ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚುನಾವಣಾ ಕಣ ರಂಗೇರತೊಡಗಿದೆ. ಎಲ್ಲೆಂದರಲ್ಲಿ ಚುನಾವಣೆಗಳ ಕುರಿತು ಚರ್ಚೆ ನಡೆಯುತ್ತಿವೆ. ಈ ನಡುವೆ ಡೇಟಿಂಗ್ ಸೇವೆ ಒದಗಿಸುವ ಓಕೆಕ್ಯೂಪಿಡ್ ಕೂಡ ತನ್ನ ಬಳಕೆದಾರರ ಪಾಲಿಟಿಕಲ್ ಅಭಿಪ್ರಾಯವನ್ನು ಹಂಚಿಕೊಂಡಿದೆ. ಇದರಲ್ಲಿ ಹೇಗೆ ಚುನಾವಣೆಗಳು ಅವರ ಲವ್ ಲೈಫ್ ಹಾಗೂ ನಿತ್ಯದ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಹೇಳಲಾಗಿದೆ. ಇದರಲ್ಲಿ ಆಪ್ ಬಳಕೆದಾರರು ತುಂಬಾ ಸ್ವಾರಸ್ಯಕರ ಉತ್ತರಗಳನ್ನು ನೀಡಿದ್ದಾರೆ.
ಈ ಡೇಟಿಂಗ್ ಆಪ್ ಪ್ರಕಾರ ಆಪ್ ನ ಒಟ್ಟು ಬಳಕೆದಾರರ ಪೈಕಿ ಶೇ.82ರಷ್ಟು ಬಳಕೆದಾರರ ಪಾಲಿಗೆ ಚುನಾವಣೆಗಳು ತುಂಬಾ ಮಹತ್ವ ಪಡೆದುಕೊಂಡಿದೆ ಎನ್ನಲಾಗಿದೆ. ಶೇ.14 ರಷ್ಟು ಬಳಕೆದಾರರ ಪಾಲಿಗೆ ಚುನಾವಣೆಗಳು ಯಾವುದೇ ವಿಶೇಷ ಮಹತ್ವ ಪಡೆದುಕೊಂಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿ ಕುರಿತು ಹೇಳುವುದಾದರೆ ಇಲ್ಲಿನ ಶೇ.82ರಷ್ಟು ಆಪ್ ಬಳಕೆದಾರರು ಚುನಾವಣೆಗಳ ಕುರಿತು ಅತ್ಯಂತ ಉತ್ಸುಕರಾಗಿದ್ದು, ಚುನಾವಣೆಗಳು ಅವರ ಪಾಲಿಗೆ ತುಂಬಾ ಮಹತ್ವಪಡೆದುಕೊಂಡಿವೆ ಎಂದಿದ್ದಾರೆ. ಇದರಲ್ಲಿ ಶೇ.60 ರಷ್ಟು ಪುರುಷರುಹಾಗೂ ಶೇ 59 ರಷ್ಟು ಮಹಿಳೆಯರು, ಚುನಾವಣೆಗಳಲ್ಲಿ ಮತ ಚಲಾಯಿಸದೇ ಇರುವವರನ್ನು ದಂಡನೆಗೆ ಒಳಪಡಿಸಬೇಕು ಎಂದಿದ್ದಾರೆ. ಆದರೆ, ಶೇ.62ರಷ್ಟು ಜನರು ರಾಜಕೀಯದಲ್ಲಿ ನಡೆಯುವ ವಾದ-ವಿವಾದಗಳಿಗೆ ಒಪ್ಪಿಗೆಯನ್ನು ಸೂಚಿಸಿಲ್ಲ. ಯಾವುದೇ ರಾಜಕೀಯ ವಿಷಯದ ಮೇಲೆ ತಾವು ಜಾಗರೂಕರಾಗಿದ್ದು, ಮನೆಯಲ್ಲಿ ಈ ಕುರಿತು ಚರ್ಚೆ ನಡೆಸುವುದು ತಮಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಇದೀಗ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಾತನೆಗಳಿಗೂ ಕೂಡ ಬಳಕೆದಾರರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶೇ.57ರಷ್ಟು ಪುರುಷರು ಹಾಗೂ ಶೇ.53 ರಷ್ಟು ಮಹಿಳೆಯರು ತಮ್ಮ ಅಧಿಕಾರಕ್ಕಾಗಿ ಮತ್ತು ಸರಿಯಾದ ವಿಷಯಕ್ಕೆ ತಮ್ಮ ಜೀವ ಕೂಡ ಪಣಕ್ಕಿಡಲು ತಾವು ಸಿದ್ಧ ಎಂದಿದ್ದಾರೆ. ಆದರೆ, ಶೇ.43 ರಷ್ಟು ಪುರುಷರು ಹಾಗೂ ಶೇ.37ರಷ್ಟು ಮಹಿಳೆಯರು ಹಿಂಸಾತ್ಮಕ ಪ್ರವೃತ್ತಿ ಇಲ್ಲದ ಎಡ ಅಥವಾ ಬಲಪಂಥೀಯರ ಜೊತೆಗೆ ತಾವು ಡೇಟಿಂಗ್ ನಡೆಸಲು ಸಿದ್ದ ಎಂದು ಹೇಳಿದ್ದಾರೆ.
ಇದೇ ವೇಳೆ ಶೇ.25ರಷ್ಟು ಪುರುಷರು ಹಾಗೂ ಶೇ.29 ರಷ್ಟು ಮಹಿಳೆಯರು ತಾವು ಈ ಕುರಿತು ಎಂದಿಗೂ ಯೋಚಿಸಿಯೇ ಇಲ್ಲ ಎಂದು ಹೇಳಿದ್ದರೆ. ಇನ್ನೊಂದೆಡೆ ಡೇಟಿಂಗ್ ಗಾಗಿ ಪಾಲಿಟಿಕಲ್ ದೃಷ್ಟಿಕೋನ, ಗುಡ್ ಸೆಕ್ಸ್ ಅಥವಾ ಕಾಮನ್ ಹಾಬಿಯಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆಗೆ ಉತ್ತರಿಸಿರುವ ಶೆ. 84ರಷ್ಟು ಪುರುಷರು ಹಾಗೂ ಶೇ.75ರಷ್ಟು ಮಹಿಳೆಯರು ಸೆಕ್ಸ್ ಉತ್ತಮ ಎಂದು ಹೇಳಿದ್ದಾರೆ.