Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ

Xiaomi Redmi 10 features revealed: Xiaomi ಆಕಸ್ಮಿಕವಾಗಿ ತನ್ನ ವೆಬ್‌ಸೈಟ್‌ನಲ್ಲಿ  (via Caschy's Blog) ಫೋನ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ.

Written by - Yashaswini V | Last Updated : Aug 17, 2021, 09:40 AM IST
  • Redmi 10 ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳನ್ನು ಆಕಸ್ಮಿಕವಾಗಿ ಸಿಂಗಾಪುರ ಮೂಲದ ಚಿಲ್ಲರೆ ವ್ಯಾಪಾರಿಗಳು ಲೀಕ್ ಮಾಡಿದ್ದಾರೆ
  • ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಹೆಲಿಯೋ G88 SoC ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ
  • ಪಂಚ್-ಹೋಲ್ ಡಿಸ್‌ಪ್ಲೇ ಬೆಂಬಲವನ್ನು ಫೋನ್‌ನಲ್ಲಿ ನೀಡಲಾಗಿದೆ
Redmi 10 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು ಸೋರಿಕೆ, ಇದರ ವಿಶೇಷತೆ ಇಲ್ಲಿದೆ title=
Redmi 10 Features

Xiaomi Redmi 10 features revealed: ಶಿಯೋಮಿಯ ಮುಂಬರುವ ಸ್ಮಾರ್ಟ್‌ಫೋನ್‌ ರೆಡ್ಮಿ 10 ಬಿಡುಗಡೆಗಾಗಿ ಕುತೂಹಲದಿಂದ ಕಾಯಲಾಗುತ್ತಿದೆ. ಆದರೆ ಫೋನ್ ಬಿಡುಗಡೆಗೆ ಮುಂಚೆಯೇ, ಒಂದು ದೊಡ್ಡ ತಪ್ಪು ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ, ಫೋನ್‌ನ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುವ ಮೊದಲೇ ಅದು  ಸೋರಿಕೆಯಾಗಿದೆ. ಬಿಡುಗಡೆಗೂ ಮುನ್ನವೇ ವೈಶಿಷ್ಟ್ಯಗಳ ಸೋರಿಕೆಯಿಂದಾಗಿ ಕಂಪನಿಯು ಸಂದಿಗ್ಧ ಸ್ಥಿತಿಯಲ್ಲಿದೆ. Xiaomi ಆಕಸ್ಮಿಕವಾಗಿ ತನ್ನ ವೆಬ್‌ಸೈಟ್‌ನಲ್ಲಿ  (via Caschy's Blog) ಫೋನ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ.

ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಮತ್ತು ಮೀಡಿಯಾ ಟೆಕ್ ಹೆಲಿಯೋ G88 SoC ಚಿಪ್‌ಸೆಟ್‌ನಿಂದ ಬೆಂಬಲಿತವಾಗಿದೆ. GSMArena ಪ್ರಕಾರ, Redmi 10 ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳನ್ನು ಆಕಸ್ಮಿಕವಾಗಿ ಸಿಂಗಾಪುರ ಮೂಲದ ಚಿಲ್ಲರೆ ವ್ಯಾಪಾರಿಗಳು ಲೀಕ್ ಮಾಡಿದ್ದಾರೆ. ಫೋನ್ 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಪಂಚ್-ಹೋಲ್ ಡಿಸ್‌ಪ್ಲೇ ಬೆಂಬಲವನ್ನು ಫೋನ್‌ನಲ್ಲಿ ನೀಡಲಾಗಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಅನ್ನು ಸಾಧನದಲ್ಲಿ ಸ್ಕ್ರೀನ್ ರಕ್ಷಣೆಗಾಗಿ ನೀಡಲಾಗಿದೆ.

ಇದನ್ನೂ ಓದಿ- WhatsAppನಲ್ಲಿನ ಹೊಸ ಹಗರಣವು ನಿಮ್ಮ ಬ್ಯಾಂಕ್ ಖಾತೆಯನ್ನೇ ಖಾಲಿ ಮಾಡುತ್ತೆ ಹುಷಾರ್!

ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳು ಫೋನ್ ಅನ್ನು ವಿಶೇಷವಾಗಿಸುತ್ತದೆ:
ಫೋನಿನ ದೇಹವನ್ನು ಪಾಲಿಕಾರ್ಬೊನೇಟ್ ನಿಂದ ತಯಾರಿಸಲಾಗಿದೆ. ಫೋನಿನ (Smartphone) ಕ್ಯಾಮರಾದ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳು, ಮುಂಭಾಗದಲ್ಲಿ 50 MP ಸೆನ್ಸಾರ್ ಇರುತ್ತದೆ. 8 ಎಂಪಿ ಕ್ಯಾಮೆರಾದಲ್ಲಿ ಮಧ್ಯದಲ್ಲಿ ಪಂಚ್ ಹೋಲ್ ಇದೆ ಮತ್ತು ಪ್ಯಾನಲ್‌ನ ಕೆಳಭಾಗದಲ್ಲಿ ಯಾವುದೇ ಫಿಂಗರ್‌ಪ್ರಿಂಟ್ ಇಲ್ಲ. ಸಾಧನವು 6 ಜಿಬಿ RAM ಮತ್ತು 128 ಜಿಬಿ ಆಂತರಿಕ ಸ್ಟೋರೇಜ್ ಬೆಂಬಲದೊಂದಿಗೆ ಬರುತ್ತದೆ. ಇದು 2.0GHz ನಲ್ಲಿ ಎರಡು ಕಾರ್ಟೆಕ್ಸ್-A75 ಯುನಿಟ್‌ಗಳನ್ನು ಒಳಗೊಂಡಿರುವ ಆಕ್ಟಾ-ಕೋರ್ CPU ಅನ್ನು ಹೊಂದಿದೆ.

ಇದನ್ನೂ ಓದಿ- Vivo ತರುತ್ತಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ Smartphone, ಬೆಲೆ ಮತ್ತು ವೈಶಿಷ್ಯ ತಿಳಿಯಿರಿ

ಫೋನ್ ಅನ್ನು ಮೂರು ಬಣ್ಣಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ:
ಸಾಧನವು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಬೆಂಬಲದೊಂದಿಗೆ ಬರುತ್ತದೆ. ಮುಂಭಾಗವು 6.5-ಇಂಚಿನ LCD ಯೊಂದಿಗೆ ಪೂರ್ಣ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಇತರ ವಿಶೇಷಣಗಳು ಆಂಡ್ರಾಯ್ಡ್ 11 ರ ಮೇಲೆ MIUI 12, 18W ಫಾಸ್ಟ್ ಚಾರ್ಜಿಂಗ್, 5,000  mAh ಬ್ಯಾಟರಿ ಮತ್ತು 3.5 ಎಂಎಂ ಆಡಿಯೋ ಜ್ಯಾಕ್ ಅನ್ನು ಒಳಗೊಂಡಿವೆ. ಕನೆಕ್ಟಿವಿಟಿ ಬಗ್ಗೆ ಹೇಳುವುದಾದರೆ, ಫೋನ್ ಡ್ಯುಯಲ್-ಸೀಮ್, 4 ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಯುಎಸ್ಬಿ ಟೈಪ್-ಸಿ ಗೆ ಬೆಂಬಲವನ್ನು ಹೊಂದಿದೆ. ಬಿಡುಗಡೆಯ ದಿನಾಂಕ ತಿಳಿದಿಲ್ಲವಾದರೂ, ಫೋನ್ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದ್ದು ಅದು ಗ್ರೇ, ವೈಟ್ ಮತ್ತು ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News