ನವದೆಹಲಿ : ಇತ್ತೀಚಿನ  ದಿನಗಳಲ್ಲಿ ಮೊಬೈಲ್ ಫೋನ್‌ಗಳಲ್ಲಿ ಕಾಲ್ ಡ್ರಾಪ್ ಸಮಸ್ಯೆ ಸಾಮಾನ್ಯವಾಗಿದೆ. ನೆಟ್ ವರ್ಕ್ (Network) ಸಮಸ್ಯೆಯಿಂದಾಗಿ ಇದ್ದಕ್ಕಿದ್ದಂತೆ ಫೋನ್ ಡಿಸ್ ಕನೆಕ್ಟ್ ಆಗಿ ಬಿಡುತ್ತದೆ. ಮುಖ್ಯ ಕರೆಗಳು  ಹೀಗಾದಾಗ ಗ್ರಾಹಕರು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಇದೀಗ  Vi   ಈ ಸಮಸ್ಯೆಗೆ ಪರಿಹಾರ ತಂದಿದೆ.   Vi ಬಳಕೆದಾರರು ಮೊಬೈಲ್ ಸಿಗ್ನಲ್ (Mobile signal) ಇಲ್ಲದೆಯೂ ಕರೆ ಮಾಡುವುದು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಆರಂಭವಾಗಿದೆ ವೈಫೈ ಕರೆ ಸೇವೆ : 
Vi ತನ್ನ ವೈಫೈ ಕರೆ ಸೇವೆಯನ್ನು ದೆಹಲಿಯಲ್ಲಿ ಪ್ರಾರಂಭಿಸಿದೆ. ಈ ಸಹಾಯದಿಂದ  ಗ್ರಾಹಕರು ಮೊಬೈಲ್ ಸಿಗ್ನಲ್ (Mobile signal) ಇಲ್ಲದೆ ಹೋದರೂ ಫೋನ್‌ನಲ್ಲಿ ಮಾತನಾಡುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : BSNL ಹೊಸ ಪ್ಲಾನ್ ; ಭರ್ಜರಿ ರಿಯಾಯಿತಿ ಜೊತೆಗೆ ಸಿಗಲಿದೆ ಫುಲ್ entertainment


ಮಹಾರಾಷ್ಟ್ರ , ಗೋವಾದಲ್ಲೂ ಅಸ್ತಿತ್ವದಲ್ಲಿದೆ ಸೇವೆ :
ಮಾಹಿತಿಯ ಪ್ರಕಾರ, Vi ಈಗಾಗಲೇ ಮಹಾರಾಷ್ಟ್ರ (Maharastra) ಮತ್ತು ಗೋವಾದಲ್ಲಿ ಈ ವೈಫೈ ಸೇವೆಯನ್ನು ಪ್ರಾರಂಭಿಸಿತ್ತು. ಇದಲ್ಲದೆ ಈ ಸೇವೆಯನ್ನು ಕಳೆದ ವರ್ಷ ಕೋಲ್ಕತ್ತಾದ ಲ್ಲೂ ಪ್ರಾರಂಭಿಸಲಾಯಿತು. ಈಗ ದೆಹಲಿಯಲ್ಲಿ (Delhi) ವಾಸಿಸುವ ಬಳಕೆದಾರರಿಗಾಗಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ.


ವೈಫೈ ಕರೆ ಮಾಡುವ ಸೇವೆ ಹೇಗೆ ಕಾರ್ಯನಿರ್ವಹಿಸುತ್ತದೆ?
ವೈಫೈ ಕರೆ ಸೇವೆಗಾಗಿ ವಿಶೇಷ ಅಪ್ಲಿಕೇಶನ್ ಡೌನ್‌ಲೋಡ್ (Download) ಮಾಡಬೇಕಾಗಿದೆ. ಇದರ ನಂತರ, ಮೊಬೈಲ್ ಸಿಗ್ನಲ್ ಇಲ್ಲದೆ ವೈಫೈ ಸಹಾಯದಿಂದ ಕರೆಗಳನ್ನು ಮಾಡಬಹುದು. ಈ ಸೇವೆಗೆ ಸೆಲ್ಯುಲಾರ್ ನೆಟ್‌ವರ್ಕ್ ಅಗತ್ಯವಿಲ್ಲ. ವೈ-ಫೈ ಕರೆ ಮಾಡಲು ಹ್ಯಾಂಡ್‌ಸೆಟ್‌ನಲ್ಲಿ ಸಾಫ್ಟ್‌ವೇರ್ (Software) ಹೊಂದಾಣಿಕೆ ಅಗತ್ಯವಿದೆ.


ಇದನ್ನೂ ಓದಿ : PUB-G New State Launched: ಗೂಗಲ್ ಪ್ಲೇ ಸ್ಟೋರ್‌ನಲ್ಲಿ PUB-G New State ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ವಿವರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.