Royal Enfield 650 Anniversary Edition: ಬಿಡುಗಡೆಯಾದ ಕೇವಲ 120 ಸೆಕೆಂಡ್ ಗಳಲ್ಲಿ 120 ಬೈಕ್ ಮಾರಾಟ ಮಾಡಿ ದಾಖಲೆ ಬರೆದ Royal Enfield

Royal Enfield: ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ ಆನಿವರ್ಸರಿ ಎಡಿಷನ್  ನ ಒಟ್ಟು 120 ಯುನಿಟ್‌ಗಳನ್ನು ಕೇವಲ 120 ಸೆಕೆಂಡುಗಳಲ್ಲಿ ಮಾರಾಟ ಮಾಡುವ ಮೂಲಕ ರಾಯಲ್ ಎನ್‌ಫೀಲ್ಡ್ (Roayl Enfield 650) ಭಾರತದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.

Royal Enfield: ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ ಆನಿವರ್ಸರಿ ಎಡಿಷನ್  ನ ಒಟ್ಟು 120 ಯುನಿಟ್‌ಗಳನ್ನು ಕೇವಲ 120 ಸೆಕೆಂಡುಗಳಲ್ಲಿ ಮಾರಾಟ ಮಾಡುವ ಮೂಲಕ ರಾಯಲ್ ಎನ್‌ಫೀಲ್ಡ್ (Roayl Enfield 650) ಭಾರತದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ರಾಯಲ್ ಎನ್‌ಫೀಲ್ಡ್‌ನ 120 ನೇ ವಾರ್ಷಿಕೋತ್ಸವವನ್ನು (Royal Enfield 120th Anniversary Edition) ಆಚರಿಸಲು ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಗಳ ಈ ಆವೃತ್ತಿಯನ್ನು ವಿಶೇಷವಾಗಿ ತಯಾರಿಸಲಾಗಿತ್ತು.  ದೇಶದ ಪ್ರಮುಖ ಹೆಚ್ಚು ಕಾರ್ಯಕ್ಷಮತೆಯ ಮೋಟಾರ್‌ಸೈಕಲ್ ತಯಾರಕ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಆನಿವರ್ಸರಿ ಎಡಿಷನ್ (Royal Enfield 650 Twins) ಮಾದರಿಯನ್ನು EICMA 2021 ರಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್ ನ ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

 

ಇದನ್ನೂ ಓದಿ-Royal Enfield ಟೆನ್ಶನ್ ಹೆಚ್ಚಿಸಲು ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಈ ಬೈಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

1. ದಾಖಲೆ ಬರೆದ ರಾಯಲ್ ಎನ್‌ಫೀಲ್ಡ್ - ರಾಯಲ್ ಎನ್‌ಫೀಲ್ಡ್ ಈ ವಿಶೇಷ ಆವೃತ್ತಿಯ ಮೋಟಾರ್‌ಸೈಕಲ್‌ನ 480 ಯುನಿಟ್‌ಗಳನ್ನು ಮಾತ್ರ ಜಾಗತಿಕವಾಗಿ ಮಾರಾಟ ಮಾಡಲಾಗುವುದು ಎಂದು ಘೋಷಿಸಿದೆ. ಇವುಗಳಲ್ಲಿ 120 ಯೂನಿಟ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಮಾರಾಟ ಮಾಡಲು ನಿಗದಿಪಡಿಸಲಾಗಿತ್ತು. ಆದರೆ, ಅದು ಕೇವಲ 120 ಸೆಕೆಂಡುಗಳಲ್ಲಿ ಮಾರಾಟವಾಗಿದೆ. ಅಂದರೆ 120 ಬೈಕ್ ಗಳು ದಾಖಲೆ ಸಮಯದಲ್ಲಿ ಮಾರಾಟವಾಗಿವೆ ಎಂದು ಸ್ವತಃ ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿದೆ. ವಿಶೇಷ ಆವೃತ್ತಿಯ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಆನಿವರ್ಸರಿ ಎಡಿಷನ್ ಮೋಟಾರ್‌ಸೈಕಲ್ ಅನ್ನು ಡಿಸೆಂಬರ್ 6 ರಂದು 'ಮೊದಲಿಗೆ ಬಂದವರಿಗೆ ಮೊದಲು ಸೇವೆ' ಆಧಾರದ ಮೇಲೆ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

2 /6

2. ಅತ್ಯದ್ಭುತ ವೈಶಿಷ್ಟ್ಯಗಳುಳ್ಳ ಬೈಕ್ (RE 120 Anniversary Edition Features) - ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಗಳ 120 ನೇ ಆವೃತ್ತಿಯ ಮಾದರಿಗಳು ಹ್ಯಾಂಡ್‌ಕ್ರಾಫ್ಟ್, ಡೈ-ಕಾಸ್ಟ್ ಹಿತ್ತಾಳೆ ಇಂಧನ ಟ್ಯಾಂಕ್ ಬ್ಯಾಡ್ಜ್ ಅನ್ನು  ಹೊಂದಿದೆ. ಅಷ್ಟೇ ಅಲ್ಲ, ವಾಹನವನ್ನು ಹೆಚ್ಚು ಆಕರ್ಷಕವಾಗಿಸಲು ಕೈಯಿಂದ ಚಿತ್ರಿಸಿದ ಪಿನ್‌ಸ್ಟ್ರೈಪ್‌ಗಳನ್ನು ಸಹ ನೀಡಲಾಗಿದೆ. ಇದರ ಜೊತೆಗೆ, ಇಂಧನ ಟ್ಯಾಂಕ್ ಟಾಪ್ ಬ್ಯಾಡ್ಜ್ ವಿಶಿಷ್ಟವಾದ ಸರಣಿ ಸಂಖ್ಯೆ ಮತ್ತು ಸೈಡ್ ಬಾಡಿ ಪ್ಯಾನೆಲ್‌ನಲ್ಲಿ ವಿಶೇಷ ಡೆಕಾಲ್ ಅನ್ನು ಹೊಂದಿದೆ. 

3 /6

3. ಉತ್ಕೃಷ್ಟ ವಿಶೇಷತೆಗಳನ್ನು ಹೊಂದಿದೆ - ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ 120 ನೇ ವಾರ್ಷಿಕೋತ್ಸವ ಆವೃತ್ತಿಯ ಮಾದರಿತೆ ವಿಶಿಷ್ಟವಾದ, ರಿಚ್ ಬ್ಲಾಕ್-ಕ್ರೋಮ್ ಇಂಧನ ಟ್ಯಾಂಕ್ ಅನ್ನು ನೀಡಲಾಗಿದೆ. ಮೋಟಾರ್‌ಸೈಕಲ್‌ನಲ್ಲಿ ಎಂಜಿನ್ ಮತ್ತು ಎಕ್ಸಾಸ್ಟ್ ಅನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ ನೀಡಲಾಗಿದೆ. ಈ ಮಾದರಿಗಳು ಫ್ಲೈಸ್ಕ್ರೀನ್, ಇಂಜಿನ್ ಗಾರ್ಡ್, ಹೀಲ್ ಗಾರ್ಡ್ ಮತ್ತು ಇನ್ನೂ ಅನೇಕ ಮೂಲ ಬಿಡಿಭಾಗಗಳೊಂದಿಗೆ ಅಳವಡಿಸಲ್ಪಟ್ಟಿವೆ. ಅಂದರೆ, ಈ ಬೈಕ್ ತುಂಬಾ ಆಕರ್ಷಕವಾಗಿ ಕಾಣುತ್ತದೆ.

4 /6

4. ರಾಯಲ್ ಎನ್ ಫೀಲ್ಡ್ ನ ಜಬರ್ದಸ್ತ್ ಪರ್ಫಾರ್ಮೆನ್ಸ್ ಇತಿಹಾಸ ಹೊಂದಿದೆ - ನವೆಂಬರ್ 1901 ರಲ್ಲಿ, ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಮೋಟಾರ್‌ಸೈಕಲ್ ಅನ್ನು ಲಂಡನ್‌ನಲ್ಲಿ ನಡೆದ ಸ್ಟಾನ್ಲಿ ಸೈಕಲ್ ಶೋನಲ್ಲಿ ಬಿಡುಗಡೆ ಮಾಡಿತ್ತು. ಈ ವರ್ಷ ತನ್ನ 120 ನೇ ವಾರ್ಷಿಕೋತ್ಸವವನ್ನು ಆಚರಿಸಲು, ಕಂಪನಿಯು ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್, ಕಾಂಟಿನೆಂಟಲ್ ಜಿಟಿ 650 ಗಳ 120 ನೇ ವಾರ್ಷಿಕೋತ್ಸವ ಆವೃತ್ತಿಯನ್ನು ವಿನ್ಯಾಸಗೊಳಿಸಿದೆ ಮತ್ತು ಪರಿಚಯಿಸಿದೆ. ಆದ್ದರಿಂದ, ಈ ಮೋಟಾರ್‌ಸೈಕಲ್‌ಗಳು ವಿಶೇಷ ಬ್ಯಾಡ್ಜಿಂಗ್ ಮತ್ತು ವಿಶೇಷ ಲೈವರಿಯೊಂದಿಗೆ ಬರುತ್ತಿವೆ. 

5 /6

5. ಸ್ಟೈಲಿಂಗ್ ಕೂಡ ಅಧ್ಬುತವಾಗಿದೆ - ವಿಶೇಷ ಆವೃತ್ತಿಯ 650cc ಮಾದರಿಯ ಎಂಜಿನ್ ಮತ್ತು ವಿಶೇಷತೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.  ಈ ವಿಶೇಷ ಬ್ಲಾಕ್ ಔಟ್ ರಾಯಲ್ ಎನ್ ಫೀಲ್ಡ್ ಜೇನ್ಯುಯಿನ್ ಮೋಟರ್ ಸೈಕಲ್ ಎಕ್ಸಸರಿ ಕಿಟ್ ಜೊತೆ-ಜೊತೆಗೆ ನಾಲ್ಕನೇ ಹಾಗೂ ಐದನೇ ವರ್ಷಕ್ಕಾಗಿ ಮೂರು ವರ್ಷಗಳ OEM ವಾರಂಟಿ ಜೊತೆಗೆ ಒಂದು ಎಕ್ಸ್ ಟೆಂಡೆಡ್ ವಾರಂಟಿಯೊಂದಿಗೆ ಬಿಡುಗಡೆಯಾಗಿದೆ.

6 /6

6. 2021ರಲ್ಲಿ ರಾಯಲ್ ಎನ್ ಫೀಲ್ಡ್ ಮಾರಾಟ ಕುಸಿದಿದೆ - ರಾಯಲ್ ಎನ್‌ಫೀಲ್ಡ್‌ನ ದೇಶೀಯ ಮೋಟಾರ್‌ಸೈಕಲ್ ಮಾರಾಟವು 2021 ರ ನವೆಂಬರ್‌ನಲ್ಲಿ 44,830 ಯುನಿಟ್‌ಗಳಿಗೆ ಶೇ.24 ರಷ್ಟು ಕಡಿಮೆಯಾಗಿದೆ, ಒಂದು ವರ್ಷದ ಹಿಂದೆ ಇದೇ ತಿಂಗಳಿನಲ್ಲಿ 59,084 ಯುನಿಟ್‌ಗಳಷ್ಟಿತ್ತು. ಆದರೆ, ಮೋಟಾರ್‌ಸೈಕಲ್ ದೈತ್ಯ ರಫ್ತು ಸಂಖ್ಯೆಗಳು ಕಳೆದ ತಿಂಗಳು 6,824 ಯುನಿಟ್‌ಗಳಷ್ಟು ಹೆಚ್ಚಾಗಿತ್ತು. ರಫ್ತುಗಳು ನವೆಂಬರ್ 2020 ರಲ್ಲಿ 4,698 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು ಮತ್ತು  ಇದು ಶೇ. 45 ರಷ್ಟು ಹೆಚ್ಚಾಗಿದೆ.