ಗ್ರಾಹಕರು ಆಂಡ್ರಾಯ್ಡ್‌ಗಿಂತ ಆಪಲ್ ಐಫೋನ್‌ಗೆ ಹೆಚ್ಚಿನ ಆದ್ಯತೆ ನೀಡಲು ಇವೇ ಪ್ರಮುಖ ಕಾರಣಗಳು
iPhone: ಈ ತಂತ್ರಜ್ಞಾನ ಯುಗದಲ್ಲಿ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್ ನದ್ದೆ ಸದ್ದು. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ನಾನೂ ಕೂಡ ಐಫೋನ್ ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ದುಬಾರಿ ಆದರೂ ಕೂಡ ಜನ ಐಫೋನ್ ಬಗ್ಗೆ ಏಕೆ ಅಷ್ಟು ಒಲವು ತೋರುತ್ತಾರೆ, ಗೊತ್ತಾ!
iPhone Love: ಇಡೀ ವಿಶ್ವದಲ್ಲಿ ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದ್ದೇ ಇರುತ್ತದೆ. ಈ ಸ್ಮಾರ್ಟ್‌ಫೋನ್ ಯುಗದಲ್ಲಿ ಜೀವನದಲ್ಲಿ ಒಮ್ಮೆಯಾದರೂ ನಾವು ಹೊಸ ಐಫೋನ್ ಖರೀದಿಸಬೇಕು ಎಂಬ ಬಯಕೆ ಬಹುತೇಕ ಜನರಲ್ಲಿದೆ. ವಾಸ್ತವವಾಗಿ, ಕೋಟ್ಯಾಂತರ ಮಂದಿ ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದಾರೆ. ದುಬಾರಿ ಬೆಲೆಯ ಹೊರತಾಗಿಯೂ ಐಫೋನ್ ಆಂಡ್ರಾಯ್ಡ್ಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ.
ಆಪಲ್ ಐಫೋನ್‌ನ ಆಯ್ದ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೂ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರಿಗೆ ಈ ಐಫೋನ್ ಮಾಡೆಲ್‌ಗಳು ನೀಡುತ್ತಿರುವ ಸ್ಪರ್ಧೆ ಎಚ್ಚರ ಮಟ್ಟಿಗಿದೆ ಎಂಬುದಕ್ಕೆ ಐಫೋನ್ ಜನಪ್ರಿಯತೆಯೇ ಸಾಕ್ಷಿ. ಅಷ್ಟಕ್ಕೂ ದುಬಾರಿಯಾಗಿದ್ದರೂ, ಕೂಡ ಜನ ಏಕೆ ಹೆಚ್ಚಾಗಿ ಐಫೋನ್ ಬಗ್ಗೆ ಒಲವು ತೋರುತ್ತಾರೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿದೆ. ನಿಮ್ಮಲ್ಲೂ ಈ ಪ್ರಶ್ನೆ ಮೂಡಿದ್ದರೆ, ಈ ಲೇಖನದಲ್ಲಿ ನಾವು ಆಂಡ್ರಾಯ್ಡ್‌ಗೆ ಜನರು ಐಫೋನ್‌ಗೆ ಹೆಚ್ಚಿನ ಆದ್ಯತೆ ನೀಡಲು ಕಾರಣವೇನು ಎಂದು ತಿಳಿಯೋಣ...
ಇದನ್ನೂ ಓದಿ- Radio Calling: ಈ ಸಾಧನದಿಂದ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು
ಬಲವಾದ ಭದ್ರತೆ:
ಆಂಡ್ರಾಯ್ಡ್‌ಗೆ ಹೊಲಿಸಿದರೆ ಐಫೋನ್‌ನಲ್ಲಿ ಬಲವಾದ ಭದ್ರತೆ ಲಭ್ಯವಿದೆ. ಡೇಟಾ ಸುರಕ್ಷತೆಯ ಬಗ್ಗೆ ಒತ್ತು ನೀಡುವವರಿಗೆ ಐಫೋನ್ ಅತ್ಯುತ್ತಮ ಆಯ್ಕೆಯಾಗಿದೆ. ಹ್ಯಾಕರ್‌ಗಳು ಅಷ್ಟು ಸುಲಭವಾಗಿ ಐಫೋನ್‌ನಿಂದ ಡೇಟಾ ಖದಿಯಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ಭರವಸೆಯನ್ನು ನೀಡುತ್ತದೆ.
ಹ್ಯಾಂಗಿಂಗ್ ಸಮಸ್ಯೆ:
ಆಂಡ್ರಾಯ್ಡ್ ಫೋನ್ಗಳಂತೆ ಐಫೋನ್‌ನಲ್ಲಿ ಹ್ಯಾಂಗಿಂಗ್ ಸಮಸ್ಯೆ ಇರುವುದಿಲ್ಲ. ಇದ್ದರೂ ಅದು ತುಂಬಾ ವಿರಳ ಎಂತಲೇ ಹೇಳಬಹುದು. ಆಂಡ್ರಾಯ್ಡ್‌ಗೆ ಹೋಲಿಸಿದರೆ ಐಫೋನ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹಾಗಾಗಿಯೇ ಇದು ಜನರನ್ನು ತನ್ನತ್ತ ಆಕರ್ಷಿಸುತ್ತದೆ.
ಇದನ್ನೂ ಓದಿ- ಸತತ ಒಂದು ತಿಂಗಳವರೆಗೆ ನಿತ್ಯ 8 ಗಂಟೆಗಳಕಾಲ AC ಚಲಾಯಿಸಿದರೆ ಕರೆಂಟ್ ಬಿಲ್ ಎಷ್ಟು ಬರುತ್ತೆ, ಗೊತ್ತ
ಡಿಸ್ಪ್ಲೇ:
ಐಫೋನ್‌ನ ಒಂದು ದೊಡ್ಡ ವೈಶಿಷ್ಟ್ಯವೆಂದರೆ ಅದರ ಅತ್ಯುತ್ತಮ ಕಾರ್ಯಕ್ಷಮತೆ ಮತ್ತದರ ಡಿಸ್ಪ್ಲೇ. ಐಫೋನ್ ಬಳಕೆದಾರರು ಗೇಮಿಂಗ್ ಅಥವಾ ಬ್ಯಾಕ್ ಟು ಬ್ಯಾಕ್ ಫೋಟೋಗಳನ್ನು ಕ್ಲಿಕ್ ಮಾಡುವಲ್ಲಿ ಯಾವುದೇ ರೀತಿಯ ಅಡೆತಡೆಗಳನ್ನು ಎದುರಿಸುವುದಿಲ್ಲ. ಐಫೋನ್‌ನ ಈ ವೈಶಿಷ್ಟ್ಯದಿಂದಾಗಿ ಇದು ಆಂಡ್ರಾಯ್ಡ್‌ಗಿಂತ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ.
ಈ ಎಲ್ಲಾ ಕಾರಣಗಳಿಂದಾಗಿ ದುಬಾರಿ ಆದರೂ ಗ್ರಾಹಕರು ಆಂಡ್ರಾಯ್ಡ್‌ಗಿಂತ ಆಪಲ್ ಐಫೋನ್‌ಗೆ ಹೆಚ್ಚು ಮಹತ್ವ ನೀಡುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.