ಸ್ಲೋ ಇರುವ ಇಂಟರ್ನೆಟ್ Super speed ಆಗಬೇಕಾದರೆ ಈ ಟಿಪ್ಸ್ ಅನ್ನು ಅನುಸರಿಸಿ
How To Boost Internet Speed: ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ.ಇಂದು ನಾವು ನಿಮಗೆ ಇಂಟರ್ನೆಟ್ ಫಾಸ್ಟ್ ಹೆಚ್ಚಿಸುವ ಕೆಲವು ಸರಳ ಟಿಪ್ಸ್ ಗಳನ್ನು ನೀಡುತ್ತೇವೆ.
Smartphone Tips : ಇಂದಿನ ಯುಗದಲ್ಲಿ,ಇಂಟರ್ನೆಟ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ.ಕೆಲಸದಿಂದ ಮನರಂಜನೆಯವರೆಗೆ,ಎಲ್ಲದಕ್ಕೂ ನಮಗೆ ಇಂಟರ್ನೆಟ್ ಅಗತ್ಯವಿದೆ.ಇಂಟರ್ನೆಟ್ ಸಹಾಯದಿಂದ, ನಾವು ನಮ್ಮ ಅನೇಕ ಪ್ರಮುಖ ಕಾರ್ಯಗಳನ್ನು ಮನೆಯಲ್ಲಿ ಕುಳಿತೇ ಮಾಡಿ ಬಿಡಬಹುದು.ಆದರೆ,ಇಂಟರ್ನೆಟ್ ಸ್ಪೀಡ್ ಕಡಿಮೆಯಾದರೆ ಬಹಳಷ್ಟು ತೊಂದರೆಗೆ ಕಾರಣವಾಗುತ್ತದೆ.ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ.ಇಂದು ನಾವು ನಿಮಗೆ ಇಂಟರ್ನೆಟ್ ಫಾಸ್ಟ್ ಹೆಚ್ಚಿಸುವ ಕೆಲವು ಸರಳ ಟಿಪ್ಸ್ ಗಳನ್ನು ನೀಡುತ್ತೇವೆ.
1. ನಿಮ್ಮ ಡಿವೈಸ್ ಅನ್ನು ರೀ ಸ್ಟಾರ್ಟ್ ಮಾಡಿ :
ಕೆಲವೊಮ್ಮೆ ಸಮಸ್ಯೆ ನಿಮ್ಮ ಡಿವೈಸ್ ನಲ್ಲಿಯೂ ಇರಬಹುದು.ಆದ್ದರಿಂದ,ನೀವು ಸ್ಮಾರ್ಟ್‌ಫೋನ್,ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬಳಸುತ್ತಿದ್ದರೆ ನಿಮ್ಮ ಯಾವುದೇ ಸಾಧನವನ್ನು ರೀ ಸ್ಟಾರ್ಟ್ ಮಾಡಿ.ಹೀಗೆ ಮಾಡುವುದರಿಂದ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು.
ಇದನ್ನೂ ಓದಿ : Wifi Inverter: ಈಗ ಕರೆಂಟ್ ಇಲ್ಲದಿದ್ರೂ ಇಂಟರ್‌ನೆಟ್ ಬಳಸಬಹುದು, ಹೇಗ್ ಗೊತ್ತಾ?
2. ವೈ-ಫೈ ಸಿಗ್ನಲ್ ಪರಿಶೀಲಿಸಿ :
ನೀವು Wi-Fi ಬಳಸುತ್ತಿದ್ದರೆ,ರೂಟರ್‌ನಿಂದ ನಿಮ್ಮ ಡಿವೈಸ್ ಅಂತರವನ್ನು ಕಡಿಮೆ ಮಾಡಿ.ಗೋಡೆಗಳು ಮತ್ತು ಇತರ ವಸ್ತುಗಳು ವೈ-ಫೈ ಸಿಗ್ನಲ್ ಮೇಲೆ ಪರಿಣಾಮ ಬೀರಬಹುದು.
3. ಇತರ ಡಿವೈಸ್ ಗಳನ್ನು ಆಫ್ ಮಾಡಿ :
ನಿಮ್ಮ ಮನೆಯಲ್ಲಿ ವೈ-ಫೈ ಮೂಲಕ ಬಹು ಸಾಧನಗಳಲ್ಲಿ ಇಂಟರ್ನೆಟ್ ಬಳಸುತ್ತಿದ್ದರೆ, ಅವುಗಳಲ್ಲಿ ಕೆಲವನ್ನು ಸ್ವಿಚ್ ಆಫ್ ಮಾಡುವುದರಿಂದ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು.
4. ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ :
ಕೆಲವೊಮ್ಮೆ ಹಳೆಯ ಸಾಫ್ಟ್‌ವೇರ್ ಇಂಟರ್ನೆಟ್ ಸ್ಪೀಡ್ ಅನ್ನು ಕಡಿಮೆಯಾಗಲು ಕಾರಣವಾಗಬಹುದು.ಆದ್ದರಿಂದ,ನಿಮ್ಮ ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮತ್ತು ಇತರ ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಿ. ಇದರಿಂದ ಇಂಟರ್ನೆಟ್ ಸ್ಪೀಡ್ ಉತ್ತಮವಾಗಿರುತ್ತದೆ.
ಇದನ್ನೂ ಓದಿ : Whatsapp: ಒಂದೇ ತಿಂಗಳಲ್ಲಿ 71 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್
5. ವೈರಸ್‌ಗಳು ಮತ್ತು ಮಾಲ್‌ವೇರ್‌ಗಳನ್ನು ಪರಿಶೀಲಿಸಿ :
ಕೆಲವೊಮ್ಮೆ ವೈರಸ್‌ಗಳು ಮತ್ತು ಮಾಲ್‌ವೇರ್‌ಗಳು ಇಂಟರ್ನೆಟ್ ಸ್ಪೀಡ್ ಅನ್ನು ಕಡಿಮೆ ಮಾಡಬಹುದು.ಆದ್ದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಆಂಟಿ-ವೈರಸ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಫೋನ್ ಅನ್ನು ಸ್ಕ್ಯಾನ್ ಮಾಡಿ. ಇದು ಇಂಟರ್ನೆಟ್ ಸ್ಪೀಡ್ ಹೆಚ್ಚಿಸಲು ಸಹಾಯ ಮಾಡುತ್ತದೆ.
6. ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ :
ನೀವು ಮೇಲೆ ತಿಳಿಸಲಾದ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದ ನಂತರವೂ ಇಂಟರ್ನೆಟ್ ಸ್ಪೀಡ್ ಸರಿಯಾಗದಿದ್ದರೆ ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ. ಕೆಲವು ತಾಂತ್ರಿಕ ದೋಷದಿಂದ ಇಂಟರ್ನೆಟ್ ವೇಗ ಕಡಿಮೆಯಾಗಿರುವ ಸಾಧ್ಯತೆಯೂ ಇರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.