Radio Calling: 2 ಸಾವಿರಕ್ಕಿಂತ ಕಡಿಮೆ ಬೆಲೆಯ ಈ ಸಾಧನದಿಂದ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು

Free Calling: ಎಲ್ಲಾದರೂ ದೂರದ ಊರುಗಳಿಗೆ ಹೋದಾಗ, ಅದರಲ್ಲೂ ನೆಟ್‌ವರ್ಕ್ ಇಲ್ಲದ ಪ್ರದೇಶಗಳಿಗೆ ಹೋದಾಗ ಒಂದು ಕರೆ ಮಾಡಲು ಕೂಡ ಸಾಧ್ಯವಾಗದಿದ್ದಾಗ ಜೀವನದಲ್ಲಿ ಏನನ್ನೋ ಕಳೆದುಕೊಂಡತೆ ಭಾಸವಾಗುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಒಂದು ಸಣ್ಣ ಸಾಧನದ ಸಹಾಯದಿಂದ ನೀವು ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು. ಯಾವುದೀ ಸಾಧನ ಎಂದು ತಿಳಿಯೋಣ... 

Written by - Yashaswini V | Last Updated : Jun 17, 2023, 12:34 PM IST
  • ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಂತಹ ಒಂದು ಸಾಧನ ಲಭ್ಯವಿದ್ದು ಇದರ ಸಹಾಯದಿಂದ ನೀವು ನೆಟ್‌ವರ್ಕ್ ಇಲ್ಲದಿದ್ದರೂ 5 ಕಿಲೋಮೀಟರ್‌ಗಳವರೆಗೆ ಆರಾಮವಾಗಿ ಮಾತನಾಡಬಹುದು.
  • ಈ ಸಾಧನದ ಬ್ಯಾಟರಿಯು ದೀರ್ಘಕಾಲದವರೆಗೆ ಚಾರ್ಜ್ ಆಗಿರುತ್ತದೆ.
  • ಹಾಗಾಗಿ, ಇದನ್ನು ಪದೇ ಪದೇ ರೀಚಾರ್ಜ್ ಮಾಡುವ ಅಗತವೂ ಇರುವುದಿಲ್ಲ. ಅದೇ ಮೈಜಿಕ್ ವಾಕಿ ಟಾಕಿ.
Radio Calling: 2 ಸಾವಿರಕ್ಕಿಂತ ಕಡಿಮೆ ಬೆಲೆಯ ಈ ಸಾಧನದಿಂದ ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು  title=

Radio Calling: ನೀವೂ ಕೂಡ ಟ್ರಕ್ಕಿಂಗ್ ಪ್ರಿಯರೇ! ಎಲ್ಲಾದರೂ ಟ್ರಕ್ಕಿಂಗ್ ಗಾಗಿ ಹೋಗುವಾಗ ಅದರಲ್ಲೂ ಕೆಲವು ವಾರಗಳವರೆಗೆ ಪ್ರವಾಸಕ್ಕೆ ತೆರಳುವಾಗ ಅಗತ್ಯ ಸಾಧನಗಳೊಂದಿಗೆ ಸ್ಮಾರ್ಟ್‌ಫೋನ್ ಮತ್ತು ಚಾರ್ಜರ್ ಅನ್ನು ಸಹ ಪ್ಯಾಕ್ ಮಾಡಿರುತ್ತೇವೆ. ಆದರೆ, ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಕಾರಣದಿಂದಾಗಿ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪ್ರದೇಶಗಳಲ್ಲಿ, ನೀವು ಕರೆ ಮಾಡಲು ಅಥವಾ ಸಂದೇಶವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಇದು ಎಂತಹವರಿಗೇ ಆದರೂ, ಚಿಂತೆಗೆ ಕಾರಣವಾಗುತ್ತದೆ. ಆದರೆ, ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ಒಂದೇ ಒಂದು ಸಣ್ಣ ಸಾಧನವನ್ನು ಖರೀದಿಸುವ ಮೂಲಕ ನೀವು ನೆಟ್‌ವರ್ಕ್ ಇಲ್ಲದಿದ್ದರೂ ಕಾಲ್ ಮಾಡಬಹುದು. ಯಾವುದೀ ಸಾಧನ ಎಂದು ತಿಳಿಯಿರಿ. 

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಂತಹ ಒಂದು ಸಾಧನ ಲಭ್ಯವಿದ್ದು ಇದರ ಸಹಾಯದಿಂದ ನೀವು ನೆಟ್‌ವರ್ಕ್ ಇಲ್ಲದಿದ್ದರೂ  5 ಕಿಲೋಮೀಟರ್‌ಗಳವರೆಗೆ ಆರಾಮವಾಗಿ ಮಾತನಾಡಬಹುದು. ಈ ಸಾಧನದ ಬ್ಯಾಟರಿಯು ದೀರ್ಘಕಾಲದವರೆಗೆ ಚಾರ್ಜ್ ಆಗಿರುತ್ತದೆ. ಹಾಗಾಗಿ, ಇದನ್ನು ಪದೇ ಪದೇ ರೀಚಾರ್ಜ್ ಮಾಡುವ ಅಗತವೂ ಇರುವುದಿಲ್ಲ. ಅದೇ ಮೈಜಿಕ್ ವಾಕಿ ಟಾಕಿ.

ಇದನ್ನೂ ಓದಿ- Facebook: ಭಾರತದಲ್ಲಿ ಬ್ಯಾನ್ ಆಗಲಿದೆಯಾ ಫೇಸ್ ಬುಕ್? ಹೈಕೋರ್ಟ್ ಎಚ್ಚರಿಕೆಯ ಬಳಿಕ ಮೇಟಾ ಟೆನ್ಷನ್ ನಲ್ಲಿ ಹೆಚ್ಚಳ

ಮೈಜಿಕ್ ವಾಕಿ ಟಾಕಿ ಯುಹೆಚ್‌ಎಫ್ ಎಮರ್ಜೆನ್ಸಿ ಅಲಾರ್ಮ್, ಫ್ಲ್ಯಾಶ್ ಲೈಟ್, ಲಾಂಗ್ ರೇಂಜ್ ಕಮ್ಯುನಿಕೇಷನ್ ಸಾಧನವಾಗಿದ್ದು, ಗ್ರಾಹಕರು ಇದನ್ನು ಪ್ರಸಿದ್ದ ಇ-ಕಾಮರ್ಸ್ ಸೈಟ್ ಅಮೆಜಾನ್ ನಿಂದ ಸುಲಭವಾಗಿ ಖದೀದಿಸಬಹುದು. ಇದು ವಾಸ್ತವವಾಗಿ, ವಾಲ್ ವಾಕಿ-ಟಾಕಿ ಆಗಿದ್ದು ಇದನ್ನು ನೀವು ಕೇವಲ 1845 ರೂಪಾಯಿಗಳಲ್ಲಿ ಖರೀದಿಸಬಹುದಾಗಿದೆ. 

ಇದನ್ನೂ ಓದಿ- YouTube: ಹೊಸ ಬಳಕೆದಾರರಿಗೂ ಲಕ್ಷಾಂತರ ರೂ. ಸಂಪಾದಿಸುವ ಅವಕಾಶ

ಮೈಜಿಕ್ ವಾಕಿ ಟಾಕಿಯ ವಿಶೇಷತೆಗಳು: 
* ಮೈಜಿಕ್ ವಾಕಿ ಟಾಕಿಯಲ್ಲಿ  ಎರಡು ಯುನಿಟ್ ಗಳನ್ನು ನೀಡಲಾಗಿರುತ್ತದೆ.  
* ಇದರಲ್ಲಿ ಶ್ರೇಣಿಯು ಅತ್ಯುತ್ತಮವಾಗಿದೆ. 
* ಇದರಲ್ಲಿ ನೀವು ನಿಯಂತ್ರಕ ಸ್ವಿಚ್ ಅನ್ನು ಮಾತ್ರ ಪಡೆಯುತ್ತೀರಿ. 
* ಇದು ಸಂಪೂರ್ಣವಾಗಿ ವಾಟರ್ ಪ್ರೂಫ್ ಆಗಿದ್ದು, ಸಾಹಸಕ್ಕೆ ಹೋಗುವಾಗ ನೀವು ಅವರ ಬಗ್ಗೆ ಚಿಂತಿಸಬೇಕಾಗಿಲ್ಲ. 
* ಇದರಲ್ಲಿ ನೀವು ಇಂಡಿಕೇಟರ್ ಅನ್ನು ಪಡೆಯುತ್ತೀರಿ ಜೊತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್ ಸಹ ಲಭ್ಯವಾಗಲಿದೆ. 
* ಗ್ರಾಹಕರಿಗೆ ಈ ವಾಕಿ ಟಾಕಿಯಲ್ಲಿ ಚಾರ್ಜರ್ ಕೂಡ ಲಭ್ಯವಿದೆ. 
* ಇದನ್ನು ಸುಮಾರು 2-5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಳಸಬಹುದು ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News