Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ

ಕರೋನಾ  ಸೋಂಕಿತರು ಮತ್ತು ಪ್ಲಾಸ್ಮಾ ಡೋನರ್ಸ್ತಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿಗಳ ಮೂಲಕ ಸಂಜೀವನಿ ಆಪ್ ನಲ್ಲಿ  ನೋಂದಾಯಿಸಿಕೊಳ್ಳಬೇಕಾಗುತ್ತದೆ. 

Written by - Ranjitha R K | Last Updated : May 11, 2021, 01:52 PM IST
  • ಕೋವಿಡ್ ರೋಗಿಗಳ ನೆರವಿಗೆ ಬಂದಿದೆ ಹೊಸ ಆಪ್
  • ಸ್ನಾಪ್ ಡೀಲ್ ನ ಸಂಜೀವನಿ ಆಪ್ ಮೂಲಕ ಪ್ಲಾಸ್ಮಾ ದಾನಿಗಳ ವಿವರ ಪಡೆದುಕೊಳ್ಳಬಹುದು
  • ಸಂಜೀವನಿ ಪ್ಲಾಟ್‌ಫಾರ್ಮ್‌ನಲ್ಲಿ ನೊಂದಾಯಿಸಿಕೊಳ್ಳಲು ಹೀಗೆ ಮಾಡಿ
Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ title=
ಕೋವಿಡ್ ರೋಗಿಗಳ ನೆರವಿಗೆ ಬಂದಿದೆ ಹೊಸ ಆಪ್ (file photo)

ನವದೆಹಲಿ : ದೇಶದಲ್ಲಿ ಕರೋನಾದಿಂದ (Coronavirus) ಸಂಭವಿಸಿರುವ ಹಾನಿ ಅಷ್ಟಿಷ್ಟಲ್ಲ. ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ದೇಶಕ್ಕೆ ಸಹಾಯ ಹಸ್ತ ಚಾಚುತ್ತಿದೆ. ಈ ಮಧ್ಯೆ ,  ಇ-ಕಾಮರ್ಸ್ ಕಂಪನಿ ಸ್ನ್ಯಾಪ್‌ಡೀಲ್ (Snapdeal) ಕೋವಿಡ್ -19 ರೋಗಿಗಳ ನೆರವಿಗೆ ಮುಂದಾಗಿದೆ. ಸ್ನ್ಯಾಪ್‌ಡೀಲ್ ಸಂಜೀವನಿ (Sanjeevani) ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ. ಈ ವೇದಿಕೆಯ ಮೂಲಕ, ಕೋವಿಡ್ (COVID-19) ಚಿಕಿತ್ಸೆಗೆ ಪ್ಲಾಸ್ಮಾ ಅಗತ್ಯವಿರುವವರಿಗೆ ದಾನಿಗಳ ಸಂಪರ್ಕವನ್ನು ಕಲ್ಪಿಸಲಾಗುವುದು.   ಸಣ್ಣ ಸಣ್ಣ ನಗರ, ಪಟ್ಟಣಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ಹೊಂದಿರುವ ಸ್ನ್ಯಾಪ್‌ಡೀಲ್,  ಪ್ಲಾಸ್ಮಾ ದಾನಿಗಳ ಹುಡುಕಾಟದಲ್ಲಿ ನೆರವಾಗುತ್ತದೆ. ಮೊಬೈಲ್ ಆ್ಯಪ್ ಅಥವಾ ವೆಬ್‌ಸೈಟ್ ಸಂಜಿವನಿಯನ್ನು ಆಕ್ಸೆಸ್ ಮಾಡಿಕೊಳ್ಳಬಹುದು. 

 ಹೇಗೆ ಕಾರ್ಯನಿರ್ವಹಿಸಲಿದೆ Sanjeevani App : 
ಕರೋನಾ (COVID-19) ಸೋಂಕಿತರು ಮತ್ತು ಪ್ಲಾಸ್ಮಾ ಡೋನರ್ಸ್ (Plasma Doners) ತಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿಗಳ ಮೂಲಕ ಸಂಜೀವನಿ ಆಪ್ ನಲ್ಲಿ (Sanjeevani App) ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋದಣಿ ವೇಳೆ ರಕ್ತ ಗುಂಪು, ವಯಸ್ಸು, ಸ್ಥಳ ಮುಂತಾದ ಪ್ರಮುಖ ಮಾಹಿತಿಯನ್ನು ನೀಡಬೇಕಾಗುತ್ತದೆ.   ನೋಂದಣಿ ಪೂರ್ಣಗೊಂಡ ನಂತರ, ಸ್ನ್ಯಾಪ್‌ಡೀಲ್  (Snapdeal), ಒಂದು  ಅಲ್ಗಾರಿದಮ್ ಮೂಲಕ ದಾನಿಗಳು ಮತ್ತು ರೋಗಿಗಳ ನಡುವೆ ಮ್ಯಾಚ್ ಮಾಡಿಸುತ್ತದೆ. ರೋಗಿ ಮ,ತ್ತು ದಾನಿಯ ನಡುವೆ ಹೊಂದಾಣಿಕೆ ಕಂಡು ಬಂದ ಕೂಡಲೇ,  ಪ್ಲಾಸ್ಮಾವನ್ನು ದಾನ ಮಾಡಲು ಅಥವಾ ಸ್ವೀಕರಿಸಲು ಹತ್ತಿರದ ಪ್ಲಾಸ್ಮಾ ಬ್ಯಾಂಕ್‌ಗೆ ಹೋಗಬೇಕು. 

ಇದನ್ನೂ ಓದಿ : ತಕ್ಷಣ ನಿಮ್ಮ WhatsApp setting ಬದಲಾಯಿಸಿಕೊಳ್ಳಿ; ಇಲ್ಲವಾದರೆ Hack ಆಗುವ ಅಪಾಯ ತಪ್ಪಿದ್ದಲ್ಲ

ಸಂಜೀವನಿ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿ ನೋಂದಾಯಿಸಿಕೊಳ್ಳಿ : 

-ಸಂಜೀವನಿ ವೇದಿಕೆಯಲ್ಲಿ ನೋಂದಣಿಗಾಗಿ, ಕರೋನಾ ರೋಗಿಗಳು (Corona Patients) ಮತ್ತು ಕರೋನಾ ಸೋಂಕಿತ ರೋಗಿಗಳು ಅಧಿಕೃತ ವೆಬ್‌ಸೈಟ್ https://m.snapdeal.com/donate/covidhelp ಗೆ ಭೇಟಿ ನೀಡಬೇಕಾಗುತ್ತದೆ.
- ರಕ್ತದ ಗುಂಪು, ರೋಗಿಗಳ ಚೇತರಿಕೆ ದಿನಾಂಕ, ಸ್ಥಳ, ವಯಸ್ಸು, ವೈದ್ಯರ ಪ್ರಿಸ್ಕ್ರಿಪ್ಷನ್ ಮುಂತಾದ ಪ್ರಮುಖ ಮಾಹಿತಿಯನ್ನು ವೆಬ್‌ಪುಟದಲ್ಲಿ ಭರ್ತಿ ಮಾಡಬೇಕು
- ರಕ್ತ ಗುಂಪು ಮತ್ತು ಸ್ಥಳವನ್ನು ಆಧರಿಸಿ, ಸ್ನ್ಯಾಪ್‌ಡೀಲ್‌ನ ಅಲ್ಗಾರಿದಮ್ ದಾನಿಗಳು ಮತ್ತು ರೋಗಿಗಳ ನಡುವೆ ಹೊಂದಾಣಿಕೆ ಮಾಡುತ್ತದೆ. 
- ದಾನಿಗಳು ಮತ್ತು ರೋಗಿಯ ನಡುವೆ ಹೊಂದಾಣಿಕೆ ಇದ್ದರೆ, ದಾನಿಯ ಒಪ್ಪಿಗೆ ಪಡೆದು ವಿವರಗಳನ್ನು ರೋಗಿಯ ಸಂಬಂಧಿಕರಿಗೆ ನೀಡಲಾಗುತ್ತದೆ. 

ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ,  ಪ್ಲಾಸ್ಮಾ ದಾನಿಗಳು ಮತ್ತು ಪ್ಲಾಸ್ಮಾ ಸ್ವೀಕರಿಸುವವರು ಸಮೀಪದ ಪ್ಲಾಸ್ಮಾ ಬ್ಯಾಂಕ್ (Plasma Bank) ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ಸಮಯಕ್ಕೆ ಸರಿಯಾಗಿ ಪ್ಲಾಸ್ಮಾ ಪಡೆಯುವುದು ಅಥವಾ ದಾನ ಮಾಡುವುದು ಕಷ್ಟವಾಗಬಹುದು. 

ಇದನ್ನೂ ಓದಿ : Oppo ಸ್ಮಾರ್ಟ್‌ಫೋನ್‌ಗಳಿಗೆ 80% ವರೆಗೆ ರಿಯಾಯಿತಿ, 1 ರೂಪಾಯಿ ಡೀಲ್ ಕೂಡ ವಿಶೇಷ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News