iPhone 13 Pro Max ಅನ್ನು ಮೀರಿಸಿದೆ OPPO Smartphone, ಅರ್ಧ ಗಂಟೆಯಲ್ಲಿ ಆಗಲಿದೆ ಫುಲ್ ಚಾರ್ಜ್
iPhone 13 Pro Max ಸಂಪೂರ್ಣವಾಗಿ ಚಾರ್ಜ್ ಮಾಡಲು 2 ಗಂಟೆ 11 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ Reno6 5G ಫುಲ್ ಚಾರ್ಜ್ ಆಗಲು ಕೇವಲ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ನವದೆಹಲಿ : OPPO Reno6 5G ಮೂಲ Reno6 ಸರಣಿಯ ಅತ್ಯುತ್ತಮ ಮಾದರಿಯಾಗಿದೆ. ಸ್ಮಾರ್ಟ್‌ಫೋನ್ ಬಿಡುಗಡೆಯಾದ 6 ತಿಂಗಳ ನಂತರ DXOMARK ಬ್ಯಾಟರಿ ಪರಿಶೀಲನೆಗೆ ಒಳಪಟ್ಟಿದೆ. ಈ ವೇಳೆ ಒಪ್ಪೋವಿನ ಈ ಸ್ಮಾರ್ಟ್ ಫೋನ್ , iPhone 13 Pro Max ಅನ್ನು ಹಿಂದಿಕ್ಕಿರುವುದು ಗಮನಾರ್ಹ ಸಂಗತಿ. ಮಧ್ಯ ಶ್ರೇಣಿಯ OPPO Reno6 5G ಪ್ರಸ್ತುತ DXOMARK ಬ್ಯಾಟರಿ ಶ್ರೇಯಾಂಕದಲ್ಲಿ 96 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದೆ. ಇದರ ನಂತರ, iPhone 13 Pro Max 89 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಈ ವಿಷಯದಲ್ಲಿ OPPO Reno6 5G ಮುಂದಿದೆ :
ವಿಮರ್ಶೆಯ ಪ್ರಕಾರ, Reno6 5G ತನ್ನ ವಿಭಾಗದಲ್ಲಿ ಅತ್ಯುತ್ತಮ ಆಟೋನಮಿ ಸ್ಕೋರ್ ಹೊಂದಿದೆ. ಇದು 50% ಸಾಮರ್ಥ್ಯಕ್ಕಿಂತ ಕಡಿಮೆ ಇರುವಾಗ ಕೇವಲ 5 ನಿಮಿಷಗಳ ಚಾರ್ಜ್‌ನೊಂದಿಗೆ 10+ ಗಂಟೆಗಳ ಆಟೋನಮಿ ಪಡೆಯುತ್ತದೆ. 65W SuperVOOC 2.0 ವೇಗದ ಚಾರ್ಜಿಂಗ್ ಪ್ರೋಟೋಕಾಲ್‌ನಿಂದಾಗಿ ಇದು ಸಾಧ್ಯವಾಗಿದೆ.
ಇದನ್ನೂ ಓದಿ : BSNL offer : ಅತಿ ಕಡಿಮೆ ಬೆಲೆಗೆ ನಿತ್ಯ 2GB ಡೇಟಾ, ಮಾತ್ರವಲ್ಲ ಸಿಗಲಿದೆ ಇನ್ನಷ್ಟು ಲಾಭ
35 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತದೆ OPPO Reno6 5G :
ಮತ್ತೊಂದೆಡೆ, iPhone 13 Pro Max ಸಂಪೂರ್ಣವಾಗಿ ಚಾರ್ಜ್ ಮಾಡಲು 2 ಗಂಟೆ 11 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ Reno6 5G ಫುಲ್ ಚಾರ್ಜ್ ಆಗಲು ಕೇವಲ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಹೊಸ ಐಫೋನ್ OPPO ಹ್ಯಾಂಡ್‌ಸೆಟ್‌ಗಿಂತ ಉತ್ತಮ ಸ್ವಾಯತ್ತ ಕಾರ್ಯಕ್ಷಮತೆಯನ್ನು ಹೊಂದಿದೆ.
ದಕ್ಷತೆಯ ವಿಚಾರದಲ್ಲಿಯೂ ಐಫೋನ್ 95 ಅಂಕಗಳನ್ನು ಗಳಿಸಿದರೆ, ಇದು ರೆನೋ 6 ರ 101 ಅಂಕಗಳನ್ನು ಪಡೆದಿದೆ. ಹೆಚ್ಚುವರಿಯಾಗಿ, OPPO Smartphone ಚಲನಶೀಲತೆಯಲ್ಲಿ ಸರಾಸರಿ ಕಾರ್ಯನಿರ್ವಹಿಸುತ್ತದೆ ಮತ್ತು ಕರೆಗಳಲ್ಲಿ ಸರಾಸರಿ ಆಟೋನಮಿ ಪರ್ಫಾಮೆನ್ಸ್ ಹೊಂದಿದೆ.
ನಿಧಾನವಾಗಿ ಚಾರ್ಜ್ ಆಗುತ್ತದೆ iPhone 13 Pro Max :
ಆದರೆ, Apple iPhone 13 Pro Max ನ ಏಕೈಕ ಪ್ರಮುಖ ನ್ಯೂನತೆಯೆಂದರೆ ನಿಧಾನ ಚಾರ್ಜಿಂಗ್. OPPO Reno6 5G ಹೆಚ್ಚು ಅಂಕಗಳನ್ನು ಪಡೆದಿದೆ ಯಾಕೆಂದರೆ ಇದು ಚಾರ್ಜಿಂಗ್ ವಿಷಯದಲ್ಲಿ ಅತ್ಯಂತ ಮುಂದಿದೆ. ಇತರ ವೈಶಿಷ್ಟ್ಯಗಳಲ್ಲಿ ಐಫೋನ್ ಗಿಂತ ಕಡಿಮೆ ಇದೆ ಎಂದಲ್ಲ, ಆದರೆ ಅಂಕಗಳನ್ನು ನೋಡಿದರೆ iPhoneಗಿಂತ ಕಡಿಮೆಯಾಗಿದೆ.
ಇದನ್ನೂ ಓದಿ : Malware: ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 23 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ