ಬೆಂಗಳೂರು: ದೇಶದ ಸರ್ಕಾರಿ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸಾಕಷ್ಟು ಪ್ರಯೋಜನಗಳೊಂದಿಗೆ ಯೋಜನೆಗಳನ್ನು ತರುತ್ತದೆ. ಕಂಪನಿಯ ಯೋಜನೆಗಳು ಅಲ್ಪಾವಧಿ ಮತ್ತು ದೀರ್ಘಾವಧಿಯ ಮಾನ್ಯತೆಯಲ್ಲಿ ಲಭ್ಯವಿರುತ್ತವೆ (Technology News In Kannada). ಇಂದು ನಾವು ನಿಮಗೆ BSNL ನ ಅಂತಹುದೇ ಒಂದು 1 ವರ್ಷ ಮಾನ್ಯತೆ ಹೊಂದಿರುವ ಒಂದು ಜಬ್ಬರ್ದಸ್ತ್ ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಯೋಜನೆಗಳಲ್ಲಿ, ದೈನಂದಿನ ಉತ್ತಮ ಡೇಟಾ, ಧ್ವನಿ ಕರೆ ಮತ್ತು ಅನೇಕ ಹೆಚ್ಚುವರಿ ಪ್ರಯೋಜನೆಗಳನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

BSNL ತನ್ನ ಗ್ರಾಹಕರಿಗೆ 365 ದಿನಗಳ ಮಾನ್ಯತೆಯೊಂದಿಗೆ ವಿಶೇಷ ಯೋಜನೆಯೊಂದನ್ನು ಚಲಾಯಿಸುತ್ತಿದೆ. ಈ ಯೋಜನೆಯಲ್ಲಿ, ನೀವು 365 ದಿನಗಳು ಅಂದರೆ ಪೂರ್ಣ 1 ವರ್ಷದ ಮಾನ್ಯತೆಯನ್ನು ಪಡೆಯುವಿರಿ. BSNL ನ ಅತ್ಯುತ್ತಮ ಯೋಜನೆಯಲ್ಲಿ ಒಂದಾಗಿರುವ ಈ ಪ್ಯಾಕ್‌ ಅನ್ನು ಬಳಕೆದಾರರು ರೂ 1515 ಕ್ಕೆ ಸಕ್ರಿಯಗೊಳಿಸಬಹುದು. ದೀರ್ಘಾವಧಿಯ ಮಾನ್ಯತೆ ಬಯಸುವವರಿಗೆ ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ. ಏಕೆಂದರೆ ವ್ಯಾಲಿಡಿಟಿ ಜೊತೆಗೆ ಸಾಕಷ್ಟು ಡೇಟಾ ಕೂಡ ಇದರಲ್ಲಿ ಲಭ್ಯವಿದೆ. ಈ BSNL ಯೋಜನೆಯಲ್ಲಿ, ನೀವು ಪ್ರತಿದಿನ 2GB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತೀರಿ. 2GB ಡೇಟಾ ಖಾಲಿಯಾದ ನಂತರವೂ ನಿಮ್ಮ ಇಂಟರ್ನೆಟ್ ಸಂಪರ್ಕವು ಕಡಿತವಾಗುವುದಿಲ್ಲ. ಆದರೆ ಇಲ್ಲಿ ವೇಗವು 40Kbps ಗೆ ಕಡಿಮೆಯಾಗುತ್ತದೆ. ಒಟ್ಟು ಇಂಟರ್ನೆಟ್ ಪ್ರಯೋಜನದ ಕುರಿತು ಹೇಳುವುದಾದರೆ, ಈ ಯೋಜನೆಯಲ್ಲಿ ನೀವು ಸಂಪೂರ್ಣ 730GB ಡೇಟಾವನ್ನು ಪಡೆಯುತ್ತೀರಿ.


ಇದನ್ನೂ ಓದಿ-ಶೀಘ್ರದಲ್ಲಿಯೇ ರಿಲಯನ್ಸ್ ಜಿಯೋನಿಂದ ದೇಶದ ಅತ್ಯಂತ ಅಗ್ಗದ 5ಜಿ ಫೋನ್ ಬಿಡುಗಡೆ, ವೈಶಿಷ್ಟ್ಯ-ಬೆಲೆ ಮಾಹಿತಿ ಇಲ್ಲಿದೆ!


ದೀರ್ಘಾವಧಿಯ ಮಾನ್ಯತೆಯಿಂದಾಗಿ, ನೀವು 1 ವರ್ಷಕ್ಕೆ ಪ್ರತಿ ತಿಂಗಳು ರೀಚಾರ್ಜ್‌ನ ಒತ್ತಡದಿಂದ ಮುಕ್ತರಾಗುತ್ತೀರಿ. ಇತರ ಕಂಪನಿಗಳು 365 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಗೆ ರೂ 2500 ರಿಂದ ರೂ 3500 ವರೆಗೆ ಶುಲ್ಕ ವಿಧಿಸಿದರೆ, ಈ BSNL ಯೋಜನೆಯು ಅದರ ಅರ್ಧದಷ್ಟು ಬೆಲೆಗೆ ಲಭ್ಯವಿದೆ. BSNL ರೂ. 1,515 ಯೋಜನೆ, ಬಳಕೆದಾರರು ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಕಂಪನಿಯು ಈ ಯೋಜನೆಯೊಂದಿಗೆ OTT ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಒದಗಿಸದ ಕಾರಣ, ಇದು ಕೆಲವು ಬಳಕೆದಾರರಿಗೆ ಇಷ್ಟವಾಗದೆ ಇರಬಹುದು. ಆದರೆ, ಓಟಿಟಿ ಸೇವೆ ಒದಗಿಸುವ ಬೇರೆ ಕಂಪನಿಗಳ 1 ವರ್ಷದ ಯೋಜನೆಗಳು ಕೂಡ ದುಬಾರಿಯಾಗಿವೆ ಎಂಬುದು ಇಲ್ಲಿ ಗಮಹಿಸಬೇಕಾದ ಅಂಶ. 


ಇದನ್ನೂ ಓದಿ-Honda CD110 Dream Deluxe 2023 ಮಾರುಕಟ್ಟೆಗೆ ಬಿಡುಗಡೆ, ಬೆಲೆ ಜೊತೆಗೆ ಹೆಚ್ಚುವರಿ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ!


BSNL ನ ಈ ಯೋಜನೆಯು ದೀರ್ಘಕಾಲದವರೆಗೆ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳುವ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಿದೆ. ನೀವೂ ಕೂಡ ಪ್ರತಿ ತಿಂಗಳು ರೀಚಾರ್ಜ್ ಮಾಡುವ ಒತ್ತಡದಿಂದ ಮುಕ್ತರಾಗಲು ಬಯಸಿದರೆ, ನೀವು ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ