Redmi Note 9 Pro Max ಫೋನ್ ಮೇಲೆ ಸಿಗಲಿದೆ ಭಾರೀ ಡಿಸ್ಕೌಂಟ್ ..!
ಈ ಫೋನ್ ನ 6 GB RAM ಮತ್ತು 64 GB ಸ್ಟೋರೇಜ್ ರೂಪಾಂತರಗಳಲ್ಲಿ 4,000 ರೂ.ಗಳ ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ. ಇದರ ಎಂಆರ್‌ಪಿ 18,999 ರೂ. ಆಗಿದ್ದು, ಸೇಲ್ ನಲ್ಲಿ 14,999 ರೂಗಳಿಗೆ ಖರೀದಿಸಬಹುದು.
ನವದೆಹಲಿ : ಅಮೆಜಾನ್‌ನಲ್ಲಿ ಸೇಲ್ ನಡೆಯುತ್ತಿದ್ದು, ಅನೇಕ ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ರಿಯಾಯಿತಿ ಸಿಗುತ್ತಿದೆ. ಈ ಸೇಲ್ ನಲ್ಲಿ ಫ್ಲಾಟ್ ರಿಯಾಯಿತಿಯಿಂದ ಹಿಡಿದು ಎಕ್ಸ್ ಚೇಂಜ್ ಆಫರ್ ಕೂಡಾ ಸೇರಿವೆ. ಅಗ್ಗದ ಮತ್ತು ಒಳ್ಳೆಯ ಸ್ಮಾರ್ಟ್ ಫೋನ್ ಖರೀದಿಯ ಬಗ್ಗೆ ಯೋಚಿಸುತ್ತಿದ್ದರೆ, Xiaomiಯ Redmi Note 9 Pro Max ಫೋನ್ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ಈ ಫೋನ್ ಮೇಲೆ 4,000 ರೂಪಾಯಿಗಳ ರಿಯಾಯಿತಿ ಸಿಗಲಿದೆ.
ಈ ಫೋನ್ ನ 6 GB RAM ಮತ್ತು 64 GB ಸ್ಟೋರೇಜ್ ರೂಪಾಂತರಗಳಲ್ಲಿ 4,000 ರೂ.ಗಳ ಫ್ಲಾಟ್ ರಿಯಾಯಿತಿ ನೀಡಲಾಗುತ್ತಿದೆ. ಇದರ ಎಂಆರ್‌ಪಿ 18,999 ರೂ. ಆಗಿದ್ದು, ಸೇಲ್ ನಲ್ಲಿ 14,999 ರೂಗಳಿಗೆ ಖರೀದಿಸಬಹುದು. ಇದರೊಂದಿಗೆ ಎಕ್ಸ್ ಚೇಂಜ್ ಆಫರ್ ನಲ್ಲಿ ಈ ಪೋನ್ 12,600 ರೂ.ಗಳಿಗೆ ಸಿಗಲಿದೆ.
ಇದನ್ನೂ ಓದಿ : ಯೂಟ್ಯೂಬ್ ನಿಂದ ಸಿಗುತ್ತೆ ಜೇಬು ತುಂಬಾ ದುಡ್ಡು..! ಮಾಡಬೇಕಾದ್ದು ಇಷ್ಟೇ.
ಇತರ ಕೊಡುಗೆಗಳು :
ಇನ್ನು ನಿಮ್ಮಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಕಾರ್ಡ್ ಇದ್ದರೆ ಇನ್ನಷ್ಟು ಲಾಭವಾಗಲಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ (Credit Card) ಇಎಂಐ ಮತ್ತು ಡೆಬಿಟ್ ಕಾರ್ಡ್ ಇಎಂಐ (EMI) ಮೇಲೆ 1250 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. ಇಎಂಐ ಇಲ್ಲದೆ ಎಚ್‌ಎಫ್‌ಡಿಸಿ ಕಾರ್ಡ್ ಮೂಲಕ ಫೋನ್ ಖರೀಸದಿಸುವುದಾದರೆ, 1000 ರೂಪಾಯಿ ರಿಯಾಯಿತಿ ಸಿಗಲಿದೆ.
Redmi Note 9 Pro Max ವೈಶಿಷ್ಟ್ಯ :
ಈ ಫೋನ್ octa-core Qualcomm Snapdragon 720 ಪ್ರೊಸೆಸರ್ ಹೊಂದಿದ್ದು, ಇದು 66GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ ಫೋನ್ ಸ್ಟೋರೇಜ್ ಅನ್ನು 512 ಜಿಬಿವರೆಗೆ ವಿಸ್ತರಿಸಬಹುದು. Redmi Note 9 Pro Max ನಲ್ಲಿ 5020mAh ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿ 33W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಫೋನ್ ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿದೆ. ಸ್ಮಾರ್ಟ್ಫೋನ್ 4G VoLTE , ಬ್ಲೂಟೂತ್ ವಿ 5.0, ಐಆರ್ ಬ್ಲಾಸ್ಟರ್, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಹೋಲ್ ಅನ್ನು ಹೊಂದಿದೆ.
ಇದನ್ನೂ ಓದಿ : Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ
ಕ್ಯಾಮೆರಾ :
ಈ ಸ್ಮಾರ್ಟ್ ಫೋನ್ (Smartphone) ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರ ಮುಖ್ಯ ಲೆನ್ಸ್ 64 MPಯದ್ದಾಗಿದೆ. ಇದಲ್ಲದೆ ಫೋನ್‌ನಲ್ಲಿ 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 5 ಎಂಪಿ ಮ್ಯಾಕ್ರೋ ಲೆನ್ಸ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಲಭ್ಯವಿದೆ. ಈ ಡಿವೈಸ್ 32 ಎಂಪಿ ಫ್ರಂಟ್ ಕ್ಯಾಮರಾ (Camera) ವನ್ನು ಒಳಗೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.