Vaccination Status Of Potential Love Match: ಆನ್ಲೈನ್ ಪ್ರೀತಿಯ (Online Love) ಹುಟುಕಾಟ ನಡೆಸಿ ಡೇಟಿಂಗ್ ನಡೆಸುವವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ಡೇಟಿಂಗ್ ಸಮಯದಲ್ಲಿ ಕೊರೊನಾ (Coronavirus)ಅಪಾಯದಿಂದ ಆನ್ಲೈನ್ ಡೇಟಿಂಗ್ ಹುಡುಕಾಟ ನಡೆಸುವವರನ್ನು ರಕ್ಷಿಸಲು ಕೆಲ ಆಪ್ ಗಳು ಹೊಸ ವಿಧಾನವನ್ನು ಕಂಡುಕೊಂಡಿವೆ. ಬ್ರಿಟನ್ ನಲ್ಲಿ Tinder ಹಾಗೂ Hinge ನಂತಹ ಆಪ್ ಗಳು ಈ ಹೊಸ ಸೌಲಭ್ಯವನ್ನು ಆರಂಭಿಸಿವೆ. ಇದರ ಅಡಿಯಲ್ಲಿ ಜನರು ತಮ್ಮ ಸಂಭಾವ್ಯ ಸಂಗಾತಿ ಕೊರೊನಾ ವೈರಸ್ ನಿಂದ ಪಾರಾಗಲು ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ತಿಳಿಯಲಿದೆ (Vaccination Status Of Potential Love Match). ಇಂತಹ ಮಾಹಿತಿ ಆಪ್ ಜೊತೆಗೆ ಹಂಚಿಕೊಳ್ಳುವ ಬಳಕೆದಾರರಿಗೆ ಇನ್-ಆಪ್ ಬೋನಸ್ ಕೂಡ ಸಿಗಲಿದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆ ಸ್ವಇಚ್ಚೆಯ ಆಧಾರದ ಮೇಲಿರಲಿದೆ. ಇದಕ್ಕಾಗಿ ಯಾವುದೇ ರೀತಿಯ ವೆರಿಫಿಕೆಶನ್ ಪ್ರಕ್ರಿಯೆ ಇರುವುದಿಲ್ಲ. ಡೇಟಿಂಗ್ ಪ್ಲಾಟ್ಫಾರ್ಮ್ (Dating Platform) ಮೇಲೆ ಜನರಿಗೆ ಪ್ರೊಫೈಲ್ ಬ್ಯಾಜ್(Profile Badge) ನೀಡಲಾಗುವುದು ಮತ್ತು ಪ್ಲಾಟ್ ಫಾರ್ಮ್ ಮೇಲಿರುವ ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆಯೇ ಅಥವಾ ಇಲ್ಲ ಎಂಬುದು ಗೊತ್ತಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ -Relationship: ತಾಯಿ ಹಾಗೂ ಪತ್ನಿಯ ನಡುವೆ ಪುರುಷನ ಮೇಲೆ ಯಾರ ಹಕ್ಕು ಜಾಸ್ತಿ?


ಇದಲ್ಲದೆ Tinder ಹಾಗೂ Muzmatch ಗಳಂತಹ ಕೆಲ ಆಪ್ ಗಳು ತಮ್ಮ ಆಪ್ ಬಳಕೆದಾರರಲ್ಲಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ಮುಂದಾಗಿವೆ. ತನ್ಮೂಲಕ ವ್ಯಾಕ್ಸಿನೇಷನ್ ಗೆ ಸಂಬಂಧಿಸಿದ ಮಾಹಿತಿ ಕೂಡ ನೀಡಲಾಗುವುದು. ಇದಲ್ಲದೆ Bumble ಕೂಡ ಕೊರೊನಾಗೆ ಸಂಬಂಧಿಸಿದಂತೆ ಜನರ ಆದ್ಯತೆಗಳನ್ನೂ ಕೂಡ ಕೋರುತ್ತಿದೆ. ಇದಲ್ಲದೆ ಮಾಸ್ಕ್(Mask),ವ್ಯಾಕ್ಸಿನೆಶನ್ (Vaccination) ಹಾಗೂ ಸೋಸಿಯಲ್ ಡಿಸ್ಟೆನ್ಸಿಂಗ್ (Social Distencing) ಕುರಿತು ಅವರ ಅಭಿಪ್ರಾಯ ಎಂದು ಎಂಬುದನ್ನು ಕೂಡ ಕೇಳಲಾಗುತ್ತಿದೆ. ಉದಾಹರಣೆಗೆ ಬಳಕೆದಾರರು ತಾವು ಭೇಟಿಯಾಗುವ ಸಂಗಾತಿಯನ್ನು ಇಂಡೋರ್ ನಲ್ಲಿ (Indoor Dating) ಭೇಟಿಯಾಗಲು (Relationship) ಬಯಸುತ್ತಾರೆಯೋ ಅಥವಾ ಔಟ್ ಡೋರ್ (Outdoor Dating) ನಲ್ಲಿ? ಎಂಬ ಪ್ರಶ್ನೆಯನ್ನೂ ಕೂಡ ಕೇಳಲಾಗುತ್ತಿದೆ. ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಮೀಕ್ಷೆಯ ಪ್ರಕಾರ, ಜನರು ವ್ಯಾಕ್ಸಿನ್ ಹಾಕಿಸಿಕೊಂಡವರ ಜೊತೆಗೆ ಮಾತ್ರ ಡೇಟಿಂಗ್ ನಡೆಸಲು ಸಿದ್ಧರಿರುವ ಸಂಗತಿ ಬೆಳಕಿಗೆ ಬಂದಿತ್ತು.


ಇದನ್ನೂ ಓದಿ-ಲವ್ ಲೈಫ್ ಮೇಲೂ ಚುನಾವಣೆಗಳು ಪ್ರಭಾವ ಬೀರುತ್ತವಂತೆ!


ಇದರಿಂದ ಜನರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆ ಸಿಗಲಿದೆ ಎಂಬುದು ಬ್ರಿಟಿಶ್ ಸರ್ಕಾರದ (British Government)ಅಭಿಮತ. ಅದರಲ್ಲೂ ವಿಶೇಷವಾಗಿ ಯುವಕರನ್ನು ಕೊರೊನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.  ಈ ಕುರಿತು ನಡೆಸಲಾದ ಸಮೀಕ್ಷೆಯಲ್ಲಿ ಶೇ.31 ರಷ್ಟು ಜನರು ಕೇವಲ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರ ಜೊತೆಗೆ ಮಾತ್ರ ಡೇಟಿಂಗ್ (Dating) ನಡೆಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಇನ್ನೊಂದೆಡೆ ಶೇ.28 ರಷ್ಟು ಜನರು ತಾವು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳದ ಹೊರತು ಡೇಟಿಂಗ್ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ Bumble ಯುರೋಪ್ ವಿಭಾಗದ ವೈಸ್ ಪ್ರೆಸಿಡೆಂಟ್ ನಾವೊಮಿ ವಾಕ್ ಲ್ಯಾಂಡ್, "1/3 ರಷ್ಟು ಜನರ ಮನಸ್ಸಿನಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಏನಾದರು ನಡೆದಿರುತ್ತದೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಡೇಟ್ ಗೆ ಸಂಬಂಧಿಸಿದಂತೆ ಕಂಫರ್ಟೇಬಲ್ ವಾತಾವರಣ ನಿರ್ಮಿಸುವುದು ಅವಶ್ಯಕ" ಎಂದಿದ್ದಾರೆ.


ಇದನ್ನೂ ಓದಿ- Sleeping Pattern: ಮಲಗುವ ವಿಧಾನ ಕೂಡ ಸಂಗಾತಿಗಳ Love Life ಮೇಲೆ ಪ್ರಭಾವ ಬೀರುತ್ತೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.