ನವದೆಹಲಿ: ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ TCL ತನ್ನ ವಿಶೇಷವಾದ 4K QLED ಟಿವಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಗ್ರಾಹಕರಿಗೆ Next Level ಆಡಿಯೋ ಮತ್ತು ದೃಶ್ಯ ಅನುಭವ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್ ಟಿವಿಯು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಂ ಜೊತೆಗೆ ಅನೇಕ ಉನ್ನತ-ಮಟ್ಟದ ವಿಶೇಷಣಗಳು ಮತ್ತು ತಂತ್ರಜ್ಞಾನ ಹೊಂದಿದ್ದು, ನಿಜ ಜೀವನದ ಅನುಭವ ನೀಡುತ್ತದೆ.


COMMERCIAL BREAK
SCROLL TO CONTINUE READING

ಹೊಸ 4K QLED-C645 ವಿಭಿನ್ನ ಡಿಸ್ಪ್ಲೇ ಗಾತ್ರಗಳಲ್ಲಿ ಲಭ್ಯವಿರುತ್ತದೆ. 75 ಇಂಚು, 65 ಇಂಚು, 55 ಇಂಚು, 50 ಇಂಚು ಮತ್ತು 43 ಇಂಚುಗಳು ಗ್ರಾಹಕರಿಗೆ ಅಂತಿಮ ಬೆಜೆಲ್ ಲೆಸ್ ವಿನ್ಯಾಸ ನೀಡುತ್ತದೆ. ಇದು ದೃಶ್ಯ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ಗ್ರಾಹಕರು ಸಾಕಷ್ಟು ಆನಂದಿಸಲಿದ್ದಾರೆ. ಚಲನಚಿತ್ರಗಳು ಅಥವಾ ಗೇಮಿಂಗ್ ನೋಡುವುದು ವಿಶಿಷ್ಟ ಅನುಭವ ನೀಡುತ್ತದೆ. ಇದರ ಅಲ್ಟ್ರಾ ಸ್ಲಿಮ್ ಮೆಟಾಲಿಕ್ ಫ್ರೇಮ್ ತುಂಬಾ ಸೊಗಸಾಗಿದೆ. ಇದು ಮನೆಯ ಯಾವುದೇ ಸ್ಥಳಕ್ಕೆ ಹೊಂದಿಕೊಳ್ಳುತ್ತದೆ.


ಇದನ್ನೂ ಓದಿ: Share Market Update: ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಹೊಸ ಹುಮ್ಮಸ್ಸು, 18300 ಗಡಿ ದಾಟಿದ ನಿಫ್ಟಿ


ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳು


ಈ ಟಿವಿ ಕ್ವಾಂಟಮ್ ಡಾಟ್ ಟೆಕ್ನಾಲಜಿ (93% DCI-P3)ಯಿಂದ ಕಾರ್ಯನಿರ್ವಹಿಸುತ್ತದೆ. C645 ಒಂದು ಪ್ರೀಮಿಯಂ ಟಿವಿಯಾಗಿದ್ದು, ಇದು ಪೂರ್ಣ ಬಣ್ಣದ, ಹೆಚ್ಚಿನ ಕಾಂಟ್ರಾಸ್ಟ್ ಅನುಪಾತ ಮತ್ತು ಸ್ಮಾರ್ಟ್ HDR ಜೊತೆಗೆ 10-ಬಿಟ್ ಬಣ್ಣದ ಆಳವನ್ನು ನೀಡುತ್ತದೆ. ಇದು HLG, ಡಾಲ್ಬಿ ವಿಷನ್ ಮತ್ತು HDR 10+ನ್ನು ಹೊಂದಿದೆ. ಇದು ಅತ್ಯುತ್ತಮ ಅನುಭವ, Shadow Detailing ಮತ್ತು Vivid Colorsನ್ನು ಒದಗಿಸುತ್ತದೆ. ಹೊಸ 4K QLED ಸ್ಥಿರ ಮತ್ತು ಉತ್ತಮ ಗುಣಮಟ್ಟದ 4Kಯೊಂದಿಗೆ ವಿಷಯವನ್ನು ಪ್ರಕ್ರಿಯೆಗೊಳಿಸಲು AIPQ ಎಂಜಿನ್ 3.0 TCL ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಬಣ್ಣದ ಪರಿಮಾಣ, ಸ್ಯಾಚುರೇಶನ್ ಮತ್ತು ಕಾಂಟ್ರಾಸ್ಟ್‌ನಂತಹ ಬಹು-ಸ್ಪೆಕ್ಸ್ ಅನ್ನು ಟ್ಯೂನ್ ಮಾಡುವ ಮೂಲಕ AI ಬಣ್ಣವು ನೈಜ-ಜೀವನದ ಗುಣಮಟ್ಟದ ಚಿತ್ರಗಳನ್ನು ನೀಡುತ್ತದೆ. C645 4K QLED Google TV OS ನಿಂದ ಚಾಲಿತವಾಗಿದ್ದು, ಇದು ಹೆಚ್ಚು ವೈಯಕ್ತಿಕಗೊಳಿಸಿದ ಮನರಂಜನಾ ಅನುಭವ ಒದಗಿಸುತ್ತದೆ. ಇದು ಗೂಗಲ್ ವಾಚ್‌ಲಿಸ್ಟ್, ಗೂಗಲ್ ಫೋಟೋಗಳು ಮತ್ತು ಟಿಸಿಎಲ್ ಹೋಮ್ ಸಹ ಹೊಂದಿದೆ. ಇದರ ಸಹಾಯದಿಂದ ಟಿಸಿಎಲ್‌ನ ವೈ-ಫೈ ಸಕ್ರಿಯಗೊಳಿಸಿದ ಸಾಧನಗಳು ಮತ್ತು ಉಪಕರಣಗಳನ್ನು ಸ್ಮಾರ್ಟ್‌ಫೋನ್‌ನಿಂದ ಆರಾಮವಾಗಿ ನಿಯಂತ್ರಿಸಬಹುದು.


ಬೆಲೆ ಮತ್ತು ಲಭ್ಯತೆ


ಈ ಟಿವಿ ರಿಲಯನ್ಸ್ ಡಿಜಿಟಲ್, ಕ್ರೋಮಾ, ಆಫ್‌ಲೈನ್ ಬ್ರ್ಯಾಂಡ್ ಮತ್ತು ಚಿಲ್ಲರೆ ಅಂಗಡಿಗಳು ಮತ್ತು ಆನ್‌ಲೈನ್ ಬ್ರ್ಯಾಂಡ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ 40,990 ರಿಂದ 79,990 ರೂ. ಇದೆ. ಗ್ರಾಹಕರು TCL QLED 4K ಸ್ಮಾರ್ಟ್ ಟಿವಿ ಖರೀದಿಸುವ ಮೂಲಕ 9,990 ರೂ. ಮೌಲ್ಯದ ಸೌಂಡ್ ಬಾರ್ ಅನ್ನು ಉಚಿತವಾಗಿ ಗೆಲ್ಲಬಹುದು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಮೇಲೆ ಶೇ.10ರಷ್ಟು ತ್ವರಿತ ಕ್ಯಾಶ್‌ಬ್ಯಾಕ್ ಸಹ ನೀಡಲಾಗುತ್ತಿದೆ.


ಇದನ್ನೂ ಓದಿ: Nissan Magnite: ಬಜೆಟ್ ಬೆಲೆಗೆ ಅದ್ಭುತ ವೈಶಿಷ್ಟ್ಯ ಮತ್ತು ಮೈಲೇಜ್ ಹೊಂದಿರುವ SUV!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.