Whatsappನಲ್ಲಿದೆ ಈ ಅದ್ಭುತ ಫೀಚರ್ಸ್ ; App ಬಳಸುವುದು ಇನ್ನಷ್ಟು ಸುಲಭ
ವಾಟ್ಸಾಪ್ ಇತ್ತೀಚೆಗೆ Disappearing Messages ಫೀಚರ್ ಅನ್ನು ತಂದಿತ್ತು. ಇದನ್ನು ಆಕ್ಟಿವೆಟ್ ಮಾಡಿಕೊಂಡರೆ, ಚಾಟ್‌ಗೆ ಕಳುಹಿಸಿದ ಮೆಸೇಜ್ ಗಳು 7 ದಿನಗಳ ಡಿಲೀಟ್ ಆಗುತ್ತದೆ. ಇದೇ ರೀತಿ ಇದೀಗ ಕಂಪನಿ, Disappearing Photos ಫೀಚರ್ ತರಲು ಸಿದ್ಧತೆ ನಡೆಸುತ್ತಿದೆ.
ನವದೆಹಲಿ : Whatsapp ನಿರಂತರವಾಗಿ ತನ್ನ ಫೀಚರ್ ಅನ್ನು ಬದಲಾಯಿಸುತ್ತಿರುತ್ತದೆ. ತನ್ನ ಬಳಕೆದಾರರಿಗೆ ಉಪತೋಗವಾಗುವಂಥಹ ಬಹಳಷ್ಟು ಹೊಸ ಫೀಚರ್ ನಗಳನ್ನು ಪರಿಚಯಿಸುತ್ತಿದೆ. ವಾಟ್ಸಾಪ್ ಕೆಲವು ಅದ್ಬೂತ ಫೀಚರ್ ಗಳನ್ನು (Upcoming WhatsApp Features) ಪರಿಚಯಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಫೀಚರ್ ಗಳು ಬಳಕೆದಾರರಿಗೆ ಲಭ್ಯವಿರುತ್ತದೆ.
WhatsApp Disappearing Photos :
ವಾಟ್ಸಾಪ್ ಇತ್ತೀಚೆಗೆ Disappearing Messages ಫೀಚರ್ ಅನ್ನು ತಂದಿತ್ತು. ಇದನ್ನು ಆಕ್ಟಿವೆಟ್ ಮಾಡಿಕೊಂಡರೆ, ಚಾಟ್‌ಗೆ ಕಳುಹಿಸಿದ ಮೆಸೇಜ್ ಗಳು 7 ದಿನಗಳ ಡಿಲೀಟ್ ಆಗುತ್ತದೆ. ಇದೇ ರೀತಿ ಇದೀಗ ಕಂಪನಿ, Disappearing Photos ಫೀಚರ್ ತರಲು ಸಿದ್ಧತೆ ನಡೆಸುತ್ತಿದೆ. ಇದರಲ್ಲೂ ಕೂಡಾ Disappearing Messages ನಂತೆಯೇ ನಿರರ್ದಿಷ್ಟ ಸಮಯದ ನಂತರ ಚಾಟ್ ನಲ್ಲಿರುವ ಫೋಟೋಗಳು ಕೂಡಾ ಡಿಲೀಟ್ ಆಗುತ್ತವೆ.
ಇದನ್ನೂ ಓದಿ : Tech News : ಸ್ಯಾಮ್ ಸಂಗ್ ನ ಈ ಫೋನ್ ನಲ್ಲಿದೆಯಂತೆ ಸಮಸ್ಯೆ ; ಕಂಪನಿ ವಿರುದ್ಧ ದಾಖಲಾಯಿತು ಕೇಸ್
ರೀಡ್ ಲೇಟರ್ (Read Later) :
ವಾಟ್ಸಾಪ್ ನಲ್ಲಿ, ಚಾಟ್ ಅನ್ನು ಆರ್ಕೈವ್ ಮಾಡುವ ಅವಕಾಶವಿದೆ. ಬಳಕೆದಾರರಿಗೆ ಬೇಕಾದ ಚಾಟ್‌ಗಳನ್ನು ಆರ್ಕೈವ್ ಮಾಡಬಹುದು ಮತ್ತು ಅವುಗಳನ್ನು ದೀರ್ಘಕಾಲದವರೆಗೆ ಇರಿಸಿಕೊಳ್ಳಬಹುದು. ವಾಟ್ಸಾಪ್ ರೀಡ್ ಲೇಟರ್ (Read Later) ಕೂಡಾ ಇದೇ ರೀತಿಯ ಫೀಚರ್ ಆಗಿದೆ. ಈ ಫೀಚರ್ ಆಕ್ಟಿವೇಟ್ ಆದ ನಂತರ, ಯಾರ ಚಾಟ್ ಅನ್ನು ರೀಡ್ ಲೇಟರ್ ಗೆ ಹಾಕಲಾಗಿರುತ್ತದೆಯೋ ಆ ನಂಬರಿನ ಯಾವುದೇ ಮೆಸೇಜ್ ನೊಟಿಫೀಕೇಶನ್ (Notification) ಸಿಗುವುದಿಲ್ಲ. ನಿಮಗಿಷ್ಟ ಬಂದ ಸಮಸಯದಲ್ಲಿ ಚಾಟಿನಲ್ಲಿರುವ ಮೆಸೇಜ್ ಗಳನ್ನು ಓದಬಹುದು.
ಮಲ್ಟಿ ಡಿವೈಸ್ ಸಪೋರ್ಟ್ (Multi-Device Support) :
ವಾಟ್ಸಾಪ್ ಬಳಕೆದಾರರಿಗೆ ಬಹಳ ಅಗತ್ಯವಿರುವ ಫೀಚರ್ ಎಂದರೆ ಇದೇ. ಪ್ರಸ್ತುತ, ಒಂದು ಖಾತೆಯನ್ನು ಕೇವಲ ಒಂದು ಡಿವೈಸ್ ನಲ್ಲಿ ಮಾತ್ರ ಚಲಾಯಿಸಬಹುದು. ಒಂದಕ್ಕಿಂತ ಹೆಚ್ಚು ಡಿವೈಸ್ ನಲ್ಲಿ ಒಂದೇ ವಾಟ್ಸಾಪ್ (Whatsapp) ಖಾತೆಯನ್ನು ಬಳಸುವಂತಿಲ್ಲ. ಇದೀಗ, Multi-Device Support ಫೀಚರ್ ಬಂದರೆ, ಈ ಸಮಸ್ಯೆಯಿಂದ ಪರಿಹಾರ ಸಿಗಲಿದೆ. ಕಂಪನಿ ಈ ಫೀಚರ್ ಮೇಲೆ ಬಹಳ ಸಮಯದಿಂದ ಕೆಲಸ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಫೀಚರ್ ಬಳಕೆದಾರರು ಬಳಕೆಗೆ ಲಭ್ಯವಿರಲಿದೆ.
ಇದನ್ನೂ ಓದಿ : Coronavirusಗೆ ಅಂತ್ಯ ಹಾಡಲು Molecule ಅನ್ವೇಷಿಸಿದ Tech Mahindra, ಪೇಟೆಂಟ್ ಗೆ ಅರ್ಜಿ
ಜಾಯಿನ್ ಮಿಸ್ಡ್ ಗ್ರೂಪ್ ಕಾಲ್ಸ್ (Join Missed Group Calls) :
Google Duo ಸೇರಿದಂತೆ ಇತರ ಗ್ರೂಪ್ ಕಾಲ್ಸ್ ನಲ್ಲಿ ಚಾಲ್ತಿಯಲ್ಲಿರುವ ಗ್ರೂಪ್ ಕಾಲ್ ಗೆ join ಆಗುವ ಅವಕಾಶ ಕಲ್ಪಿಸುತ್ತದೆ. ಮುಂದಿನ ದಿನಗಳಲ್ಲಿ, ವಾಟ್ಸಾಪ್ ಈ ಫೀಚರ್ ಅನ್ನು ತನ್ನ ಅಪ್ಲಿಕೇಶನ್‌ನಲ್ಲಿ ಸೇರಿಸಿಕೊಳ್ಳಬಹುದು. ಈ ಅಪ್ ಡೇಟ್ ನಂತರ, ಚಾಲ್ತಿಯಲ್ಲಿರುವ ವಿಡಿಯೋ ಕಾಲ್ಗೆ ಮಧ್ಯದಲ್ಲಿ ಜಾಯಿನ್ ಆಗಬಹುದು.
Instagram ರೀಲ್ ಆನ್ ವಾಟ್ಸಾಪ್ ( Instagram Reels on WhatsApp) :
Facebook ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಒಂದಕ್ಕೊಂದು ಸಂಪರ್ಕಿಸಲು ಪ್ರಯತ್ನಿಸುತ್ತದೆ. ಮುಂದಿನ ದಿನಗಳಲ್ಲಿ, ಕಂಪನಿ ಇಂಥದ್ದೇ ಫೀಚರ್ ಅನ್ನು ವಾಟ್ಸಾಪ್ ನಲ್ಲಿಯೂ ಸೇರಿಸಲಿದೆ. ಕಂಪನಿಯು ತನ್ನ ಫೋಟೋ ಶೇರಿಂಗ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನ ರೀಲ್ಸ್ ವೈಶಿಷ್ಟ್ಯವನ್ನು ವಾಟ್ಸಾಪ್‌ನೊಂದಿಗೆ ಸೇರಿಸಬಹುದು. ಈ ಫೀಚರ್ ಅನ್ನು ಸೇರಿಸಿದರೆ, ವಾಟ್ಸಾಪ್ ಬಳಕೆದಾರರು ತಮ್ಮ ಅಪ್ಲಿಕೇಶನ್‌ನಲ್ಲಿ Instagram Reels ನೋಡುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : Google Pay NFC Service: ಶೀಘ್ರದಲ್ಲಿಯೇ ಭಾರತದಲ್ಲಿ Google Pay ಬಳಕೆದಾರರು NFC ಬಳಸಿ ಸಂಪರ್ಕರಹಿತ UPI ಪೇಮೆಂಟ್ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.