Reduce Electricity Bill Tips: ಈ ಟಿಪ್ಸ್ ಬಳಸಿದರೆ ದಿನವಿಡೀ ಎಸಿ ಬಳಸಿದರೂ ಏರುವುದಿಲ್ಲ ಕರೆಂಟ್ ಬಿಲ್ !
ಬೇಸಿಗೆಯಲ್ಲಿ ರಾತ್ರಿಯಿಡಿ ಎಸಿ ಹಾಕಿ ಮಲಗುವ ಅಭ್ಯಾಸವಿರುತ್ತದೆ. ಹೀಗಾದಾಗ ವಿದ್ಯುತ್ ಬಿಲ್ ಕೂಡಾ ಜಾಸ್ತಿ ಬರುತ್ತದೆ. ಕೆಲವೊಂದು ಟಿಪ್ಸ್ ಬಳಸುವ ಮೂಲಕ ದಿನವಿಡೀ ಎಸಿ ಹಾಕಿದರೂ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
ಬೆಂಗಳೂರು : ಪ್ರಸ್ತುತ, ಭಾರತದ ಅನೇಕ ಭಾಗಗಳಲ್ಲಿ ಬಿಸಿಲಿನ ಶಾಖ ತಡೆಯಲಾಗುತ್ತಿಲ್ಲ. ಮನೆಗಳಲ್ಲಿ ಎಸಿ, ಕೂಲರ್ ಬಳಕೆ ಕೂಡಾ ಹೆಚ್ಚುತ್ತಿದೆ. ಏರ್ ಕೂಲರ್‌ಗಳಿಗೆ ಹೋಲಿಸಿದರೆ ಎಸಿ ಬಳಕೆ ದುಬಾರಿಯಾಗಿರುತ್ತದೆ. ಏಕೆಂದರೆ ಇದು ಹೆಚ್ಚು ವಿದ್ಯುತ್ ಅನ್ನು ಬಳಸುತ್ತದೆ. ಹೆಚ್ಚಿನವರು ರಾತ್ರಿಯಿಡೀ ಎಸಿ ಹಾಕಿಕೊಂಡು ಮಲಗುತ್ತಾರೆ. ಇದರಿಂದ ವಿದ್ಯುತ್ ಬಿಲ್ ಏರುತ್ತಾ ಹೋಗುತ್ತದೆ. ಆದರೆ ಕೆಲವೊಂದು ಟಿಪ್ಸ್ ಬಳಸುವ ಮೂಲಕ ದಿನವಿಡೀ ಎಸಿ ಹಾಕಿದರೂ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು.
1. ACಯನ್ನು ಎಂದಿಗೂ ಕಡಿಮೆ ತಾಪಮಾನದಲ್ಲಿ ಹೊಂದಿಸಬಾರದು. ಎಸಿಯನ್ನು 16 ಅಥವಾ 18 ಡಿಗ್ರಿಯಲ್ಲಿ ಇಡುವುದರಿಂದ ಉತ್ತಮ ಕೂಲಿಂಗ್ ಸಿಗುತ್ತದೆ. ಆದರೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಪ್ರಕಾರ, ಮಾನವ ದೇಹಕ್ಕೆ ಸುತ್ ಆಗುವ ಕನಿಷ್ಠ ತಾಪಮಾನ 24 ಡಿಗ್ರಿ. ಆದ್ದರಿಂದ ತಾಪಮಾನವನ್ನು 24 ನಲ್ಲಿ ಇರಿಸಿ. ಇದರಿಂದ ಸಾಕಷ್ಟು ವಿದ್ಯುತ್ ಕೂಡಾ ಉಳಿಸಬಹುದು. ಇನ್ನು AC ತಾಪಮಾನವನ್ನು ಜಾಸ್ತಿಗೆ ಸೆಟ್ ಮಾಡುವುದರಿಂದ ಪಾರ್ಟಿ ಡಿಗ್ರಿ ಮೇಲೆ 6 ಪ್ರತಿಶತ ವಿದ್ಯುತ್ ಉಳಿಸಬಹುದು ಎನ್ನುವುದನ್ನು ಅಧ್ಯಯನ ಸಾಬೀತುಪಡಿಸಿದೆ.
ಇದನ್ನೂ ಓದಿ : Twitter ಮೇಲೆ ಉಚಿತವಾಗಿ ಸಿಗುತ್ತಿದೆ ಬ್ಲ್ಯೂ ಟಿಕ್, ಮೃತ ವ್ಯಕ್ತಿಗಳ ಹೆಸರಿನ ಮುಂದೆಯೂ ಬಂತು ಚೆಕ್ ಮಾರ್ಕ್
2. ಬೇಸಿಗೆಗೆ ಮುನ್ನ ಚಳಿಗಾಲದಲ್ಲಿ ಎಸಿಯನ್ನು ಬಳಸದೇ ಬಿಟ್ಟು ನಂತರ ಸರ್ವಿಸ್ ಮಾಡದೇ ಬಳಸಿದರೆ ವಿದ್ಯುತ್ ಬಿಲ್ ಹೆಚ್ಚಾಗಬಹುದು. ಎಸಿಯನ್ನು ದೀರ್ಘಕಾಲ ಬಳಸದೆ ಬಿಟ್ಟಿರುವುದರಿಂದ ಧೂಳು ಮತ್ತು ಕಣಗಳಿಂದ ಮುಚ್ಚಿಹೋಗುತ್ತದೆ. ಈ ಹಿನ್ನೆಲೆಯಲ್ಲಿ ಕೂಲಿಂಗ್ ಮೆಷಿನ್ ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ.
3. ಎಸಿ ಆನ್ ಮಾಡುವ ಮೊದಲು ಕೋಣೆಯ ಬಾಗಿಲು ಮತ್ತು ಕಿಟಕಿಯನ್ನು ಸರಿಯಾಗಿ ಮುಚ್ಚಿ. ಇದರಿಂದ ಬಿಸಿ ಗಾಳಿ ಕೋಣೆಯೊಳಗೆ ಪ್ರವೇಶಿಸುವುದಿಲ್ಲ. ಕೋಣೆಯ ತಣ್ಣನೆಯ ಗಾಳಿ ಹೊರ ಹೋಗುವುದಿಲ್ಲ. ಇಲ್ಲದಿದ್ದರೆ ಎಸಿ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಅಲ್ಲದೇ ವಿದ್ಯುತ್ ಬಿಲ್ ಕೂಡ ಅಧಿಕವಾಗುತ್ತದೆ.
ಇದನ್ನೂ ಓದಿ : Electricity bill: ಮನೆಯಲ್ಲಿ ಜಸ್ಟ್ 299 ರೂ.ನ ಈ ಸಾಧನ ಅಳವಡಿಸಿದ್ರೆ ಜೀವಮಾನಪೂರ್ತಿ ಕರೆಂಟ್ ಉಚಿತ! ಬಿಲ್ ಬರೋದೇ ಇಲ್ಲ
4. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಎಸಿಗಳು ಸ್ಲೀಪ್ ಮೋಡ್ ವೈಶಿಷ್ಟ್ಯದೊಂದಿಗೆ ಬರುತ್ತವೆ. ಇದರಲ್ಲಿ ತಾಪಮಾನ ಮತ್ತು ತೇವಾಂಶವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸಲಾಗುತ್ತದೆ. ಈ ಮೂಲಕ ಶೇ.36ರಷ್ಟು ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆ.
5. ಸ್ವಲ್ಪ ಹೊತ್ತು AC ಬಳಸಿ, ನಂತರ ಫ್ಯಾನ್ ಬಳಸಿದಾಗ, ಅದು ಕೋಣೆಯ ಪ್ರತಿಯೊಂದು ಮೂಲೆಗೂ AC ಗಾಳಿಯನ್ನು ಒಯ್ಯುತ್ತದೆ. ಈ ಮೂಲಕ ಇಡೀ ಕೋಣೆಯನ್ನು ತಂಪಾಗಿರಿಸುತ್ತದೆ. ಇದರಿಂದ ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.