ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಫೋನ್ ರೆಕಾರ್ಡ್ ಆಗುತ್ತಿದೆಯೇ ? ಸುಲಭವಾಗಿ ಪತ್ತೆ ಹಚ್ಚಿ
ಅನೇಕ ಬಾರಿ ಎದುರಿಗಿರುವ ವ್ಯಕ್ತಿ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾನೆ ಎನ್ನುವುದು ನಿಮಗೆ ಗೊತ್ತಿರುವುದೇ ಇಲ್ಲ. ಅಂದರೆ ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಕಾಲ್ ರೆಕಾರ್ಡ್ ಮಾಡಲಾಗುತ್ತದೆ.
ಬೆಂಗಳೂರು : ಕಾಲ್ ರೆಕಾರ್ಡಿಂಗ್ ಅನ್ನುವುದು ಕಾನೂನುಬಾಹಿರ ಚಟುವಟಿಕೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿಗೆ ಬ್ರೇಕ್ ಹಾಕಿದೆ. ಅಂದರೆ, ಈಗ ಯಾರೂ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿ ಕಾಲ್ ರೆಕಾರ್ಡಿಂಗ್ ಮಾಡುವುದು ಸಾಧ್ಯವಾಗುವುದಿಲ್ಲ. ಅನೇಕ ಆಂಡ್ರಾಯ್ಡ್ ಫೋನ್‌ಗಳು ಇನ್ ಬಿಲ್ಟ್ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತವೆ. ಇದರಲ್ಲಿ ಎದುರಿಗಿದ್ದವರು ಫೋನ್ ರಿಸೀವ್ ಮಾಡಿದ ತಕ್ಷಣ, ನಿಮ್ಮ ಕಾಲ್ ರೆಕಾರ್ಡ್ ಆಗುತ್ತಿದೆ ಎಂಬ ಸಂದೇಶವನ್ನು ನೀಡಲಾಗುತ್ತದೆ. ಆದರೆ ಅನೇಕ ಬಾರಿ ಎದುರಿಗಿರುವ ವ್ಯಕ್ತಿ ನಿಮ್ಮ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾನೆ ಎನ್ನುವುದು ನಿಮಗೆ ಗೊತ್ತಿರುವುದೇ ಇಲ್ಲ. ಅಂದರೆ ನಿಮಗೆ ಗೊತ್ತಿಲ್ಲದೆಯೇ ನಿಮ್ಮ ಕಾಲ್ ರೆಕಾರ್ಡ್ ಮಾಡಲಾಗುತ್ತದೆ. ಹೀಗಾದಾಗ ಇದನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು. ನಿಮ್ಮ ಕರೆಗಳನ್ನು ಯಾರು ರೆಕಾರ್ಡ್ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಬಹುದು.
ಹೊಸ ಫೋನ್‌ಗಳಲ್ಲಿ ಅನೌನ್ಸ್ ಮೆಂಟ್ ಬರುತ್ತದೆ :
ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಬಹಳ ಸುಲಭವಾಗಿ ಕಂಡು ಹಿಡಿಯಬಹುದು. ಇದನ್ನು ಕಂಡು ಹಿಡಿಯುವ ಪ್ರಕ್ರಿಯೆ ಅಷ್ಟು ಕಷ್ಟವೇನಲ್ಲ. ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ, ಕರೆ ರೆಕಾರ್ಡ್ ಆಗುತ್ತಿದೆ ಎನ್ನುವ ಅನೌನ್ಸ್ ಮೆಂಟ್ ಬರುತ್ತದೆ. ಆದರೆ, ಹಳೆಯ ಫೋನ್‌ಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಆದರೂ ಕೂಡಾ ಇದನ್ನು ಬಹಳ ಸುಲಭವಾಗಿ ಕಂಡು ಹಿಡಿಯಬಹುದು. ಈ ಸಂದರ್ಭದಲ್ಲಿ, ಅದನ್ನು ಇನ್ನೊಂದು ರೀತಿಯಲ್ಲಿ ಕಂಡುಹಿಡಿಯಬಹುದು.
ಇದನ್ನೂ ಓದಿ : ಈ ದಿನ ಆರಂಭವಾಗಲಿದೆ BSNL 4G ಸೇವೆ.! ಕಂಪನಿ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ
ಕೇಳಿ ಬರುತ್ತದೆ ಬೀಪ್ ಧ್ವನಿ :
ನೀವು ಫೋನ್ ನಲ್ಲಿ ಮಾತನಾಡುತ್ತಿರುವಾಗ ಬಹಳ ಎಚ್ಚರಿಕೆಯಿಂದ ನೀವು ಫೋನ್ ನಲ್ಲಿ ಮತಾನಾಡುತ್ತಿರುವಾಗ ಮಧ್ಯೆ ಮಧ್ಯೆ ಬೀಪ್ ಸೌಂಡ್ ಕೇಳಿ ಬಂದರೆ ನಿಮ್ಮ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದರ್ಥ. ನೀವು ಫೋನ್ ರಿಸೀವ್ ಮಾಡುವಾಗ ಲಾಂಗ್ ಬೀಪ್ ಸೌಂಡ್ ಬಂದರೆ ನಿಮಗೆ ಫೋನ್ ಮಾಡಿದವರು ಆ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎನ್ನುವುದು ನೆನಪಿರಲಿ. ಹೀಗಾಗಿ ಫೋನ್ ರಿಸೀವ್ ಮಾಡುವಾಗ ಅಥವಾ ಬೇರೆಯವರಿಗೆ ಫೋನ್ ಮಾಡಿದ ವೇಳೆ ಪೋನ್ ನಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಇದನ್ನೂ ಓದಿ : ಸ್ಮಾರ್ಟ್‌ಫೋನ್ ರಿಸೆಟ್ ಮಾಡದೆಯೇ ಸ್ಟೋರೇಜ್ ಕ್ಲೀನ್ ಮಾಡುವ ಸಿಂಪಲ್ ಟ್ರಿಕ್ ಇಲ್ಲಿದೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.