ನವದೆಹಲಿ : ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ. ಈ ನಡುವೆ, ಜಿಯೋ ಹೊಸ ಯೋಜನೆಗಳನ್ನು (Jio plan) ಪ್ರಾರಂಭಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆದರೆ, ಇತರ ಕಂಪನಿಗಳು ಸಹ ಹಿಂದೆ ಇಲ್ಲ. ವೊಡಾಫೋನ್ ಐಡಿಯಾ (Vi Recharge plan) ಅದ್ಭುತವಾದ ಪ್ಲಾನ್ ಅನ್ನು ತಂದಿದ್ದು, ಏರ್ಟೆಲ್ ಮತ್ತು ಜಿಯೋಗೆ ಸರಿಯಾಗಿಯೇ ಟಕ್ಕರ್ ನೀಡುತ್ತಿದೆ. ಕೇವಲ 300 ರೂ.ಗಳ ರೀಚಾರ್ಜ್ ಮಾಡಿದರೆ, ದಿನಕ್ಕೆ 4 GB ಡೇಟಾ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ವೊಡಾಫೋನ್-ಐಡಿಯಾದ 269 ರೂ. ಪ್ಲಾನ್ : 
ವೊಡಾಫೋನ್-ಐಡಿಯಾದ  (Vodafone-idea) 269ರೂ ಪ್ಲಾನ್ ನ ವ್ಯಾಲಿಡಿಟಿ 56 ದಿನಗಳವರೆಗೆ ಇರಲಿವೆ. ಈ ಯೋಜನೆಯಲ್ಲಿ, ಪ್ರತಿ ದಿನ 4 GB ಡೇಟಾ ಸಿಗಲಿದೆ. ಜೊತೆಗೆ ಯಾವುದೇ ನೆಟ್‌ವರ್ಕ್‌ ಗೆ ಅನ್ಲಿಮಿಟೆಡ್ ಕರೆಗಳು ಮತ್ತು 600 SMS ಗಳು ಸಿಗಲಿವೆ. ಅಂದರೆ, ಈ ಪ್ಲಾನ್ ನಲ್ಲಿ  224 GB ಡೇಟಾವನ್ನು ಪಡೆಯಬಹುದು. ಇದರ ಹೊರತಾಗಿ, Vi Movies ಮತ್ತು TV Basic  ಆಕ್ಸೆಸ್ ಕೂಡಾ ಇರುತ್ತದೆ. ಇದರಲ್ಲಿ ಬಳಕೆದಾರರು ಲೈವ್ ಟಿವಿ, ನ್ಯೂಸ್ , ಚಲನಚಿತ್ರಗಳು, ಒರಿಜಿನಲ್ ಶೋ ಗಳನ್ನು ವೀಕ್ಷಿಸಬಹುದು.


ಇದನ್ನೂ ಓದಿ : Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ


ಏರ್ಟೆಲ್ ನ 249 ರೂ ಪ್ಲಾನ್ : 
ಏರ್ಟೆಲ್ ನ (Airtel) 249 ರೂ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಈ ಪ್ಲಾನ್ ನಲ್ಲಿ ದಿನಕ್ಕೆ 1.5 GB ಡೇಟಾ ಸಿಗಲಿದೆ. ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳು ಲಭ್ಯವಿರುತ್ತವೆ. ಅಂದರೆ, ಈ ಪ್ಲಾನ್ ನಲ್ಲಿ ಒಟ್ಟು 42 GB ಡೇಟಾವನ್ನು ಪಡೆಯಬಹುದು. ಈ  Mobile Edition Free Trial ಗೆ ಆಕ್ಸೆಸ್ ಸಿಗುತ್ತದೆ. 


ಜಿಯೋದ 249 ರೂ.  ಪ್ಲಾನ್ : 
ಜಿಯೋದ (Jio) 249 ರೂ . ಪ್ಲಾನ್‌ನ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಈ ಪ್ಲಾನ್ ನಲ್ಲಿ ದಿನಕ್ಕೆ 2 GB ಡೇಟಾ ಸಿಗುತ್ತದೆ. ಇದರ ಜೊತೆಗೆ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಗಳು ಲಭ್ಯವಿರುತ್ತವೆ. ಅಂದರೆ, ಈ ಯೋಜನೆಯಲ್ಲಿ ಒಟ್ಟು 56 GB ಡೇಟಾ ಸಿಗುತ್ತದೆ. ಈ ಪ್ಲಾನ್ ನೊಂದಿಗೆ ಜಿಯೋ ಆಪ್‌ಗಳ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ.


ಇದನ್ನೂ ಓದಿ : Vivo ತರುತ್ತಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ Smartphone, ಬೆಲೆ ಮತ್ತು ವೈಶಿಷ್ಯ ತಿಳಿಯಿರಿ


ಜಿಯೋ ಮತ್ತು ಏರ್‌ಟೆಲ್‌ನ ಪ್ಲಾನ್ ರೂ 20 ರಷ್ಟು ಅಗ್ಗವಾಗಿದೆ. ಆದರೆ ವೊಡಾಫೋನ್-ಐಡಿಯಾ 20 ರೂಪಾಯಿ ಹೆಚ್ಚು ತೆಗೆದುಕೊಂಡರೂ  ಹೆಚ್ಚಿನ ಡೇಟಾವನ್ನು ನೀಡುತ್ತಿದೆ. ಜಿಯೋ ದಿನಕ್ಕೆ 2 ಜಿಬಿ ಡೇಟಾವನ್ನು ನೀಡಿದರೆ, ಏರ್‌ಟೆಲ್ ದಿನಕ್ಕೆ 1.5 ಜಿಬಿ ಡೇಟಾವನ್ನು ನೀಡುತ್ತಿದೆ.  ವೊಡಾಫೋನ್-ಐಡಿಯಾದ ಪ್ಲಾನ್ ನಲ್ಲಿ (Vi recharge plan) 56 ದಿನ ವ್ಯಾಲಿಡಿಟಿ ಇರುತ್ತದೆ. ಜಿಯೋ ಮತ್ತು ಏರ್ ಟೆಲ್ ನ ಈ ಪ್ಲಾನನ್ ವ್ಯಾಲಿಡಿಟಿ  28 ದಿನಗಳವರೆಗೆ ಇರಲಿದೆ. ಹಾಗಾಗಿ ಜಿಯೋ ಮತ್ತು ಏರ್ ಟೆಲ್  ಪ್ಲಾನ್ ಗೆ ಹೋಲಿಸಿದರೆ ವೊಡಾಫೋನ್ ಐಡಿಯಾ ಯೋಜನೆ ಅತ್ಯುತ್ತಮ ಎಂದು ಹೇಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ