AC ಮೇಲೆ ಸಿಗುತ್ತಿದೆ ಭಾರೀ Discount, 25% ದಷ್ಟು ವಿದ್ಯುತ್ ಕೂಡಾ ಉಳಿತಾಯವಾಗಲಿದೆ
ಈ ಸೇಲ್ ಆಗಸ್ಟ್ 21ಕ್ಕೆ ಆರಂಭವಾಗಿದ್ದು, 25 ರವರೆಗೆ ನಡೆಯಲಿದೆ. ಅಲ್ಲಿ ನೀವು ವಿಂಡೋಸ್ ಎಸಿಯಲ್ಲಿ ಭಾರೀ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ನವ ದೆಹಲಿ : ಬೇಸಿಗೆ ಬಿಸಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಫ್ಯಾನ್ ಅಥವಾ ಕೂಲರ್ ಕೂಡಾ ಕೆಲಸಕ್ಕೆ ಬರುವುದಿಲ್ಲ. ಆ ಸಮಯದಲ್ಲಿ ಸಮಸ್ಯೆ ಬಗೆಹರಿಸುವುದು ಎಸಿ . ಆದರೆ AC ಹಾಕಿದರೆ, ವಿದ್ಯುತ್ ಬಿಲ್ ಏರತೊಡಗುತ್ತದೆ. ಈ ಸಮಸ್ಯೆಗೆ ಫ್ಲಿಪ್ಕಾರ್ಟ್ ಪರಿಹಾರವನ್ನು ನೀಡಿದೆ. ಗ್ರ್ಯಾಂಡ್ ಹೋಂ ಅಪ್ಪ್ಲೈಯೆನ್ಸೆಸ್ ಸೇಲ್ (lipkart Grand Home Appliances Sale) ನಡೆಯುತ್ತಿದೆ. ಈ ಸೇಲ್ ಆಗಸ್ಟ್ 21ಕ್ಕೆ ಆರಂಭವಾಗಿದ್ದು, 25 ರವರೆಗೆ ನಡೆಯಲಿದೆ. ಅಲ್ಲಿ ನೀವು ವಿಂಡೋಸ್ ಎಸಿಯಲ್ಲಿ (Window Ac) ಭಾರೀ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಫ್ಲಿಪ್ಕಾರ್ಟ್ನ ಮಾರ್ಕ್ಯೂ ಎಸಿಸಿ (MarQ)
1.5 ಟನ್ ಸಾಮರ್ಥ್ಯ ಹೊಂದಿರುವ ಈ MarQ AC 23% ರಿಯಾಯಿತಿ ದರದಲ್ಲಿ ಅಂದರೆ 29,999 ರ ಬದಲು 22,990 ರೂಗಳಿಗೆ ಸಿಗುತ್ತಿದೆ. ಇದರ ಬಳಕೆಯಿಂದ 15% ದಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಇದಕ್ಕೆ 3 ಸ್ಟಾರ್ ಗಳ ರೇಟಿಂಗ್ ಕೂಡ ನೀಡಲಾಗಿದೆ. ಆಟೋ ರೀಸ್ಟಾರ್ಟ್ ಮತ್ತು ಸ್ಲೀಪ್ ಮೋಡ್ ನಂತಹ ವೈಶಿಷ್ಟ್ಯಗಳನ್ನು ಕೂಡಾ ಇದು ಹೊಂದಿದೆ. ಒಂದು ವರ್ಷದ ಪ್ರಾಡಕ್ಟ್ ವಾರಂಟಿ ಮತ್ತು 5 ವರ್ಷಗಳ ಕಾಮೆಪ್ರೇಸರ್ ವಾರಂಟಿಯೊಂದಿಗೆ ಈ ಎಸಿ ಯನ್ನು ಖರೀದಿಸಬಹುದು. ಇದನ್ನು 797 ರೂ.ಗಳ ಇಎಂಐನಲ್ಲಿ (EMI) ಖರೀದಿಸಬಹುದು. ನೀವು ಕೋಟಕ್ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit card) ಹೊಂದಿದ್ದರೆ, ಇನ್ನೂ ಹೆಚ್ಚುವರಿ ರಿಯಾಯಿತಿ ಸಿಗಲಿದೆ.
ಇದನ್ನೂ ಓದಿ : Truecallerಗೆ ಟಕ್ಕರ್ ನೀಡಲು ಬಂದಿದೆ Bharat calller app, ಇದರ ವೈಶಿಷ್ಟ್ಯ ಗಳೇನು ಗೊತ್ತಾ ?
ಗೋದ್ರೆಜ್ 1.5 ಟನ್ ಎಸಿ :
ಆಟೋ ರೀಸ್ಟಾರ್ಟ್ (Auto restart) ವೈಶಿಷ್ಟ್ಯವನ್ನು ಹೊಂದಿರುವ ಈ ಎಸಿ 1.5 ಟನ್ ಮತ್ತು ಸ್ಲೀಪ್ ಮೋಡ್ನೊಂದಿಗೆ ಬರುತ್ತದೆ. ಈ ವಿಂಡೋ ಎಸಿ (window AC) ತ್ರೀಸ್ಟಾರ್ ರೇಟಿಂಗ್ ನೊಂದಿಗೆ ಬರುತ್ತದೆ. ಇದರಲ್ಲಿಯೂ 15%ವರೆಗೆ ವಿದ್ಯುತ್ ಉಳಿತಾಯ ಮಾಡಬಹುದು. ಒಂದು ವರ್ಷದ ಕಂಪ್ರಾಹೆನ್ಸಿವ್ ವಾರಂಟಿ ಮತ್ತು 5 ವರ್ಷಗಳ ಕಾಮೆಪ್ರೇಸರ್ ವಾರಂಟಿ ಸಿಗುತ್ತದೆ. 29,900 ರೂ.ಗಳ ಈ ಎಸಿಯನ್ನು 23,889 ರೂ.ಗೆ ಖರೀದಿಸಬಹುದು. ತಿಂಗಳಿಗೆ 835 ರೂ.ಗಳ ಇಎಂಐನಲ್ಲಿ ಇದನ್ನು ಖರೀದಿಸಬಹುದು.
ಇಂಟೆಕ್ಸ್ 1.5 ಟನ್ ಎಸಿ :
25,000 ರೂ. ಮೌಲ್ಯದ ಇಂಟೆಕ್ಸ್ ಅನ್ನು 23,490 ರೂ. ಗೆ ಖರೀದಿಸಬಹುದು. 1.5 ಟನ್ ಸಾಮರ್ಥ್ಯದೊಂದಿಗೆ, ಬರುವ ಈ ಎಸಿ 25% ದಷ್ಟು ವಿದ್ಯುತ್ ಅನ್ನು ಉಳಿಸುತ್ತದೆ. ಅಲ್ಲದೆ, ಇದು 5 ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಇದು ಟರ್ಬೊ ಕೂಲ್, ಸ್ಲೀಪ್ ಮತ್ತು ಡೋರ್ ಮೋಡ್ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಒಂದು ವರ್ಷದ ಕಂಪ್ರಾಹೆನ್ಸಿವ್ ವಾರಂಟಿ, ಹತ್ತು ವರ್ಷಗಳ ಪ್ರಾಡಕ್ಟ್ ವಾರಂಟಿ, ಐದು ವರ್ಷದ ಕಾಯಿಲ್ ವಾರಂಟಿಯೊಂದಿಗೆ ಬರುತ್ತದೆ. 815 ರ EMI ನಲ್ಲಿ ಇದನ್ನು ಖರೀದಿಸಬಹುದು. ಕೋಟಕ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿದ್ದರೆ ಹೆಚ್ಚುವರಿ ರಿಯಾಯಿತಿ ಪಡೆಯುತ್ತೀರಿ.
ಇದನ್ನೂ ಓದಿ : Google: ಈ ಅಪಾಯಕಾರಿ 8 ಆಪ್ಗಳನ್ನು ತಕ್ಷಣವೇ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಹ್ಯಾಕ್ ಆಗುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ