ಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂದಿನ ವರ್ಷ 4 ರಿಂದ 5 ಹೊಸ ಮೋಟಾರ್ಸೈಕಲ್ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಬಹುದು.
ನವದೆಹಲಿ: 2022ರ ಹೊಸ ವರ್ಷದಲ್ಲಿ ರಾಯಲ್ ಎನ್‌ಫೀಲ್ಡ್ ನ ವಿವಿಧ ಮೋಟಾರ್‌ಸೈಕಲ್‌ಗಳ ಅಬ್ಬರ ಶುರುವಾಗಲಿದೆ. ಕಂಪನಿಯು ಮುಂದಿನ ವರ್ಷ 4 ರಿಂದ 5 ಹೊಸ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಬಹುದು. ಈ ಪೈಕಿ 1 ಮಾದರಿಯ ಬೈಕ್ ಕುರಿತ ವಿಡಿಯೋವನ್ನು ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ನೂತನ ಬೈಕ್ ನ ಹೆಸರು ರಾಯಲ್ ಎನ್‌ಫೀಲ್ಡ್ ಹಂಟರ್ 350(Royal Enfield Hunter 350). 2022ರ ಫೆಬ್ರವರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಹಿಮಾಲಯನ್ ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು ಆಧರಿಸಿದ ತನ್ನ ಹೊಚ್ಚ ಹೊಸ Scrum 411 ಅನ್ನು ಬಿಡುಗಡೆ ಮಾಡಲಿದೆ. ಇದಕ್ಕೂ 1 ತಿಂಗಳ ಮುಂಚಿತವಾಗಿ ಹಂಟರ್ ದೇಶೀಯ ಮಾರುಕಟ್ಟೆ ಪ್ರವೇಶಿಸಿರುತ್ತದೆ.
ಕಂಪನಿಯು ತನ್ನ ಹಲವಾರು ಮೋಟಾರ್‌ಸೈಕಲ್‌ಗಳ ಪರೀಕ್ಷೆಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಯಲ್ ಎನ್‌ಫೀಲ್ಡ್ ನ ಹಂಟರ್(Royal Enfield Hunter 350) ಕುರಿತ ವಿಡಿಯೋ ನೋಡುಗರ ಗಮನ ಸೆಳೆದಿದೆ. ವಿನೂತನ ಬೈಕ್ ಮಾದರಿಯ ವಿನ್ಯಾಸಕ್ಕೆ ನೋಡುಗರು ಫಿದಾ ಆಗಿದ್ದಾರೆ. ಬೈಕ್ ಪ್ರಿಯರಂತೂ ಯಾವಾಗ ಈ ಬೈಕ್ ಖರೀದಿಸುತ್ತಿವೋ ಎಂದು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ. ಏಕೆಂದರೆ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ಗಳು ಅದ್ಭುತ ವೈಶಿಷ್ಟ್ಯದೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಇದನ್ನೂ ಓದಿ: Multiple SIM Cards: ನೀವೂ ಸಹ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಬಳಸುತ್ತೀರಾ? ಜಾಗರೂಕರಾಗಿರಿ!
ಮೆಟಿಯರ್ 350 ಆಧಾರಿತ ಪ್ಲಾಟ್‌ಫಾರ್ಮ್
Royal Enfield Hunter)ನ ತೂಕವು ಮೆಟಿಯರ್ 350ಗಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ.
ಅತ್ಯಂತ ಕೈಗೆಟುಕುವ ದರದಲ್ಲಿ ಸಿಗಲಿದೆ ಬೈಕ್?
ಹಂಟರ್ 350 ಸೆಮಿ-ಡಿಜಿಟಲ್ ಕನ್ಸೋಲ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್(Royal Enfield New Bike)ನೊಂದಿಗೆ ಬರಲಿದೆ. ಈ ಹಿಂದೆ 2021ರ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ಹಿಮಾಲಯನ್‌ಗಳಲ್ಲಿ ನೋಡಿದಂತೆ ಇದನ್ನು ಕಾಣಬಹುದಾಗಿದೆ. ಹಂಟರ್ 350 ಈ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದ್ದರಿಂದ ಈ ಬೈಕ್ ಉತ್ತಮವಾಗಿ ಕಾಣುವ LED DRLಗಳು ಮತ್ತು ಬ್ಲಿಂಕರ್‌ಗಳನ್ನು ಹೊಂದಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಹೋಂಡಾ CB350RS, ಜಾವಾ ಸ್ಟ್ಯಾಂಡರ್ಡ್ 300, ಜಾವಾ ಫೋರ್ಟಿ ಟು ಮತ್ತು ಬೆನೆಲ್ಲಿ ಇಂಪೀರಿಯಲ್ ಜೊತೆಗೆ ರಾಯಲ್ ಎನ್‌ಫೀಲ್ಡ್ ನ ಹೊಸ ಬೈಕ್ ಗಳು ಸ್ಪರ್ಧಿಸಲಿವೆ. ದೇಶದಲ್ಲಿ ಈ ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ ಸುಮಾರು 1.70 ಲಕ್ಷ ರೂ. ಇರುತ್ತದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.