Mini UPS For WiFi: ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಸಮಯದಲ್ಲಿ ಯಾವುದೇ ಅಡೆತಡೆ ಇಲ್ಲದೆ ವೈ-ಫೈ ಇಂಟರ್‌ನೆಟ್ ಸೇವೆಯನ್ನು ಆನಂದಿಸಲು ಸಹಾಯಕವಾಗುವಂತೆ ಪ್ರಸಿದ್ಧ ಗ್ಯಾಜೆಟ್ ಬ್ರ್ಯಾಂಡ್ ಪೊಟ್ರಾನಿಕ್ಸ್ ಭಾರತದಲ್ಲಿ ಪವರ್ ಪ್ಲಸ್ ಮಿನಿ ಯುಪಿಎಸ್ ಅನ್ನು ಪರಿಚಯಿಸಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ವಿಶೇಷವಾಗಿ ವೈ-ಫೈ ರೂಟರ್‌ಗಳಿಗಾಗಿ ಈ ಮಿನಿ ಯುಪಿಎಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಮಿನಿ ಯುಪಿಎಸ್ ವಿಶೇಷತೆ:
ಪವರ್ ಪ್ಲಸ್ ಮಿನಿ ಯುಪಿಎಸ್ ವೈಫೈ (WiFi) ರೂಟರ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಸಾಧನ. ಇದು ಕಾಂಪ್ಯಾಕ್ಟ್ ಮತ್ತು ವಿಶ್ವಾಸಾರ್ಹ ಮಿನಿ ಯುಪಿಎಸ್ ಆಗಿದೆ. ಲೋಡ್ ಶೆಡ್ಡಿಂಗ್ ಮತ್ತು ವೋಲ್ಟೇಜ್ ಏರಿಳಿತಗಳ ನಿರಂತರ ಸವಾಲುಗಳನ್ನು ಪರಿಹರಿಸಲು, ಪವರ್ ಪ್ಲಸ್ ವಿದ್ಯುತ್ ಅಡಚಣೆಯ ಸಮಯದಲ್ಲಿ ವೈ-ಫೈ ರೂಟರ್‌ಗೆ ನಿರಂತರ ವಿದ್ಯುತ್ ಅನ್ನು ಒದಗಿಸುವ ಮೂಲಕ ಯಾವುದೇ ಅಡೆತಡೆ ಇಲ್ಲದೆ ಇಂಟರ್‌ನೆಟ್ ಸಂಪರ್ಕ ಕಾರ್ಯಾಚರಣೆಗೆ ಸಹಕಾರಿ ಆಗಿದೆ.
ಇದನ್ನೂ ಓದಿ- EV Fire Safety Tips: ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಇವೇ ಪ್ರಮುಖ ಕಾರಣ!
ಪೋರ್ಟ್ರಾನಿಕ್ಸ್ ಪವರ್ ಪ್ಲಸ್‌ನ ಮಿನಿ ಯುಪಿಎಸ್ ಕಾಂಪ್ಯಾಕ್ಟ್ ಫ್ರೇಮ್‌ನ ಒಳಗೆ 2000mAh ಬ್ಯಾಟರಿ ಇದೆ. ಯಾವುದೇ ಜಾಗದಲ್ಲಿ ಇದನ್ನು ಹೊಂದಿಸುವುದು ಸುಲಭವಾಗಿದ್ದು, ಇಡಕಾಗಿ ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
ಪವರ್ ಪ್ಲಸ್‌ನ ಮಿನಿ ಯುಪಿಎಸ್ (Power Plus Mini UPS) ಅನ್ನು 12-ವೋಲ್ಟ್ (DC) ವೈ-ಫೈ ರೂಟರ್ ಮತ್ತು ಮುಖ್ಯ ಪವರ್ ಔಟ್‌ಲೆಟ್ ನಡುವೆ ಸಂಪರ್ಕಿಸುವ ಅಗತ್ಯವಿದೆ. ಪವರ್ ಪ್ಲಸ್ ಎರಡು ಸ್ಟ್ಯಾಂಡರ್ಡ್ ಕನೆಕ್ಟರ್‌ಗಳಲ್ಲಿ ಒಂದಾದ - 2.1mm ಮತ್ತು 5.5mm DC ಪಿನ್‌ಗಳ ಮೂಲಕ ಎಲ್ಲಾ ಸಮಯದಲ್ಲೂ ವೈ-ಫೈ ರೂಟರ್‌ಗೆ ವಿದ್ಯುತ್ ಪೂರೈಸುತ್ತದೆ. ತಾತ್ಕಾಲಿಕ ವಿದ್ಯುತ್ ಅಡಚಣೆಯ ಸಂದರ್ಭದಲ್ಲಿ ರೂಟರ್, ಓವರ್‌ಚಾರ್ಜ್ ಮತ್ತು ಕಡಿಮೆ ವೋಲ್ಟೇಜ್‌ನಿಂದ ರಕ್ಷಿಸಲು ಸುಲಭವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ- ಸ್ವಲ್ಪ ಬಳಸಿದ ಕೂಡಲೇ ನಿಮ್ಮ ಫೋನ್ ಬಿಸಿಯಾಗುತ್ತದೆಯೇ? ಹಾಗಿದ್ದರೆ ಈ ಟ್ರಿಕ್ ಟ್ರೈ ಮಾಡಿ
ಈ ಮಿನಿ ಯುಪಿಎಸ್ ಎಷ್ಟು ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ?
ಪವರ್ ಕಟ್ ಆದ ಕೂಡಲೇ ಪವರ್ ಪ್ಲಸ್ ಮಿನಿ ಯುಪಿಎಸ್ ಬ್ಯಾಟರಿ ಆನ್ ಆಗುತ್ತದೆ. ಇದರ ಸಹಾಯದಿಂದ ಗರಿಷ್ಠ ನಾಲ್ಕು ಗಂಟೆಗಳವರೆಗೆ ವೈ-ಫೈ ಕಾರ್ಯನಿರ್ವಹಿಸುತ್ತದೆ.
ಪವರ್ ಪ್ಲಸ್ ಮಿನಿ ಯುಪಿಎಸ್ ಲಭ್ಯತೆ:
Portronics Power Plus ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ Portronics.com ನಿಂದ ಖರೀದಿಸಬಹುದು. ಇದರ ಬೆಲೆ 1,249ರೂ. ಆಗಿದ್ದು, ಇದು ಒಂದು ವರ್ಷದ ವಾರಂತಿಯೊಂದಿಗೆ ಲಭ್ಯವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.