ಜನ ಸಾಮಾನ್ಯರಿಗೆ ಮತ್ತೊಂದು ಹೊರೆ ! ಶೀಘ್ರದಲ್ಲೇ ದುಬಾರಿಯಾಗಲಿದೆ ಇನ್ಶುರೆನ್ಸ್ ಪ್ರಿಮಿಯಂ!

General Insurance Premium: ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕಂಪನಿಗಳು ಮತ್ತು ವಾಹನ ಮಾಲೀಕರಿಗೆ ವಿಮಾ ಮೊತ್ತವು ಶೀಘ್ರದಲ್ಲೇ ಹೆಚ್ಚಾಗಲಿದೆ. ಉಕ್ರೇನ್‌ನಲ್ಲಿನ ಯುದ್ಧದ ಪರಿಣಾಮದಿಂದಾಗಿ ವಿಮಾ ಪ್ರೀಮಿಯಂನ ಮೊತ್ತ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ. 

Written by - Ranjitha R K | Last Updated : May 10, 2023, 02:03 PM IST
  • ಹಣದುಬ್ಬರದ ಸಂಕಷ್ಟದಿಂದ ಸದ್ಯಕ್ಕೆ ಪರಿಹಾರ ಸಿಗುವಂತೆ ಕಾಣುತ್ತಿಲ್ಲ.
  • ಹಣದುಬ್ಬರದ ಬಿಸಿ ಮತ್ತೆ ಜನರನ್ನು ಸುಡಲಿದೆ
  • ವಿಮಾ ಪ್ರಿಮಿಯಂ 10 ಪ್ರತಿಶತದಷ್ಟು ದುಬಾರಿಯಾಗಬಹುದು.
ಜನ ಸಾಮಾನ್ಯರಿಗೆ ಮತ್ತೊಂದು ಹೊರೆ ! ಶೀಘ್ರದಲ್ಲೇ ದುಬಾರಿಯಾಗಲಿದೆ ಇನ್ಶುರೆನ್ಸ್ ಪ್ರಿಮಿಯಂ!  title=

General Insurance Premium : ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಹಣದುಬ್ಬರದ ಸಂಕಷ್ಟದಿಂದ ಸದ್ಯಕ್ಕೆ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ಹಣದುಬ್ಬರದ ಬಿಸಿ ಮತ್ತೆ ಜನರನ್ನು ಸುಡಲಿದೆ.  ನೀವು ಕೂಡಾ ವಿಮೆ ಮಾಡಿಸಿಕೊಂಡಿದ್ದು, ವಿಮೆ ಪಾವತಿಸುವವರಾಗಿದ್ದರೆ ನಿಮ್ಮ ಜೇಬಿಗೂ ಕತ್ತರಿ ಬೀಳಲಿದೆ. ವಿಮಾ  ಕಂಪನಿಗಳು ಪ್ರೀಮಿಯಂ ಅನ್ನು 10 ಪ್ರತಿಶತದಷ್ಟು ದುಬಾರಿಯಾಗಿಸಬಹುದು. ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕಂಪನಿಗಳು ಮತ್ತು ವಾಹನ ಮಾಲೀಕರಿಗೆ ವಿಮಾ ಮೊತ್ತವು ಶೀಘ್ರದಲ್ಲೇ ಹೆಚ್ಚಾಗಲಿದೆ. ಉಕ್ರೇನ್‌ನಲ್ಲಿನ ಯುದ್ಧದ ಪರಿಣಾಮದಿಂದಾಗಿ ವಿಮಾ ಪ್ರೀಮಿಯಂನ ಮೊತ್ತ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ. 

10-15 ರಷ್ಟು  ಹೆಚ್ಚಾಗುತ್ತದೆ ವಿಮೆ :
ಉಕ್ರೇನ್ ಯುದ್ಧದಿಂದ ಪ್ರಭಾವಿತವಾಗಿರುವ, ಪ್ರಪಂಚದಾದ್ಯಂತದ ಮರುವಿಮಾದಾರರು ಪ್ರೀಮಿಯಂಗಳನ್ನು 40 ರಿಂದ 60 ಪ್ರತಿಶತದಷ್ಟು ಹೆಚ್ಚಿಸಿದ್ದಾರೆ.  2023 ರ ಹಣಕಾಸು ವರ್ಷದಲ್ಲಿ, ಸಾಮಾನ್ಯ ವಿಮೆಯ ಒಟ್ಟು ವ್ಯವಹಾರದಲ್ಲಿ ವಾಹನ ವಿಮಾ ಪ್ರೀಮಿಯಂನ ಪಾಲು 81,292 ಕೋಟಿ ರೂ.ಎಂದು ಜನರಲ್ ವಿಮಾ ಕಂಪನಿಗಳು ಹೇಳಿವೆ.  ಮರು-ವಿಮೆಯ ವೆಚ್ಚದಲ್ಲಿ ಹೆಚ್ಚಳದಿಂದಾಗಿ, ಮುಂಬರುವ ಸಮಯದಲ್ಲಿ ವಾಹನ ವಿಮೆಯಲ್ಲಿ 10-15 ಪ್ರತಿಶತದಷ್ಟು ಹೆಚ್ಚಳವಾಗಲಿದೆ ಎಂದು  ಅಂದಾಜಿಸಲಾಗಿದೆ. 

ಇದನ್ನೂ ಓದಿ : Go First ಎಲ್ಲಾ ವಿಮಾನಗಳ ಹಾರಾಟ ಮೇ 19 ರವರೆಗೆ ರದ್ದು

 ಸಾಮಾನ್ಯ ವಿಮೆಯೊಂದಿಗೆ 24 ಕಂಪನಿಗಳು  ಸಂಬಂಧ :
ಪ್ರಸ್ತುತ 24 ಕಂಪನಿಗಳು ದೇಶದಲ್ಲಿ ಸಾಮಾನ್ಯ ವಿಮೆಯೊಂದಿಗೆ ಸಂಬಂಧ ಹೊಂದಿವೆ. ಈ ಕಂಪನಿಗಳು ಉದ್ಯಮದಲ್ಲಿ ಒಟ್ಟು 84 ಪ್ರತಿಶತ ಪಾಲನ್ನು ಹೊಂದಿವೆ. ಯಾವುದೇ ರೀತಿಯ ಹೊಣೆಗಾರಿಕೆಗಳನ್ನು ಮತ್ತು ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ದೊಡ್ಡ ನಷ್ಟವನ್ನು ತಪ್ಪಿಸಲು ಬೃಹತ್ ವಿಮಾ ರಕ್ಷಣೆಯನ್ನು ಖರೀದಿಸುತ್ತವೆ. ಬೆಂಕಿ,  ಸಮುದ್ರದ ಅಪಾಯ ಮತ್ತು ಎಂಜಿನಿಯರಿಂಗ್ ಮತ್ತು ವಾಣಿಜ್ಯ ಅಡಚಣೆಗಳಿಂದ ರಕ್ಷಿಸಲು ಈ ಕಂಪನಿಗಳ ಪರವಾಗಿ ವಿಮಾ ರಕ್ಷಣೆಯನ್ನು ಖರೀದಿಸಲಾಗುತ್ತದೆ.

ಬಡ್ಡಿದರದಲ್ಲಿ ಭಾರೀ ಏರಿಕೆ :
ಪಾಶ್ಚಿಮಾತ್ಯ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್ ಗಳು ಕಳೆದ ಒಂದು ವರ್ಷದಲ್ಲಿಯೇ ಶೇ.4.5-5ರಷ್ಟು ಬಡ್ಡಿ ದರ ಹೆಚ್ಚಿಸಿವೆ. ಇದು ಮರುವಿಮಾದಾರರಿಗೆ ಬಂಡವಾಳದ ವೆಚ್ಚವನ್ನು ಹೆಚ್ಚಿಸಿದೆ.  ಅಂತಹ ಪರಿಸ್ಥಿತಿಯಲ್ಲಿ, ವಿಮಾ ಕಂಪನಿಗಳು ಮಾಡುವ ಮರುವಿಮೆಯ ದರದಲ್ಲಿ ಹೆಚ್ಚಳ ಖಚಿತ ಎನ್ನಲಾಗಿದೆ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಆಸ್ತಿಗಳು, ಸಾಮಾನ್ಯ ವಿಮಾ ಕಂಪನಿಗಳ ಅಧಿಕಾರಿಗಳ ಪ್ರಕಾರ, ಮರು-ವಿಮೆ ದರದಲ್ಲಿ ಹೆಚ್ಚಳದಿಂದಾಗಿ ಮುಂಬರುವ ತಿಂಗಳುಗಳಲ್ಲಿ ಆಸ್ತಿಗಳು, ಲಯಬಿಲಿಟೀಸ್ ಮತ್ತು ವಾಹನ ವಿಮೆಗಳು ಶೇಕಡಾ 10 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News