇಂಧನದ ಪ್ರಮುಖ ಲಕ್ಷಣಗಳು:
ಎಥೆನಾಲ್ ಬಳಕೆ: ಫ್ಲೆಕ್ಸ್ ಇಂಧನ ವಾಹನಗಳಲ್ಲಿ ಶೇ.10ರಿಂದ ಶೇ.85ರ ವರೆಗೆ ಎಥೆನಾಲ್ ಅನ್ನು ಪೆಟ್ರೋಲ್ ಗೆ ಬೆರೆಸಬಹುದು.ಇದು ರೈತರಿಗೆ ಎಥೆನಾಲ್ ಉತ್ಪಾದನಾ ಅವಕಾಶಗಳನ್ನು ಹೆಚ್ಚಿಸಿ ಆದಾಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್


ರೈತರಿಗೆ ಲಾಭ: ಕಬ್ಬು ಮತ್ತು ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದನೆ ಮಾಡುವುದರಿಂದ ಈ ಬೆಳೆಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗಲಿದ್ದು, ಬೆಳೆ ಹಾಳಾಗುವ ಅಪಾಯವೂ ಕಡಿಮೆಯಾಗಲಿದೆ.


ಇಂಧನ ವೆಚ್ಚದಲ್ಲಿ ಕಡಿತ : ಎಥೆನಾಲ್ ಪೆಟ್ರೋಲ್‌ಗಿಂತ ಅಗ್ಗವಾಗಿದೆ. ಫ್ಲೆಕ್ಸ್ ಇಂಧನ ವಾಹನಗಳು ಈ ಅಗ್ಗದ ಇಂಧನವನ್ನು ಬಳಸಬಹುದು. ವಾಹನಗಳನ್ನು ನಿರ್ವಹಿಸುವ ವೆಚ್ಚವನ್ನು ಕಡಿಮೆ ಮಾಡುತ್ತದೆ.


ಪರಿಸರಕ್ಕೆ ಪ್ರಯೋಜನಕಾರಿ : ಎಥೆನಾಲ್ ಅನ್ನು ಸಾವಯವ ಮೂಲಗಳಿಂದ ತಯಾರಿಸಲಾಗುತ್ತದೆ. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಿ ಪರಿಸರಕ್ಕೆ ಅನುಕೂಲವಾಗಲಿದೆ.


ಇದನ್ನೂ ಓದಿ : ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!


ಇಂಧನ ಭದ್ರತೆ : ಎಥೆನಾಲ್‌ನ ದೇಶೀಯ ಉತ್ಪಾದನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಪೆಟ್ರೋಲಿಯಂ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ.


ಭಾರತದಲ್ಲಿ ಇದರ ನಿರೀಕ್ಷೆಗಳು:
ಭಾರತ ಸರ್ಕಾರವು ಫ್ಲೆಕ್ಸ್ ಇಂಧನ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಈ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗತೊಡಗಿದರೆ ಕಬ್ಬು, ಜೋಳ ಬೆಳೆಯುವ ರೈತರಿಗೆ ಶಾಶ್ವತ ಹಾಗೂ ದೊಡ್ಡ ಮಾರುಕಟ್ಟೆ ಸಿಗಲಿದೆ. ಇದಲ್ಲದೆ, ಎಥೆನಾಲ್ ಉತ್ಪಾದನೆಯು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.